Puneeth Rajkumar: ಗೋಲ್ಡನ್ ಸ್ಟಾರ್ ಗಣೇಶ್ ಮಿಸ್ ಮಾಡಿಕೊಳ್ತಿದ್ದ ಪುನೀತ್: ರಂಗಾಯಣ ರಘು ಬಿಚ್ಚಿಟ್ಟ ಸೀಕ್ರೆಟ್! | | ACTPnews

ಗಣೇಶ್ ಮಿಸ್ ಮಾಡಿಕೊಳ್ತಿದ್ದ ಪುನೀತ್: ರಂಗಾಯಣ ರಘು ಬಿಚ್ಚಿಟ್ಟ ಸೀಕ್ರೆಟ್!


Last Updated:

ಪರಮಾತ್ಮ ಚಿತ್ರೀಕರಣದ ಸಮಯದಲ್ಲಿ ಪುನೀತ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನ ನೆನಪಿಸಿಕೊಳ್ಳುತ್ತಲೇ ಇದ್ದರು. ಯಾಕೆ ಅನ್ನೋದನ್ನ ರಂಗಾಯಣ ರಘು ಈಗ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಗಣೇಶ್ ಮಿಸ್ ಮಾಡಿಕೊಳ್ತಿದ್ದ ಪುನೀತ್: ರಂಗಾಯಣ ರಘು ಬಿಚ್ಚಿಟ್ಟ ಸೀಕ್ರೆಟ್!
ಗಣೇಶ್ ಮಿಸ್ ಮಾಡಿಕೊಳ್ತಿದ್ದ ಪುನೀತ್: ರಂಗಾಯಣ ರಘು ಬಿಚ್ಚಿಟ್ಟ ಸೀಕ್ರೆಟ್!

ಪರಮಾತ್ಮ ಚಿತ್ರ (Puneeth Rajkumar) ಬಂದಾಗ ಅನೇಕರು ಕಾಮೆಂಟ್ ಹೊಡೆದರು. ಇದು ಅಪ್ಪು (Appu) ಅವರಿಗೆ ಅಲ್ವೇ ಅಲ್ಲ. ಅಪ್ಪು ಪವರ್ ಬೇರೆ ಇದೆ ಅಂತ ಹೇಳಿದವರೇ ಹೆಚ್ಚು ಬಿಡಿ. ಯೋಗರಾಜ್ ಭಟ್ರು (Yogaraj Bhat) ಈ ಒಂದು ಚಿತ್ರವನ್ನ ಬೇರೆ ರೀತಿನೇ ಮಾಡಿದ್ದರು. ಗುಂಪಲ್ಲಿ ಕುಳಿತ ನೋಡುವ ಚಿತ್ರ ಇದು ಅಂತಲೇ ಮಾಡಿದರು. ಆದರೆ, ಈ ಸಿನಿಮಾವನ್ನ ಮೂರ್ನಾಲ್ಕು ಜನ ಗೆಳೆಯರು ಕುಳಿತು ನೋಡಿದಾಗ ಸಿಗೋ ಮಜಾನೇ ಬೇರೆ. ಈ ವಿಚಾರ ಭಟ್ರಿಗೆ ಸಿನಿಮಾ ಬಂದು ಹೋದ್ಮೇಲೆ ಅರ್ಥ ಆಗಿದೆ. ಆದರೆ, ಈ ಚಿತ್ರದ ನಿರ್ಮಾಣ ಸಮಯದಲ್ಲಿಯೆ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನ ನೆನಪಿಸಿಕೊಳ್ಳುತ್ತಿದ್ದರು. ಯಾಕೆ ಅನ್ನೋದನ್ನ ರಂಗಾಯಣ ರಘು ನೆನಪಿಸಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.

ಪರಮಾತ್ಮ ಅದ್ಭುತ ಸಿನಿಮಾ

ಪರಮಾತ್ಮ ಚಿತ್ರ ಅದ್ಭುತ ಚಿತ್ರವೇ ಆಗಿದೆ. ಆದರೆ, ಪುನೀತ್ ಫ್ಯಾನ್ಸ್‌ಗೆ ಇದು ಇಷ್ಟ ಆಗಲಿಲ್ಲ. ಪುನೀತ್ ಅವರು ತಮ್ಮದೇ ಒಂದು ಇಮೇಜ್ ಕ್ರಿಯೇಟ್ ಮಾಡಿದ್ದರು. ಅದನ್ನ ಅಭಿಮಾನಿಗಳು ಹಾಗೂ ಚಿತ್ರ ಪ್ರೇಮಿಗಳು ಹೆಚ್ಚು ಇಷ್ಟಪಡ್ತಾ ಇದ್ದರು.
puneeth rajkumar recalled ganesh paramathama shooting rangayana raghu unknown facts

ಗಣೇಶ್ ಮಿಸ್ ಮಾಡಿಕೊಳ್ತಿದ್ದ ಪುನೀತ್

ಆದರೆ, ಪರಮಾತ್ಮ ಸಿನಿಮಾ ಎಲ್ಲ ಇಮೇಜ್ ಬಿಟ್ಟು ಮಾಡಿರೋ ಚಿತ್ರವೇ ಆಗಿತ್ತು. ಇದನ್ನ ಫ್ಯಾನ್ಸ್ ಇಷ್ಟಪಡಲೇ ಇಲ್ಲ. ಸಿನಿಮಾ ಪ್ರೇಮಿಗಳಲ್ಲಿ ಕೆಲವರಿಗೆ ಇದು ಇಷ್ಟ ಆಗಿತ್ತು. ಟಿವಿಯಲ್ಲಿ ಈ ಚಿತ್ರ ನೋಡಿದವರು ಭಟ್ರಿಗೆ ಹೇಳಿರೋದು ಇದೆ. ಹಾಗೆ ಇದು ತುಂಬಾನೆ ಒಳ್ಳೆ ಚಿತ್ರ ಅಂತ ಹೇಳಿರೋದೇ ಹೆಚ್ಚು ನೋಡಿ.

ಶೂಟಿಂಗ್ ಸಮಯದ ಕ್ಷಣಗಳು

ಆದರೆ, ಈ ಚಿತ್ರದಲ್ಲಿ ಭರ್ಜರಿ ಡೈಲಾಗ್‌ಗಳಿದ್ದವು. ಇದನ್ನ ಕಲಿತು ಹೇಳೋದೇ ಕಷ್ಟ. ಆ ರೀತಿನೇ ಭಟ್ರು ಚಿತ್ರಕ್ಕೆ ಡೈಲಾಗ್ ಬರೆದಿದ್ದರು.

ಈ ಡೈಲಾಗ್‌ಗಳನ್ನ ಓದಿದಾಗ ಪುನೀತ್ ಒಂದು ಮಾತು ಹೇಳುತ್ತಿದ್ದರು. ಯೋಗರಾಜ್ ಭಟ್ರು ಈ ಡೈಲಾಗ್ ಅನ್ನ ಗೋಲ್ಡನ್ ಸ್ಟಾರ್ ಗಣೇಶ್ ಮನದಲ್ಲಿಯೇ ಇಟ್ಟುಕೊಂಡು ಬರೆದಿದ್ದಾರೆ ಅನಿಸುತ್ತದೆ ಅಂತಲೇ ಹೇಳ್ತಾ ಇದ್ದರು.

ರಂಗಾಯಣ ರಘು ಹೇಳಿದ್ರು

ಪರಮಾತ್ಮ ಚಿತ್ರದಲ್ಲಿ ರಂಗಾಯಣ ರಘು ಕೂಡ ಇದ್ದಾರೆ. ಪುನೀತ್ ಜೊತೆಗೂ ಇವರ ಸೀನ್‌ಗಳಿವೆ. ಆಗೆಲ್ಲ ಪುನೀತ್ ಅವರು ರಂಗಾಯಣ ರಘು ಮುಂದೆ ಹೇಳ್ತಾ ಇದ್ದರು.

puneeth rajkumar recalled ganesh paramathama shooting rangayana raghu unknown facts

ಶೂಟಿಂಗ್ ಸಮಯದ ಕ್ಷಣಗಳು

ಯೋಗರಾಜ್ ಭಟ್ರು ಡೈಲಾಗ್‌ಗಳನ್ನ ಗಣೇಶ್ ಅವರನ್ನ ಮನದಲ್ಲಿಟ್ಟುಕೊಂಡೇ ಬರೆದಿದ್ದಾರೆ ನೋಡಿ. ಇದನ್ನ ಕಲಿಯೋದು ತುಂಬಾನೆ ಕಷ್ಟ ಅನ್ನುವ ಅರ್ಥದಲ್ಲೂ ಹೇಳ್ತಾ ಇದ್ದರು.

ಅಪ್ಪು ನೆನೆದ ರಂಗಾಯಣ ರಘು

ರಂಗಾಯಣ ರಘು ಇದನ್ನೆಲ್ಲ ನೆನಪಿಸಿಕೊಳ್ಳಲು ಕಾರಣವು ಇದೆ. ಗಣೇಶ್ ಅವರ ಪಿನಾಕ ಚಿತ್ರದಲ್ಲಿ ಇವರೂ ನಟಿಸಿದ್ದಾರೆ. ಗಣೇಶ್ ಅವರು ಈ ಚಿತ್ರದಲ್ಲಿ 7 ರಿಂದ 8 ನಿಮಿಷದ ಒಂದು ಸೀನ್ ಮಾಡಿದ್ದಾರೆ. ಇದರಲ್ಲಿ ನಾನ್ ಸ್ಟಾಪ್ ಡೈಲಾಗ್ ಹೊಡೆದಿದ್ದಾರೆ.

ಇದು ನಿಜಕ್ಕೂ ಅದ್ಭುತ ಕಲೆನೇ ಬಿಡಿ. ಇದು ಯಾರಿಗೂ ಬರೋದಿಲ್ಲ. ಇದನ್ನ ಗಣಪನೇ ಮಾಡೋಕೆ ಸಾಧ್ಯವಾಗುತ್ತದೆ. ಹಾಗೆ ಪುನೀತ್ ಅವರು ಗಣಪನನ್ನ ಪರಮಾತ್ಮ ಚಿತ್ರೀಕರಣದ ಸಮಯದಲ್ಲಿ ಆಗಾಗ ನೆನಪಿಸಿಕೊಳ್ತಾನೇ ಇದ್ದರು ಅನ್ನೋದನ್ನ ರಂಗಾಯಣ ರಘು ಇಲ್ಲಿ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports