Crime News: ಒಂದೂವರೆ ವರ್ಷದ ಮಗುವನ್ನು ಎತ್ತಿ ನೆಲಕ್ಕೆ ಎಸೆದ ಪಾಪಿ! ಮಗುವಿನ ಪ್ರಾಣ ಕಸಿಯಿತು ಅಮ್ಮನ ಮೇಲಿನ ಪ್ರೀತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮಗುವಿನ ಪ್ರಾಣ ಕಸಿಯಿತು ಅಮ್ಮನ ಮೇಲಿನ ಪ್ರೀತಿ!


Last Updated:

Crime News: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಿಖೋಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಒಂದೂವರೆ ವರ್ಷದ ಅಮಾಯಕ ಮಗು ಆರವ್ ಎಂಬ ಬಾಲಕನನ್ನು ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್ ಎಂಬ ವ್ಯಕ್ತಿ ಅತ್ಯಂತ ವಿಕೃತವಾಗಿ ಕೊಲೆ ಮಾಡಿದ್ದಾನೆ.

ಮಗುವಿನ ಪ್ರಾಣ ಕಸಿಯಿತು ಅಮ್ಮನ ಮೇಲಿನ ಪ್ರೀತಿ!
ಮಗುವಿನ ಪ್ರಾಣ ಕಸಿಯಿತು ಅಮ್ಮನ ಮೇಲಿನ ಪ್ರೀತಿ!

ಫಿರೋಜಾಬಾದ್ (ಉತ್ತರ ಪ್ರದೇಶ): ಅಕ್ರಮ ಸಂಬಂಧಗಳ (Illegal Relationship) ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ ಈ ಅಕ್ರಮ ಸಂಬಂಧಗಳಲ್ಲಿ (Relationship) ಹೆಚ್ಚಾಗಿ ಕೊಲೆಯಾಗುವುದು ಯಾರಾದರೂ ಒಬ್ಬರು ಸಂಗಾತಿಯೇ! ಆದರೆ, ಕೆಲವೊಮ್ಮೆ ಈ ಅಕ್ರಮ ಸಂಬಂಧಗಳಿಗೆ ಏನೂ ಅರಿಯದ ಮುಗ್ಧ ಮಕ್ಕಳು ಕೂಡ ಬಲಿಯಾಗುತ್ತಾರೆ (Killed). ಅದಕ್ಕೆ ಈ ಪ್ರಕರಣವೇ ಸಾಕ್ಷಿ!

ಹೌದು, ಉತ್ತರ ಪ್ರದೇಶದ (Uttar Pradesh) ಫಿರೋಜಾಬಾದ್‌ನಲ್ಲಿ (Firozabad) ಒಂದೂವರೆ ವರ್ಷದ ಬಾಲಕನನ್ನು, ಮಗುವಿನ ತಾಯಿಯನ್ನು ಪ್ರೀತಿಸುತ್ತಿದ್ದ ಎನ್ನಲಾದ ವ್ಯಕ್ತಿಯೊಬ್ಬ ಪದೇ ಪದೇ ನೆಲದ ಮೇಲೆ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಿಖೋಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಒಂದೂವರೆ ವರ್ಷದ ಅಮಾಯಕ ಮಗು ಆರವ್ (ಕಲ್ಲು) ಎಂಬ ಬಾಲಕನನ್ನು ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್ ಎಂಬ ವ್ಯಕ್ತಿ ಅತ್ಯಂತ ವಿಕೃತವಾಗಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: Pocso Case: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್

ಮುಂದುವರೆದು, ಮಗುವಿನ ತಾಯಿ ರತಿ ದೇವಿ ತನ್ನ ಪತಿ ಸುಮಿತ್‌ನಿಂದ ವೈವಾಹಿಕ ಭಿನ್ನಾಭಿಪ್ರಾಯಗಳ ಕಾರಣ ದೂರವಾಗಿದ್ದರು ಮತ್ತು ವಿಚ್ಛೇದನ ಪ್ರಕ್ರಿಯೆಗಳಿಗಾಗಿ ಕಾನೂನು ಸಲಹೆ ಪಡೆಯಲು ಶಿಖೋಹಾಬಾದ್‌ಗೆ ಬಂದಿದ್ದರು. ಇನ್ನೂ, ಕೊಲೆ ಮಾಡಿದ ಆರೋಪಿ ವಿರಾಜ್ (ಜಿತೇಂದ್ರ), ರತಿಯ ಪತಿಯ ಸೋದರಸಂಬಂಧಿಯಾಗಿದ್ದು, ಈ ವಿಚ್ಛೇದನದ ಪ್ರಕ್ರಿಯೆಗಳಲ್ಲಿ ರತಿ ದೇವಿಯ ಕುಟುಂಬಕ್ಕೆ ಸಹಾಯ ಮಾಡುವ ನೆಪದಲ್ಲಿ ಹತ್ತಿರವಾಗಿದ್ದನು. ಏತನ್ಮಧ್ಯೆ, ಆತ ರತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಆಕೆಯನ್ನು ಮದುವೆಯಾಗಲು ಬಯಸಿದ್ದನು. ಆದರೆ, ರತಿ ದೇವಿ ಅವನ ಮದುವೆಯ ಪ್ರಸ್ತಾಪವನ್ನು ಪದೇ ಪದೇ ತಿರಸ್ಕರಿಸಿದ್ದಳು ಎನ್ನಲಾಗಿದೆ.

ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಕೊಲೆ!

ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿರುವಂತೆ, ವಿರಾಜ್, “ರತಿ ತನ್ನ ಮಗುವಿನ ಕಾರಣಕ್ಕಾಗಿಯೇ ತನ್ನನ್ನು ಮದುವೆಯಾಗುತ್ತಿಲ್ಲ ಮತ್ತು ಭವಿಷ್ಯದಲ್ಲಿ ಮಗುವಿಗಾಗಿ ಮತ್ತೆ ಪತಿಯೊಂದಿಗೆ ಒಂದಾಗಬಹುದು ಎಂಬ ಹುಚ್ಚು ಭ್ರಮೆಯಲ್ಲಿದ್ದನು.” ಹಾಗಾಗಿ, ಮಗುವೇ ತಮ್ಮ ಸಂಬಂಧಕ್ಕೆ ದೊಡ್ಡ ಅಡ್ಡಿ ಎಂದು ಭಾವಿಸಿದ ಆತ, ಘಟನೆಯ ದಿನ ಮಗುವಿಗೆ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಮನೆಯಿಂದ ಹೊರಗೆ ಕರೆದೊಯ್ದಿದ್ದಾನೆ.

ಮುಂದುವರೆದು, ಮನೆಯಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ, ರಸ್ತೆಯಲ್ಲಿ ಯಾರು ಇಲ್ಲದನ್ನು ನೋಡಿ, ಮಗುವನ್ನು ನೆಲಕ್ಕೆ ಬಟ್ಟೆಯಂತೇ ಎಂಟು ಬಾರಿ ರಸ್ತೆಯ ಮೇಲೆ (ನೆಲಕ್ಕೆ) ಬಡಿದು ಅತ್ಯಂತ ಕ್ರೂರವಾಗಿ ಕನಿಷ್ಠ ಕೊಲೆ ಮಾಡಿದ್ದಾನೆ.

ಏತನ್ಮಧ್ಯೆ, ಈ ಇಡೀ ಭೀಕರ ದೃಶ್ಯವು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇನ್ನೂ, ಹಲ್ಲೆಯ ನಂತರ ಮಗು ಯಾವುದೇ ರಿಯಾಕ್ಷನ್​ ಮಾಡದ ಕಾರಣ, ಆತ ಮಗುವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಇನ್ನೂ, ಕುಟುಂಬದವರು ಮಗುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರಾದರೂ, ವೈದ್ಯರು ಮಗು ಅದಾಗಲೇ ಮೃತಪಟ್ಟಿದೆ ಎಂದು ಘೋಷಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed