Last Updated:
Priyanka Gandhi’s Education: ಮದ್ರಾಸ್ ಐಐಟಿ ಮುಖ್ಯಸ್ಥ ಪ್ರೊಫೆಸರ್ ವಿ. ಕಾಮಕೋಟಿಯವರನ್ನು ಕಾಂಗ್ರೆಸ್ ನಾಯಕಿ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ‘ಗೋಮೂತ್ರ ತಜ್ಞ’ ಅಂತ ಟೀಕಿಸಿದ್ದರು. ಇದರ ಬೆನ್ನಲ್ಲೇ ಈಗ ಪ್ರಿಯಾಂಕಾ ಗಾಂಧಿ ಓದಿದ್ದೇನು? ಅವರ ಶೈಕ್ಷಣಿಕ ಅರ್ಹತೆಗಳೇನು ಎಂಬ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ.
ದೆಹಲಿ: ಮದ್ರಾಸ್ ಐಐಟಿ ಮುಖ್ಯಸ್ಥ (Madras IIT chief) ಪ್ರೊಫೆಸರ್ ವಿ. ಕಾಮಕೋಟಿಯವರನ್ನು (Prof. V. Kamakoti) ಕಾಂಗ್ರೆಸ್ ನಾಯಕಿ, ವಯನಾಡು ಸಂಸದೆ (Wayanad MP) ಪ್ರಿಯಾಂಕಾ ಗಾಂಧಿ (Priyanka Gandhi) ‘ಗೋಮೂತ್ರ ತಜ್ಞ’ (Gomutra Expert) ಅಂತ ಟೀಕಿಸಿದ್ದರು. ಇದಕ್ಕೆ ಸಾರ್ವಜನಿಕವಲಯ ಹಾಗೂ ರಾಜಕೀಯರಂಗದಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಇದರ ಬೆನ್ನಲ್ಲೇ 215ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಪ್ರಿಯಾಂಕಾ ಗಾಂಧಿಯವರಿಗೆ ಬಹಿರಂಗ ಪತ್ರ ಬರೆದು, ಗೋಮೂತ್ರ ತಜ್ಞ ಅಂತ ಹೇಳಿದ್ದಕ್ಕೆ ವಿರೋಧಿಸಿ, ವಿ ಕಾಮಕೋಟಿಯವರ ಪರ ನಿಂತಿದ್ದರು. ಇದೀಗ ಪ್ರಿಯಾಂಕಾ ಗಾಂಧಿ ಓದಿದ್ದೇನು? ಅವರ ಶೈಕ್ಷಣಿಕ ಅರ್ಹತೆಗಳೇನು ಎಂಬ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ.

ಅವರ ಅಜ್ಜಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಹೆಚ್ಚಿದ ಭದ್ರತಾ ಕಾರಣಗಳಿಂದ 1984ರಲ್ಲಿ ಅವರನ್ನು ದೆಹಲಿಯ ಡೇ ಸ್ಕೂಲ್ಗೆ ವರ್ಗಾಯಿಸಲಾಯಿತು. ಬಳಿಕ ಜೀಸಸ್ ಮತ್ತು ಮೇರಿ ಕಾನ್ವೆಂಟ್ ಎಂಬ ಶಾಲೆಯಲ್ಲೂ ಕೂಡ ಪ್ರಿಯಾಂಕಾ ಓದಿದರು. 1991ರಲ್ಲಿ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕ್ರೂರ ಹತ್ಯೆಯ ನಂತರ, ಪ್ರಿಯಾಂಕಾ ಗಾಂಧಿಯವರ ಶೈಕ್ಷಣಿಕ ಪ್ರಯಾಣವು ನಿರ್ಣಾಯಕ ತಿರುವು ಪಡೆದುಕೊಂಡಿತು.

ಅಜ್ಜಿ ಹಾಗೂ ತಂದೆಯ ಹತ್ಯೆ ಬಳಿಕ ಪ್ರಿಯಾಂಕಾ ಗಾಂಧಿ ಹಾಗೂ ಅವರ ಸಹೋದರ ರಾಹುಲ್ ಗಾಂಧಿ ಇಬ್ಬರು ಮನೆಯಲ್ಲಿಯೇ ಪಾಠ ಕಲಿಯಬೇಕಾದ ಅನಿವಾರ್ಯತೆ ಉಂಟಾಯ್ತು. ಬಳಿಕ ಪ್ರಿಯಾಂಕಾ ಗಾಂಧಿ ಅವರು ದೆಹಲಿ ವಿಶ್ವವಿದ್ಯಾಲಯದ ಭಾಗವಾಗಿರುವ ಪ್ರತಿಷ್ಠಿತ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ಪದವಿಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದರು. ತನ್ನ ಪದವಿಪೂರ್ವ ಪದವಿಯನ್ನು ಪೂರ್ಣಗೊಳಿಸಿದ ನಂತರ, ಪ್ರಿಯಾಂಕಾ ಗಾಂಧಿ ವಾದ್ರಾ 2010 ರಲ್ಲಿ ಬೌದ್ಧ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವ ಮೂಲಕ ತನ್ನ ಶಿಕ್ಷಣವನ್ನು ಮುಂದುವರೆಸಿದರು.
2024 ರಲ್ಲಿ ವಯನಾಡ್ ಕ್ಷೇತ್ರದಿಂದ ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಚುನಾವಣಾ ಚೊಚ್ಚಲ ಪ್ರವೇಶ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ತಮ್ಮ ಪರಿಣಾಮಕಾರಿ ಭಾಷಣ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಹಿಂದಿ ಭಾಷೆಯ ಮೇಲೆ ಪ್ರಬಲವಾದ ಹಿಡಿತ ಹೊಂದಿರುವ ಅವರು, ಸಂಸತ್ತಿನಲ್ಲಿ ಪ್ರಭಾವಶಾಲಿ ಭಾಷಣಗಳನ್ನು ಮಾಡುವ ಮೂಲಕ ಆಡಳಿತ ಪಕ್ಷಕ್ಕೆ ಚುರುಕು ಮುಟ್ಟಿಸುತ್ತಿದ್ದಾರೆ.
Delhi,Delhi,Delhi














