Rain Warning: ರಾಜ್ಯದ 17 ಜಿಲ್ಲೆಗಳಿಗೆ ಇಂದು ರಾತ್ರಿ ಮಳೆ; ಈ ಊರುಗಳಲ್ಲಿ ಪ್ರಬಲ ವರ್ಷಧಾರೆ ಖಂಡಿತ, ಬೆಂಗಳೂರಿನ ಸ್ಥಿತಿ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಮಳೆಯ ಎಚ್ಚರಿಕೆ


Last Updated:

KSNDMC ಎಚ್ಚರಿಕೆ, ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ ಇಂದು ತೀವ್ರ ಮಳೆ, ಹಾಸನ, ತುಮಕೂರು, ಮೈಸೂರು ಸೇರಿ ಕೆಲವು ಕಡೆ ಭಾರಿ ಮಳೆ, ಬೆಂಗಳೂರಿನಲ್ಲಿ ಮಾತ್ರ ಸಾಧಾರಣ ಮಳೆ

ಮಳೆಯ ಎಚ್ಚರಿಕೆ
ಮಳೆಯ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ (People) ವರುಣದೇವ ತಣ್ಣನೆಯ, ಆದರೆ ತುಸು ಅಪಾಯಕಾರಿಯಾದ ಸುದ್ದಿಯೊಂದನ್ನು (Dangerous News) ತಂದಿದ್ದಾನೆ! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ. ಇಂದು ದಕ್ಷಿಣ ಒಳನಾಡಿನ ಕಡೆಗಳಲ್ಲಿ ವರುಣನ ರೌದ್ರಾವತಾರ ಶುರುವಾಗಲಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತುರ್ತು ಎಚ್ಚರಿಕೆಯನ್ನು ರವಾನಿಸಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಕಾದಿದೆ ಕಂಟಕ? ಇಲ್ಲಿದೆ ಲಿಸ್ಟ್!

ನೀವು ಹಾಸನ, ಕೋಲಾರ, ತುಮಕೂರು ಅಥವಾ ಮೈಸೂರು ಭಾಗದವರೇ? ಹಾಗಾದರೆ ಇಂದಿನ ನಿಮ್ಮ ಪ್ರಯಾಣದ ಬಗ್ಗೆ ಒಮ್ಮೆ ಯೋಚಿಸಿ! ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ನಕ್ಷೆಯಲ್ಲಿ ದಕ್ಷಿಣ ಕರ್ನಾಟಕದ ಈ ಭಾಗಗಳು ತೀವ್ರ ಮಳೆಯಿಂದ ಬಾಧಿತವಾಗಲಿವೆ. ಈ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ (Heavy Rainfall) ಖಚಿತ ಮುನ್ಸೂಚನೆ ಸಿಕ್ಕಿದೆ. ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಅಪಾಯವಿದ್ದು, ಸಾರ್ವಜನಿಕರು ಮನೆಯಿಂದ ಹೊರಬರುವಾಗ ಛತ್ರಿ ಕೊಂಡೊಯ್ಯುವುದನ್ನು ಮರೆಯಬೇಡಿ!

ಒಟ್ಟಾರೆ ಎಲ್ಲೆಲ್ಲಿ ಮಳೆ?

IMD ಪ್ರಕಾರ ಒಟ್ಟೂ 17 ಜಿಲ್ಲೆಗಳಲ್ಲಿ ಮಳೆಯಾಗಲಿದೆ, ಮತ್ತದು ದಕ್ಷಿಣ ಒಳನಾಡಿನ ಭಾಗವಾಗಿರಲಿದೆ. ಕಲಬುರಗಿ, ರಾಯಚೂರು, ಯಾದಗಿರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಮಂಡ್ಯ, ಕೊಡಗು, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡಕ್ಕೆ ಇಂದು ಒಂದು ತಾಸಲ್ಲಿ ಮಳೆಯಾಗಲಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಕಥೆ ಏನು? ಟ್ರಾಫಿಕ್‌ನಲ್ಲಿ ಮುಳುಗುತ್ತಾ ರಾಜಧಾನಿ?

ಇದನ್ನೂ ಓದಿ: GBA Innovation: ಬೆಂಗಳೂರಿಗೆ ಬಂತು 20-25 ಲಕ್ಷದ ಯಂತ್ರ; ಇನ್ಮೇಲೆ ಓಡಾಡೋಲ್ವಾ ಕಸದ ಗಾಡಿ? ನಗರದ ದೊಡ್ಡ ಸಮಸ್ಯೆಗೆ ಬ್ರೇಕ್!

ಸ್ವಲ್ಪ ಮಳೆ ಬಂದರೆ ಸಾಕು ಕೆರೆಯಂತಾಗುವ ಬೆಂಗಳೂರಿನ ಪರಿಸ್ಥಿತಿ ಇಂದು ಹೇಗಿರಲಿದೆ ಗೊತ್ತಾ? ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ವಲಯಗಳಲ್ಲಿ ಕೇವಲ ಸಾಧಾರಣ ಮಳೆ (Moderate Rainfall) ಯಾಗಲಿದೆ. ಮಳೆಯ ಪ್ರಮಾಣ ಕೇವಲ 15.6 mm ನಿಂದ 64.4 mm ವರೆಗೆ ಇರಲಿದ್ದು, ಭಾರಿ ಪ್ರವಾಹದ ಯಾವುದೇ ಭೀತಿ ಇಲ್ಲ. ಯಲಹಂಕ, ದಾಸರಹಳ್ಳಿ, ಆರ್.ಆರ್. ನಗರ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯಗಳಲ್ಲೂ ವರುಣ ಶಾಂತವಾಗಿರಲಿದ್ದಾನೆ. ಒಟ್ಟಿನಲ್ಲಿ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಲಿದ್ದರೆ, ಬೆಂಗಳೂರಿಗರಿಗೆ ತಂಪಾದ ವಾತಾವರಣದ ಜೊತೆ ಸಾಧಾರಣ ಮಳೆಯ ಸಿಂಚನವಾಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed