ಪ್ರಿಯಾ ಸುದೀಪ್ ಆ್ಯಕ್ಟಿಂಗ್ ಮಾಡ್ತಾರಾ?
ಪ್ರಿಯಾ ಸುದೀಪ್ ಈ ಪ್ರಶ್ನೆಗೆ ತುಂಬಾನೆ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ. ನಾನು ಈಗತಾನೆ ಪ್ರೊಡಕ್ಷನ್ ಮಾಡೋಕೆ ಬಂದಿದ್ದೇನೆ. ಇದರಲ್ಲಿ ತುಂಬಾನೆ ಕಲಿಯೋದು ಇದೆ. ಡೈರೆಕ್ಷನ್ ಸಣ್ಣ ಜವಾಬ್ದಾರಿ ಅಲ್ವೇ ಅಲ್ಲ.
ಚಿತ್ರರಂಗದಲ್ಲಿ ಈಗಷ್ಟೆ ನಿರ್ಮಾಪಕಿ ಆಗಿ ಕಾಲಿಟ್ಟಿದ್ದೇನೆ. ಇದರಲ್ಲಿಯೇ ತುಂಬಾನೆ ತಿಳಿದುಕೊಳ್ಳುವುದು ಇದೆ. ಇದರಲ್ಲಿಯೇ ಮುಂದೆ ಹೋಗ್ತಾ ಹೋಗ್ತಾ ಆ ರೀತಿ ಸಂದರ್ಭ ಬಂದ್ರೆ ಡೈರೆಕ್ಷನ್ ಮಾಡಬಹುದು ಅಂತಲೂ ಹೇಳಿಕೊಂಡಿದ್ದಾರೆ.
ಆದರೆ, ಡೈರೆಕ್ಷನ್ ಅನ್ನೋದು ಸುಮ್ನೆ ಅಲ್ಲ. ಒಂದು ಚಿತ್ರದಲ್ಲಿ ಹಲವು ವಿಭಾಗ ಇರುತ್ತವೆ. ಅದೆಲ್ಲವನ್ನ ತಿಳಿದುಕೊಳ್ಳಬೇಕು. ಎಲ್ಲದರ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಸದ್ಯ ಪ್ರೊಡಕ್ಷನ್ ವಿಷಯವನ್ನ ಕಲಿಯುತ್ತಿದ್ದೇನೆ ಅಂತ ಪ್ರಿಯಾ ಸುದೀಪ್ ಹೇಳಿದ್ದಾರೆ.
ಮ್ಯಾಂಗೋ ಪಚ್ಚ ಚಿತ್ರಕ್ಕೆ ಸಂಚಿತ್ ಸಂಜೀವ್‌ಗೆ ಎಷ್ಟು ದುಡ್ಡು ಕೊಟ್ಟಿರೋದು? ಈ ಪ್ರಶ್ನೆಗೂ ಅಷ್ಟೆ ಬ್ಯೂಟಿಫುಲ್ ಆಗಿಯೇ ಪ್ರಿಯಾ ಸುದೀಪ್ ಅವರು ಉತ್ತರ ಕೊಟ್ಟಿದ್ದಾರೆ.
ಸುದೀಪ್-ಸಾನ್ವಿ-ಸಂಚಿತ್ ಸಿನಿಮಾ
ನಮ್ಮ ಮನೆಯ ಹುಡುಗರು ತುಂಬಾನೆ ಚುರುಕಾಗಿದ್ದಾರೆ. ಯಾವುದು ಉಚಿತವಾಗಿ ಮಾಡೋದಿಲ್ಲ. ಹೀಗೆ ಹೇಳ್ತಾನೇ ಕೊಟ್ಟ ದುಡ್ಡಿನ ಅಮೌಂಟ್ ಏನೂ ಹೇಳಲಿಲ್ಲ.
ಆದರೆ, ಪಕ್ಕದಲ್ಲಿಯೇ ಕುಳಿತಿದ್ದ ಚಿತ್ರದ ಇನ್ನೊಬ್ಬ ನಿರ್ಮಾಪಕ ಕಾರ್ತಿಕ್ ಗೌಡ್ರು ಈ ವಿಚಾರವಾಗಿ ಹೇಳಿದರು. ಒಬ್ಬ ಹೊಸ ಕಲಾವಿದನಿಗೆ ಎಷ್ಟು ಕೊಡ್ಬೇಕು ಅಷ್ಟು ಕೊಟ್ಟಿದ್ದೇವೆ ಅಂತ ಹೇಳಿದ್ದಾರೆ.
ಪ್ರಿಯಾ ಸುದೀಪ್ ಈಗಾಗಲೇ ಒಂದು ಸೀರಿಯಲ್ ಅಲ್ಲಿ ಅಭಿನಯ ಮಾಡಿದ್ದಾರೆ. ಜೆ.ಕೆ.ಅಭಿನಯದ ಅಶ್ವಿನಿ ನಕ್ಷತ್ರ ಸೀರಿಯಲ್ ಅಲ್ಲಿ ಗೆಸ್ಟ್ ರೋಲ್ ಮಾಡಿದ್ದಾರೆ. ಪ್ರಿಯಾ ಸುದೀಪ್ ಆಗಿಯೇ ನಟಿಸಿದ್ದಾರೆ.
ಹಾಗೆ ಈ ಡಿಜಿಟಲ್ ಮೀಟ್ ಅಲ್ಲಿ ಬಂದ ಪ್ರಶ್ನೆಗಳಲ್ಲಿ ನಟನೆ ಬಗ್ಗೆನೂ ಪ್ರಶ್ನೆಗಳು ಬಂದಿವೆ. ಅದಕ್ಕೂ ಪ್ರಿಯಾ ಸುದೀಪ್ ಉತ್ತರ ಕೊಟ್ಟಿದ್ದಾರೆ. ತಮ್ಮ ನಟನೆಯ ಬಗೆಗಿನ ಆಸಕ್ತಿಯ ಬಗ್ಗೆ ಇಲ್ಲೂ ಮಾತನಾಡಿದ್ದಾರೆ. ನಟನೆ ಮಾಡಬಹುದೇನೋ ಅನ್ನುವ ಅರ್ಥದಲ್ಲಿಯೇ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ.
ಕಿಚ್ಚ ಸುದೀಪ್ , ಸಾನ್ವಿ ಸುದೀಪ್, ಸಂಚಿತ್ ಸಂಜೀವ್ ಒಟ್ಟಿಗೆ ಸಿನಿಮಾ ಮಾಡೋ ಐಡಿಯಾ ಇದಿಯಾ? ಈ ರೀತಿ ಚರ್ಚೆಗಳು ಮನೆಯಲ್ಲಿ ಆಗ್ತೀವಿಯಾ? ಈ ರೀತಿಯ ಪ್ರಶ್ನೆಗಳು ಇಲ್ಲಿ ಬಂದಿವೆ.
ಈ ಪ್ರಶ್ನೆ ಕೇಳಿ ಪ್ರಿಯಾ ಸುದೀಪ್ ಅವರು ಅಷ್ಟೆ ಆಶ್ಚರ್ಯ ಪಟ್ಟಿದ್ದಾರೆ. ಖುಷಿನೂ ಪಟ್ಟಿದ್ದಾರೆ. ಮೂರು ಜನರ ಡೇಟ್ಸ್ ಸಿಗಬೇಕಲ್ಲ. ಆದರೆ, ಈ ಐಡಿಯಾ ಚೆನ್ನಾಗಿದೆ ಅಂತಲೂ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ.
ಒಟ್ಟಾರೆ, ಪ್ರಿಯಾ ಸುದೀಪ್ ತಮ್ಮ ಸಂಸ್ಥೆ ಮೂಲಕ ಒಳ್ಳೆ ಕತೆಯ ಚಿತ್ರ ಮಾಡೋ ಪ್ಲಾನ್ ಮಾಡಿದ್ದಾರೆ. ಕತೆಗಳು ಪ್ರಿಯಾ ಅವರಿಗೆ ಇಷ್ಟ ಆದರೆ ಆಯಿತು. ಅಂತಹ ಕತೆಗಳನ್ನ ಚಿತ್ರ ಮಾಡುವ ಯೋಚನೆ ಕೂಡ ಪ್ರಿಯಾ ಸುದೀಪ್ ಅವರಿಗೆ ಇದೆ ಅಂತಲೂ ಹೇಳಬಹುದು.












