DK Shivakumar: ಡಿಕೆಶಿ ಪದಗ್ರಹಣಕ್ಕೆ ಬಂದ ಚಂದನವನದ ಸ್ಟಾರ್ಸ್! ಕಿಚ್ಚ To ರಮ್ಯಾ, ಯಾರ್ಯಾರು ಬಂದ್ರು? | | ACTPnews

ಪದಗ್ರಹಣದಲ್ಲಿ ಸ್ಟಾರ್ ರಂಗು


Last Updated:

ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಪ್ರಮುಖ ಕ್ಷಣದಲ್ಲಿ ಚಿತ್ರರಂಗದ ಸ್ಟಾರ್​​ಗಳೂ ಕೂಡಾ ಭಾಗಿಯಾಗುತ್ತಿದ್ದಾರೆ. ಚಂದನವನದ ತಾರೆಗಳು ಡಿಕೆಶಿ ಪದಗ್ರಹಣಕ್ಕೆ ಆಗಮಿಸಿದ್ದಾರೆ.

ಪದಗ್ರಹಣದಲ್ಲಿ ಸ್ಟಾರ್ ರಂಗು
ಪದಗ್ರಹಣದಲ್ಲಿ ಸ್ಟಾರ್ ರಂಗು

ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ (D.K Shivakumar) ಅವರು ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ (Oath Ceremony) ಮಾಡುತ್ತಿದ್ದಾರೆ. ಡಿಕೆಶಿ ಅವರ ಮಾತಿನ ಪ್ರಕಾರ, ಇಂದು ಒಟ್ಟು 13 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಹೀಗಾಗಿ ಡಿ.ಕೆ ಶಿವಕುಮಾರ್​ ನೇತೃತ್ವದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ.

ಈ ಪ್ರಮುಖ ಕ್ಷಣದಲ್ಲಿ ಚಿತ್ರರಂಗದ ಸ್ಟಾರ್​​ಗಳೂ ಕೂಡಾ ಭಾಗಿಯಾಗುತ್ತಿದ್ದಾರೆ. ಚಂದನವನದ ತಾರೆಗಳು ಡಿಕೆಶಿ ಪದಗ್ರಹಣಕ್ಕೆ ಆಗಮಿಸಿದ್ದಾರೆ. ನಟಿ ರಮ್ಯಾ, ರಾಗಿಣಿ ದ್ವಿವೇದಿ, ಕಿಚ್ಚ ಸುದೀಪ್, ಸೇರಿದಂತೆ ಗಣ್ಯರು ಆಗಮಿಸಿದ್ದಾರೆ.

ನಟಿ ರಮ್ಯಾ ಅವರು ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ರಾಜಕೀಯದಲ್ಲಿದ್ದರೂ ಸಿನಿಮಾದವರ ಜತೆಗಿನ ಡಿಕೆಶಿ ಗೆಳೆತನ ಮುಂಚಿನಿಂದಲೂ ಇದೆ. ಸಿನಿ ಇಂಡಸ್ಟ್ರಿಗೆ ಮಾರ್ಗದರ್ಶಕನಾಗಿ, ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

ಯಾರ್ಯಾರು ಬಂದ್ರು?

ಡಿಕೆಶಿ ಪದಗ್ರಹಣಕ್ಕೆ ಅಭಿನಯಚಕ್ರವರ್ತಿ ಕಿಚ್ಚ ಸುದೀಪ್, ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ, ಸಾಧು ಕೋಕಿಲ, ಆಲ್ ಓಕೆ ಅಲೋಕ್, ಜಯಮಾಲ, ಡಾಲಿ ಧನಂಜಯ್, ರಾಗಿಣಿ ದ್ವಿವೇದಿ, ಅರ್ಜುನ್ ಜನ್ಯ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಬಂದಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports