Last Updated:
ಅಫ್ಘಾನಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ರಹಮಾನಲ್ಲಾ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ತಮ್ಮ ಒಂಬತ್ತನೇ ಶತಕವನ್ನು ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.
ಅಫ್ಘಾನಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ರಹಮಾನಲ್ಲಾ ಗುರ್ಬಾಜ್ (Rahmanullah Gurbaz) ಭಾರತದ (India) ವಿರುದ್ಧ ಶತಕ (Century) ಸಿಡಿಸಿ ಮಿಂಚಿದ್ದಾರೆ. ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ (One-Day Match) ಅದ್ಭುತ ಶತಕ ಗಳಿಸಿದ್ದಾರೆ. ಈ ಮೂಲಕ ರಹಮಾನಲ್ಲಾ ಗುರ್ಬಾಜ್ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಬಂದ ಅಫ್ಘಾನಿಸ್ತಾನ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಭಾರತದ ಬೌಲರ್ಗಳು ಮೂರು ವಿಕೆಟ್ಗಳನ್ನು ಪಡೆದುಕೊಳ್ಳುವ ಮೂಲಕ ಅಫ್ಘಾನಿಸ್ತಾನ ತಂಡಕ್ಕೆ ಶಾಕ್ ಕೊಟ್ಟಿದ್ದರು. ಒಂದು ಕಡೆ ವಿಕೆಟ್ ಬೀಳ್ತಿದ್ರೆ, ಮತ್ತೊಂದು ಕಡೆ ಗುರ್ಬಾಜ್ ದೃಢವಾಗಿ ನಿಂತರು. ಭಾರತೀಯ ಬೌಲರ್‌ಗಳನ್ನು ಎದುರಿಸಿ ಕೇವಲ 48 ಎಸೆತಗಳಲ್ಲಿ ತಮ್ಮ ಒಂಬತ್ತನೇ ಶತಕವನ್ನು ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಶತಕವು ಅಫ್ಘಾನಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಏಕದಿನ ಶತಕ ಮಾತ್ರವಲ್ಲದೇ, ಭಾರತದ ವಿರುದ್ಧದ ಏಕದಿನ ಇತಿಹಾಸದಲ್ಲಿ ಅತ್ಯಂತ ವೇಗದ ಶತಕಗಳಲ್ಲಿ ಕೂಡ ಒಂದಾಗಿದೆ.
ಈ ಇನ್ನಿಂಗ್ಸ್‌ನೊಂದಿಗೆ, ರಹಮಾನಲ್ಲಾ ಗುರ್ಬಾಜ್ ಅಫ್ಘಾನಿಸ್ತಾನ ಕ್ರಿಕೆಟ್‌ನಲ್ಲಿ 16 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮೊದಲು, ಅಫ್ಘಾನಿಸ್ತಾನದ ವೇಗದ ಏಕದಿನ ಶತಕದ ದಾಖಲೆಯನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ಶಹಜಾದ್ ಹೊಂದಿದ್ದರು, 2010 ರಲ್ಲಿ ಅಲೋವೇಯಲ್ಲಿ ಸ್ಕಾಟ್ಲೆಂಡ್ ವಿರುದ್ಧ ಶಹಜಾದ್ 72 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಕರೀಮ್ ಸಾದಿಕ್ 2012 ರಲ್ಲಿ ಶಾರ್ಜಾದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 72 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇದೀಗ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ಸೆಂಚುರಿ ಬಾರಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ.













