Last Updated:
ಭರತ್‌ಪುರದ ನಾಡ್‌ಬಾಯಿ ಪುರಸಭೆಯ ವಾರ್ಡ್ ಸಂಖ್ಯೆ 6 ರ ಚುನಾವಣಾ ಫಲಿತಾಂಶ ಅತ್ಯಂತ ನಿಕಟ ಸ್ಪರ್ಧೆ ಮತ್ತು ಭಾವನಾತ್ಮಕ ಕಥೆಯಿಂದಾಗಿ ಸುದ್ದಿಯಲ್ಲಿವೆ. ಸ್ವತಂತ್ರ ಅಭ್ಯರ್ಥಿ ಜಗದೀಶ್ ಪ್ರಸಾದ್ ಬಿಜೆಪಿಯ ರಾಮಶರಣ್ ಅವರನ್ನು ಕೇವಲ ಒಂದು ಮತದಿಂದ ಸೋಲಿಸಿದ್ದಾರೆ. ಇದರೊಂದಿಗೆ ಜಗದೀಶ್ ಪ್ರಸಾದ್ ಅವರ ತಾಯಿ ಚುನಾವಣೆಯ ದಿನದಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ಮರುದಿನವೇ ನಿಧನರಾದರು ಎಂದು ವರದಿಯಾಗಿದೆ.
ರಾಜಸ್ಥಾನದ ನಾಗರಿಕ ಚುನಾವಣೆಗಳಲ್ಲಿ (Rajasthan Municipal Election ) ಹಲವಾರು ಫಲಿತಾಂಶಗಳು ಗಮನ ಸೆಳೆದಿವೆ. ಅವುಗಳಲ್ಲಿ ಕೆಲವು ರಾಜಕೀಯಕ್ಕಿಂತಲೂ ಭಾವನಾತ್ಮಕವಾಗಿಯೂ ಸುದ್ದಿಯಾಗಿದೆ. ಭರತ್‌ಪುರ ಜಿಲ್ಲೆಯ ನಾಡ್‌ಬಾಯಿ ಪುರಸಭೆಯ ವಾರ್ಡ್ ಸಂಖ್ಯೆ 6ರ ಫಲಿತಾಂಶ ಅಂತಹದೇ ಒಂದು ಕಥೆಯಾಗಿದೆ. ಇಲ್ಲಿ ಗೆಲುವು ಮತ್ತು ಸೋಲು ಕೇವಲ ಒಂದು ಮತದ ಅಂತರದಲ್ಲಿತ್ತು. ಸ್ವತಂತ್ರ ಅಭ್ಯರ್ಥಿ ಜಗದೀಶ್ ಪ್ರಸಾದ್ ಬಿಜೆಪಿ ಅಭ್ಯರ್ಥಿ ರಾಮಶರಣ್ ಅವರನ್ನು ಕೇವಲ ಒಂದು ಮತದಿಂದ ಸೋಲಿಸಿದರು.














