ಜೂನ್-5 ಸಂಚಿತ್ ಚಿತ್ರ ರಿಲೀಸ್
(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್)+++
ಬಾ ಅತ್ತೆಯನ್ನ ತೋರಿಸ್ತೀನಿ ಅಂತ ಸುದೀಪ್ ಕರೆದುಕೊಂಡು ಬಂದಿದ್ದರು. ಆದರೆ, ಪುಟ್ಟದಾಗಿ ಚಬ್ಬಿ ಚಬ್ಬಿ ಆಗಿದ್ದ ಸಂಚಿತ್, ನನ್ನ ನೋಡ್ತಾನೇ ಇದ್ದ. ಆದರೆ, ನನ್ನ ಮದುವೆ ಆಗ್ತಾ ಇದ್ದೇನೆ ಅಂತ ಸುದೀಪ್ ಹೇಳಿದಾಗ, ಬೇಡ ಡೋಂಟ್ ಮ್ಯಾರಿ ಹರ್ ಅಂತಲೇ ಹೇಳಿದ ನೋಡಿ.
ಸುದೀಪ್ ಸಿನಿಮಾ ಶೂಟಿಂಗ್ ಇದೆ ಅಂತ ಲಂಡನ್ಗೆ ಹೋಗಿದ್ದರು. ನಾನು ಅವರ ಜೊತೆಗೆ ಹೋಗಿದ್ದೆ. ಆದರೆ, ನಾವು ಬರೋದು ಹೆಚ್ಚು ಕಡಿಮೆ 15 ದಿನಗಳೇ ಆದವು.
ನಾವು ಲಂಡನ್ನಿಂದ ವಾಪಾಸ್ ಬಂದು ಕಾರ್ ಇಳಿತಾ ಇದ್ದೇವು. ಆಗ ಸಂಚಿತ್ ಮನೆ ಬಾಗಿಲಲ್ಲಿ ನಮಗಾಗಿ ಕಾಯ್ತಾನೇ ಇದ್ದ. ಸುದೀಪ್ ಬಾ ಅಂತ ಕೈ ಮಾಡಿದರು. ಆದರೆ, ಸಂಚಿತ್ ಆ ಕಡೆಗೆ ಹೋಗಲಿಲ್ಲ. ನನ್ನ ಕಡೆಗೆ ಬಂದ. ನಾನು ಅವನಿಗೆ ಇಷ್ಟ ಆಗಿದ್ದೇನೆ ಅಂತಲೇ ಆಗಲೇ ಫೀಲ್ ಆಯಿತು.
ಸಂಚಿತ್ ಸಂಜೀವ್ ಮಾತು ಕಡಿಮೆ ಇರುತ್ತವೆ. ಆದರೆ, ನನ್ನ ಹತ್ರ ಎಷ್ಟು ಬೇಕೋ ಅಷ್ಟು ಹೇಳಿಕೊಳ್ಳುತ್ತಾನೆ. ಸಂಚಿತ್ ತುಂಬಾನೆ ಎಮೋಷನಲ್ ಆಗಿದ್ದಾನೆ.
ಆದರೆ, ಹೇಳಿಕೊಳ್ಳುವುದು ಕಡಿಮೇನೆ ನೋಡಿ. ಆದರೂ ಅವನ ಕಣ್ಣುಗಳು ಎಲ್ಲವನ್ನು ಹೇಳುತ್ತವೆ. ಅದು ನಮಗೆ ಅರ್ಥ ಆಗುತ್ತವೆ. ಆ ರೀತಿನೆ ಸಂಚಿತ್ ಇರೋದು.
ಅಮ್ಮ ಮತ್ತು ಮಗನ ಬಾಂಡ್
(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್)
ಸಂಚಿತ್ ಮತ್ತು ನಾನು ಒಳ್ಳೆ ಸ್ನೇಹಿತರೇ ಆಗಿದ್ದೇವೆ. ಆದರೆ, ಬಾಂಡಿಂಗ್ ಅಂತ ಬಂದ್ರೆ ಅದು ಅಮ್ಮ ಮತ್ತು ಮಗನ ಬಾಂಡಿಂಗೇ ಆಗಿದೆ. ಆ ರೀತಿನೇ ಸಂಚಿತ್ ಇರೋದು. ಸಂಚಿತ್ ಸಂಜೀವ್ ಕೂಲ್ ಮತ್ತು ಕಾಮ್ ಆಗಿಯೇ ಇರೋದು ಅಂತಲೂ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ.
ಕನ್ನಡ ಪಿಚ್ಚರ್ ಯುಟ್ಯೂಬ್ ಚಾನೆಲ್ನ ಸಂದರ್ಶನದಲಿಯೇ ಪ್ರಿಯಾ ಸುದೀಪ್ ಅವರು ಈ ಎಲ್ಲ ವಿಷಯವನ್ನ ಹೇಳಿಕೊಂಡಿದ್ದಾರೆ.
ಸಂಚಿತ್ ಸಂಜೀವ್ ಅಭಿನಯದ ಮ್ಯಾಂಗೋ ಪಚ್ಚ ಚಿತ್ರ ಜೂನ್-5 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರವನ್ನ ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರು ತಮ್ಮ ಸುಪ್ರಿಯಾನ್ವಿ ಸಂಸ್ಥೆ ಮೂಲಕವೇ ನಿರ್ಮಿಸಿದ್ದಾರೆ.
ಕೆಆರ್ಜಿ ಸಂಸ್ಥೆನೂ ಈ ಚಿತ್ರ ನಿರ್ಮಾಣಕ್ಕೆ ಸಾಥ್ ಕೊಟ್ಟಿದೆ. ಇವರ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ನವ ನಿರ್ದೇಶಕ ವಿವೇಕ್ ಈ ಸಿನಿಮಾವನ್ನ ಡೈರೆಕ್ಷನ್ ಮಾಡಿದ್ದಾರೆ.
ಕಾಜಲ್ ಕುಂದರ್ ಈ ಚಿತ್ರದಲ್ಲಿ ಸಂಚಿತ್ಗೆ ಜೊಡಿ ಆಗಿದ್ದಾರೆ. ಮಯೂರ್ ಪಟೇಲ್, ಮ್ಯಾಕ್ಸ್ ಮಂಜು, ವಿಜಯ್ ರಾಘವೇಂದ್ರ ಅಳಿಯ ಜೈ, ಭಾವನಾ ರಾಮಣ್ಣ ಸೇರಿದಂತೆ ಇನ್ನು ಅನೇಕ ಕಲಾವಿದರು ಅಭಿನಯಿಸಿದ್ದಾರೆ ಅಂತ ಹೇಳಬಹುದು.












