Last Updated:
Pushpa 2: ಪುಷ್ಪ 2 ಮೂವಿ ಮೊದಲ ದಿನ ಹಿಂದಿ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದೆಷ್ಟು ಕೋಟಿ? ಜವಾನ್, ಪಠಾಣ್, ಅನಿಮಲ್, ಕೆಜಿಎಫ್ 2 ಎಲ್ಲವನ್ನೂ ಹಿಂದಿಕ್ಕಿ ಮೊದಲ ದಿನ ಬಾಚಿದ್ದೆಷ್ಟು?
ಪುಷ್ಪ 2 (Pushpa 2) ಸಿನಿಮಾ ಮಿಕ್ಸ್ ರೆಸ್ಪಾನ್ಸ್ ಮಧ್ಯೆಯೂ ಬಾಕ್ಸ್ ಆಫೀಸ್ನಲ್ಲಿ (Bod Office Collection) ಸಖತ್ ಆಗಿ ಕಲೆಕ್ಷನ್ ಮಾಡ್ತಾ ಇದೆ. ಹೌದು ಕಲೆಕ್ಷನ್ ವಿಚಾರದಲ್ಲಿ ಅದ್ಭುತ ಆರಂಭವನ್ನು ಕಂಡಿರೋ ಅಲ್ಲು ಅರ್ಜುನ್ (Allu Arjun)-ರಶ್ಮಿಕಾ (Rashmika Mandanna) ಅಭಿನಯದ ಪುಷ್ಪ 2 ಮೂವಿಗೆ ಅಂಥಹ ದೊಡ್ಡ ರೆಸ್ಪಾನ್ಸ್ ಏನಿಲ್ಲ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ ಅಷ್ಟೆ. ಹೀಗಿದ್ದರೂ ಕೂಡಾ ಈ ಸಿನಿಮಾ ಥಿಯೇಟರ್ ಕಲೆಕ್ಷನ್ಗೆ ಬಂದಾಗ ನಿರ್ಮಾಪಕರಿಗೆ ಲಾಭ ತರೋ ಭರವಸೆ ನೀಡಿದೆ.
ಇತ್ತೀಚಿನ ವರ್ಷಗಳಲ್ಲಿ ಹಿಂದಿ ಬಾಕ್ಸ್ ಆಫೀಸ್ನಲ್ಲಿ ದಕ್ಷಿಣದ ಸಿನಿಮಾಗಳು ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಭರ್ಜರಿಯಾಗಿ ಲಾಭ ಗಳಿಸುತ್ತಿವೆ. ವಾವ್ ಎನಿಸುವಂತಹ ನಂಬರ್ಸ್ ಬರುತ್ತಿವೆ. ಹೀಗಿರುವಾಗಲೇ ಪುಷ್ಪರಾಜ್ ಕಮಾಲ್ ಕಂಡು ಬಂದಿದೆ.
ಹಿಂದಿ ಬಾಕ್ಸ್ ಆಫೀಸ್ನಲ್ಲಿ ಪುಷ್ಪ 2 ಮೂವಿ ಭರ್ಜರಿಯಾಗಿ ಕಲೆಕ್ಷನ್ ಮಾಡಿದ. ಪುಷ್ಪ 2 ಮೊದಲ ದಿನದ ಕಲೆಕ್ಷನ್ ಮೂಲಕ ಅನಿಮಲ್, ಜವಾನ್, ಪಠಾಣ್, ಕೆಜಿಎಫ್ 2 ಸೇರಿ ಹಲವು ಬ್ಲಾಕ್ಬಸ್ಟರ್ ಚಿತ್ರಗಳ ಓಪನಿಂಗ್ ಡೇ ಕಲೆಕ್ಷನ್ ದಾಖಲೆ ಮುರಿದಿದೆ.
ಪುಷ್ಪ 2
ತರಣ್ ಆದರ್ಶ್ ಪ್ರಕಾರ ಪುಷ್ಪ 2 ಮೂವಿ ಹಿಂದಿ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ 72 ಕೋಟಿ ಗಳಿಸಿದೆ. ಜವಾನ್ ಮೊದಲ ದಿನ 65.50 ಕೋಟಿ, ಸ್ತ್ರೀ 2 ಸಿನಿಮಾ 55.40 ಕೋಟಿ, ಪಠಾಣ್ 55 ಕೋಟಿ, ಅನಿಮಲ್ 54.75 ಕೋಟಿ, ಕೆಜಿಎಫ್ 2 ಹಿಂದಿ 53.95 ಕೋಟಿ, ವಾರ್ 51.60 ಕೋಟಿ, ಟೋ 50.75 ಕೋಟಿ ಗಳಿಸಿತ್ತು. ಇವೆಲ್ಲ ಮೂವಿಗಳೂ ಮೊದಲ ದಿನ ಹಿಂದಿ ಬಾಕ್ಸ್ ಆಫೀಸ್ಲನಲ್ಲಿ 50ರ ಗಡಿಯ ಆಸುಪಾಸಿನಲ್ಲಿದ್ದವು.
ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 7ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಬುಕಿಂಗ್ ಅಷ್ಟು ಡಲ್ ಆಗಿದ್ದರೂ ಸಿನಿಮಾ ಹೇಗೆ ಇಷ್ಟು ಗಳಿಸಿತು ಎಂದು ಅಚ್ಚರಿ ಪಟ್ಟಿದ್ದಾರೆ.
ಪುಷ್ಪ 2 ಸಿನಿಮಾಗೆ ಟಿಕೆಟ್ ದರವೇ ಪ್ಲಸ್ ಪಾಯಿಂಟ್, ಅಂಥಹಾ ಟಾಕ್ ಇಲ್ಲದೇ ಇದ್ದರೂ ಕೂಡಾ ಸಿನಿಮಾ ಮೊದಲ ದಿನ ಅಷ್ಟು ಚೆನ್ನಾಗಿ ಕಲೆಕ್ಷನ್ ಮಾಡಿದೆ ಎಂದಾದರೆ ಟಿಕೆಟ್ ಬೆಲೆ ಏರಿಸಿದ್ದು ಸಖತ್ ವರ್ಕೌಟ್ ಆಗಿದೆ ಎಂದೇ ಅರ್ಥ. ಬಹಳಷ್ಟು ಜನ ಟಿಕೆಟ್ ಬೆಲೆ ಏರಿಸಿದ್ರೆ ಜನ ಬರಲ್ಲ ಎನ್ನುತ್ತಿದ್ದರು. ಆದರೆ ಥಿಯೇಟರ್ಗೆ ಹೋಗಿನೇ ಮೂವಿ ನೋಡ್ತೀನಿ ಎನ್ನುವ ಕೆಲವೇ ಮಂದಿ ಟಿಕೆಟ್ ಬುಕ್ ಮಾಡಿದರೂ ಕೂಡಾ ಕಲೆಕ್ಷನ್ ಹೆಚ್ಚುತ್ತೆ. ಕಾರಣ ಟಿಕೆಟ್ ಬೆಲೆ ಬೆಂಗಳೂರಿನಲ್ಲಿ 1000 ದಾಟಿತ್ತು.
Bangalore,Karnataka













