Last Updated:
ಸೂರಪ್ ಸ್ಟಾರ್ ರಜನಿಕಾಂತ್ ತಮ್ಮ ಧರ್ಮನ್ ಚಿತ್ರದ ಒಂದು ಸತ್ಯ ಬಿಚ್ಚಿಟ್ಟಿದ್ದಾರೆ. ಈ ಚಿತ್ರಕ್ಕೆ ಒಬ್ಬರಲ್ಲ, ಮೂವರು ನಿರ್ದೇಶಕರನ್ನ ಟ್ರೈ ಮಾಡಿದ್ದೇವೆ. ಆದರೆ, ನಾಲ್ಕನೆಯವರು ಫೈನಲ್ ಆಗಿದ್ದಾರೆ ಅಂತಲೂ ಹೇಳಿದ್ದಾರೆ. ಆ ಮೂವರು ಯಾರು ಅನ್ನೋದನ್ನು ರಜನಿಕಾಂತ್ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅಭಿನಯದ ಧರ್ಮನ್ ಚಿತ್ರ (Dharman Movie) ಲಾಂಚ್ ಆಗಿದೆ. ಕಮಲ್ ಹಾಸನ್ ನಿರ್ಮಾಣದ ಈ ಚಿತ್ರಕ್ಕೆ ಧರ್ಮನ್ (Dharman) ಅಂತ ಹೆಸರಿಟ್ಟಿದ್ದಾರೆ. ಈ ಹಿಂದಿನ ರಜಿಕಾಂತ್ ಅವರ ಎರಡು ಚಿತ್ರಗಳ ಟೈಟಲ್ ಅಲ್ಲಿ ಧರ್ಮ ಅನ್ನುವ ಪದಗಳನ್ನ ಬಳಕೆ ಮಾಡಿದ್ದಾರೆ. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನು ಸಂಬಂಧ ಇದ್ದಂತೆ ಇಲ್ಲ. ಆದರೆ, ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಒಬ್ಬ ಡಾಕ್ಟರ್ ಆಗಿದ್ದಾರೆ. ಡೆಡ್ಲಿ ಡಾಕ್ಟರ್ ಅನ್ನೋದನ್ನ ಚಿತ್ರದ ಟ್ಯಾಗ್ ಲೈನ್ ಹೇಳುತ್ತಿದೆ. ಈ ಚಿತ್ರಕ್ಕೆ ಚೆನ್ನೈಯಲ್ಲಿ ಮುಹೂರ್ತ ಆಗಿದೆ. ಚಿತ್ರದ ಟೈಟಲ್ ಸೇರಿದಂತೆ ಇತರ ವಿಚಾರಗಳು ರಿವೀಲ್ ಆಗಿವೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಶ್ವಥ್ ಮಾರಿಮುತ್ತು ಡೈರೆಕ್ಷನ್
ಆದರೆ, ಇವರು ಮತ್ತೊಮ್ಮೆ ಈಗ ಧರ್ಮನ್ ಮೂಲಕ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಾಶಿ ಖನ್ನಾ ಕೂಡ ಈ ಸಿನಿಮಾದಲ್ಲಿದ್ದಾರೆ. ಈ ಚಿತ್ರಕ್ಕೆ ಮೂರು ಡೈರೆಕ್ಟರ್ಗಳು ಚೇಂಜ್ ಆಗಿದ್ದಾರೆ. ಕೆ.ಎಸ್.ರವಿಕುಮಾರ್ ಈ ಚಿತ್ರಕ್ಕೆ ಮೊದಲ ಆಯ್ಕೆ ಆಗಿದ್ದರು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವೇ ಆಗ್ಲಿಲ್ಲ ಅಂತ ರಜನಿಕಾಂತ್ ಹೇಳಿಕೊಂಡಿದ್ದಾರೆ.
ಈ ಚಿತ್ರಕ್ಕೆ ಸುಂದರ್ ಸಿ ಅವರು ಈ ಚಿತ್ರವನ್ನ ಡೈರೆಕ್ಷನ್ ಮಾಡ್ಬೇಕಿತ್ತು. ಆದರೆ, ಇವರು ಬೇರೆ ಚಿತ್ರಗಳು ಇದ್ದ ಕಾರಣ ಈ ಚಿತ್ರ ಮಾಡೋಕೆ ಆಗ್ಲಿಲ್ಲ.
ಕೊನೆಗೆ ಈ ಚಿತ್ರವನ್ನ ಅಶ್ವಥ್ ಮಾರಿಮುತ್ತು ಡೈರೆಕ್ಷನ್ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ನನಗೆ ಸಿಮ್ರನ್ ಜೋಡಿ ಆಗಿದ್ದಾರೆ. ನಮ್ಮ ಜೋಡಿಯನ್ನ ಜನ ಮೆಚ್ಚಿಕೊಂಡಿದ್ದರು. ಈ ಚಿತ್ರದ ಮೂಲಕ ಮತ್ತೆ ಬರ್ತಿದ್ದೇವೆ ಅಂತಲೇ ರಜನಿಕಾಂತ್ ಹೇಳಿಕೊಂಡಿದ್ದಾರೆ.
ಚೆನ್ನೈಯಲ್ಲಿ ಈ ಚಿತ್ರದ ಮುಹೂರ್ತ ಆಗಿದೆ. ಕಮಲ್ ಹಾಸನ್ ಈ ಚಿತ್ರವನ್ನ ತಮ್ಮ ರಾಜ್ ಕಮಲ್ ನಿರ್ಮಾಣ ಸಂಸ್ಥೆ ಮೂಲಕವೇ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಕೊಡುತ್ತಿದ್ದಾರೆ.
ಡೆಡ್ಲಿ ಡಾಕ್ಟರ್ ಟ್ಯಾಗ್ ಲೈನ್
ರಜನಿಕಾಂತ್ ಅಭಿನಯದ ಎರಡು ಚಿತ್ರಗಳಲ್ಲಿ ಧರ್ಮ ಅನ್ನುವ ಪದ ಇದೆ. 1991 ರಲ್ಲಿ ಧರ್ಮ ದೊರೈ ಅನ್ನುವ ಚಿತ್ರ ಬಂದಿತ್ತು. ಈ ಚಿತ್ರದ ಟೈಟಲ್ ಅಲ್ಲೂ ಧರ್ಮ ಅನ್ನುವ ಪದ ಇದೆ.
ಈ ಧರ್ಮನ್ ಚಿತ್ರಕ್ಕೆ ಒಂದು ಟ್ಯಾಗ್ ಲೈನ್ ಕೂಡ ಇದೆ. ಡೆಡ್ಲಿ ಡಾಕ್ಟರ್ ಅನ್ನೋದೇ ಆ ಟ್ಯಾಗ್ ಲೈನ್ ಆಗಿದೆ. ಚಿತ್ರದ ಮೊದಲ ಪೋಸ್ಟರ್ ನೋಡಿದಾಗಲೇ ತಿಳಿಯುತ್ತದೆ.
ಧರ್ಮನ್ ಚಿತ್ರದಲ್ಲಿ ರಜನಿಕಾಂತ್ ಅವರದ್ದು ರೋಲ್ ಹೇಗಿದೆ ಅನ್ನೋದು ಗೊತ್ತಾಗುತ್ತದೆ. ಆ ರೀತಿನೇ ಈ ಒಂದು ಪೋಸ್ಟರ್ ಇದೆ. ಈ ಚಿತ್ರದ ಕತೆ ಚೆನ್ನಾಗಿದೆ.
ಈ ಸಿನಿಮಾ ಚೆನ್ನಾಗಿಯೂ ಆಗುತ್ತದೆ ಅನ್ನುವ ನಂಬಿಕೆ ರಜನಿಕಾಂತ್ ಅವರಿಗೂ ಇದೆ. ಕಮಲ್ ಹಾಸನ್ ಅವರಿಗೂ ಇದೆ. ಈ ವಿಷಯವನ್ನ ಈ ದಿಗ್ಗಜ ಕಲಾವಿದರು ಚಿತ್ರದ ಮುಹೂರ್ತದಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 24, 2026 12:24 PM IST













