R Vinay Kumar: ಕರ್ನಾಟಕ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ‘ದಾವಣಗೆರೆ ಎಕ್ಸ್‌ಪ್ರೆಸ್’ ನೇಮಕ! | ಕ್ರೀಡಾ ಸುದ್ದಿ | ACTPnews

ಆರ್ ವಿನಯ್ ಕುಮಾರ್ ಕರ್ನಾಟಕ ಹೆಡ್​ ಕೋಚ್


Last Updated:

ರ್ನಾಟಕ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ವೇಗಿ ಆರ್. ವಿನಯ್ ಕುಮಾರ್ ನೇಮಕಗೊಂಡಿದ್ದಾರೆ. ಮುಂಬರುವ ದೇಶೀಯ ಋತುವಿಗಾಗಿ KSCA ಪ್ರಕಟಿಸಿರುವ ವಿವಿಧ ವಿಭಾಗಗಳ ಕೋಚ್‌ಗಳ ಸಂಪೂರ್ಣ ವಿವರಗಳು ಇಲ್ಲಿವೆ.

ಆರ್ ವಿನಯ್ ಕುಮಾರ್ ಕರ್ನಾಟಕ ಹೆಡ್​ ಕೋಚ್
ಆರ್ ವಿನಯ್ ಕುಮಾರ್ ಕರ್ನಾಟಕ ಹೆಡ್​ ಕೋಚ್

ಬೆಂಗಳೂರು: ಮುಂಬರುವ 2026-27ರ ದೇಶೀಯ ಕ್ರಿಕೆಟ್ ಋತುವಿಗಾಗಿ ಕರ್ನಾಟಕ (Karnataka Team) ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಭಾರತ ತಂಡದ ಮಾಜಿ ವೇಗಿ, ‘ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ಆರ್. ವಿನಯ್ ಕುಮಾರ್ (R. Vinay Kumar) ಅವರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನೇಮಕ ಮಾಡಿದೆ. ಕಳೆದ ಋತುವಿನಲ್ಲಿ ಕರ್ನಾಟಕ ತಂಡವನ್ನು ರಣಜಿ ಟ್ರೋಫಿ ಫೈನಲ್‌ಗೆ ಮುನ್ನಡೆಸಿದ್ದ ಯರೆ ಗೌಡ (Yere Goud) ಅವರ ಸ್ಥಾನವನ್ನು ವಿನಯ್ ಕುಮಾರ್ ತುಂಬಲಿದ್ದಾರೆ. ಯರೆ ಗೌಡ ಅವರು ಬಿಸಿಸಿಐನ (BCCI) ‘ಸೆಂಟರ್ ಆಫ್ ಎಕ್ಸಲೆನ್ಸ್’ಗೆ ಬ್ಯಾಟಿಂಗ್ ಕೋಚ್ ಆಗಿ ನಿಯುಕ್ತಿಗೊಂಡಿರುವ ಹಿನ್ನೆಲೆಯಲ್ಲಿ, ಈ ಮಹತ್ವದ ಜವಾಬ್ದಾರಿಯನ್ನು ರಾಜ್ಯದ ಯಶಸ್ವಿ ನಾಯಕನ ವಿನಯ್‌ಗೆ ವಹಿಸಲಾಗಿದೆ. ವಿನಯ್ ಕುಮಾರ್ ಅವರೊಂದಿಗೆ ಕರ್ನಾಟಕದ ಮಾಜಿ ಬ್ಯಾಟರ್ ದೀಪಕ್ ಚೌಗುಲೆ ಅವರನ್ನು ತಂಡದ ಫೀಲ್ಡಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports