Pregnancy Symptoms: ಗರ್ಭಿಣಿಯಾದ್ರೆ ಕಾಣಿಸಿಕೊಳ್ಳುತ್ತೆ ಈ ಲಕ್ಷಣಗಳು; ನಿಮಗೂ ಹೀಗೇ ಆಗ್ತಿದ್ಯಾ? | What are 10 common signs of pregnancy | ಲೈಫ್‌ಸ್ಟೈಲ್ | ACTPnews

News18


Last Updated:

Pregnancy Symptoms: ಮಗು (Baby) ಜನಿಸಲಿದೆ ಅಂತ ತಿಳಿದ ತಕ್ಷಣ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಒಂದು ವೇಳೆ ನೀವು ಸಹ ಗರ್ಭಿಣಿಯಾಗಿದ್ದರೆ ಈ ನಿಮ್ಮ ದೇಹದಲ್ಲಾಗುವ ಈ ಕೆಳಗೆ ನೀಡಲಾದ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಬಹುದು. ಹಾಗಾದ್ರೆ ಗರ್ಭಧಾರಣೆಯ 10 ಆರಂಭಿಕ ಚಿಹ್ನೆಗಳು ಯಾವುವು ಅಂತ ತಿಳಿಯೋಣ ಬನ್ನಿ.

News18
News18

ಸಾಮಾನ್ಯವಾಗಿ ಗರ್ಭಿಣಿಯಾಗಿರುವುದನ್ನು (Pregnancy) ಅರ್ಥ ಮಾಡಿಕೊಳ್ಳಲು ಗರ್ಭಧಾರಣೆ ಪರೀಕ್ಷೆಯನ್ನು (Pregnancy Test) ಮಾಡಿಸಿಕೊಳ್ಳುವುದು ಅಗತ್ಯ. ಅಲ್ಲದೇ ಗರ್ಭಧಾರಣೆಯನ್ನು ಖಾತ್ರಿ ಪಡಿಸಿಕೊಳ್ಳಲು ಪ್ರೆಗ್ನೆನ್ಸಿ ಟೆಸ್ಟ್​ ಏಕೈಕ ಮಾರ್ಗ ಕೂಡ ಹೌದು. ಮಗು (Baby) ಜನಿಸಲಿದೆ ಅಂತ ತಿಳಿದ ತಕ್ಷಣ ಮಹಿಳೆಯರ ದೇಹದಲ್ಲಿ (Women Body) ಅನೇಕ ಬದಲಾವಣೆಗಳು ಉಂಟಾಗುತ್ತದೆ. ಒಂದು ವೇಳೆ ನೀವು ಸಹ ಗರ್ಭಿಣಿಯಾಗಿದ್ದರೆ ಈ ನಿಮ್ಮ ದೇಹದಲ್ಲಾಗುವ ಈ ಕೆಳಗೆ ನೀಡಲಾದ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಬಹುದು. ಹಾಗಾದ್ರೆ ಗರ್ಭಧಾರಣೆಯ 10 ಆರಂಭಿಕ ಚಿಹ್ನೆಗಳು ಯಾವುವು ಅಂತ ತಿಳಿಯೋಣ ಬನ್ನಿ.

ಸಾಂದರ್ಭಿಕ ಚಿತ್ರ
  • ಸ್ತನಗಳಲ್ಲಿ ಅಸ್ವಸ್ಥತೆ: ಊದಿಕೊಂಡ ಮತ್ತು ಸ್ತನಗಳಲ್ಲಿ ಅಹಿತಕರ ಭಾವನೆ (ಅನ್​ಕಂಫರ್ಟ್​ಟೇಬಲ್​ ಫೀಲ್) ಆಗುವುದು ಗರ್ಭಧಾರಣೆಯ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿದೆ. ಇಂತಹ ಸಮಯದಲ್ಲಿ ಸ್ತನಗಳಲ್ಲಿ ಸ್ವಲ್ಪ ನೋವು ಮತ್ತು ಕೊಂಚ ಭಾರವನ್ನು ಅನುಭವಿಸಬಹುದು. ವಿಶೇಷವಾಗಿ ನಿಮ್ಮ ಪಿರಿಯಡ್ಸ್​ ಡೇಟ್​ ತುಂಬಾ ದೂರದಲ್ಲಿರುವಾಗ ಇಂತಹ ಅನುಭವಗಳು ಉಂಟಾಗುತ್ತದೆ.
  • ವಾಕರಿಕೆ: ಗರ್ಭಾವಸ್ಥೆಯ ಮೊದಲ ಲಕ್ಷಣಗಳಲ್ಲಿ ವಾಕರಿಕೆ ಒಂದಾಗಿದೆ. ಯಾವುದೇ ನಿರ್ದಿಷ್ಟ ಕಾರಣವಿಲ್ಲದೇ ವಾಕರಿಕೆ, ಹೊಟ್ಟೆ ನೋವು ಕಾಣಿಸಿಕೊಂಡರೆ ನಿಮ್ಮ ಮುಟ್ಟು ಆಗದಿದ್ದರೆ ಇಂತಹ ಮಹಿಳೆಯರು ಗರ್ಭಿಣಿಯಾಗಿದ್ದಾರೆ ಎಂದರ್ಥ.
  • ಕಿಬ್ಬೊಟ್ಟೆಯ ಸೆಳೆತ: ಮುಟ್ಟಾದಾಗ ಕಾಡುವ ಕಿಬ್ಬೊಟ್ಟೆಯ ಸೆಳೆತವು ನೀವು ಗರ್ಭಿಣಿಯಾದಗಲೂ ಕಾಡಬಹುದು. ಬೆಳೆಯುತ್ತಿರುವ ಮಗುವಿಗೆ ಜಾಗವನ್ನು ನೀಡಲು ಗರ್ಭಾಶಯವು ವಿಸ್ತರಿಸುವುದರಿಂದ ಈ ನೋವು ಉಂಟಾಗುತ್ತದೆ.
  • ಕೆಲ ಆಹಾರ ತಿನ್ನಲು ಇಷ್ಟವಾಗುವುದು, ಮತ್ತೆ ಕೆಲವನ್ನು ಕಂಡರೆ ವಾಕರಿಕೆ ಬರುವುದು: ನೀವು ಗರ್ಭಿಣಿಯಾಗಿದ್ದರೆ ಕೆಲವೊಮ್ಮೆ ನಿಮಗಿಷ್ಟವಿರುವ ಆಹಾರ ಕಂಡರೂ ವಾಕರಿಕೆ ಬರಬಹುದು. ಇದು ಕೂಡ ಗರ್ಭಧಾರಣೆಯ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿರಬಹುದು. ಎರಡನೇಯದಾಗಿ, ನೀವು ವಿವಿಧ ರೀತಿಯ ಹೊಸ ಆಹಾರಗಳನ್ನು ತಿನ್ನಬೇಕು ಅಂತ ಬಯಸಬಹುದು.

ಸಾಂದರ್ಭಿಕ ಚಿತ್ರ
  • ಹೊಟ್ಟೆ ಉಬ್ಬುವಿಕೆ: ನೀವು ಏನನ್ನು ತಿನ್ನದಿದ್ದರೂ ಸಹ ಹೊಟ್ಟೆ ಉಬ್ಬುವಿಕೆ ಅನುಭವವಾದರೆ ಇದು ಪ್ರೊಜೆಸ್ಟರಾನ್ ಹಾರ್ಮೋನ್ ಆಗಿರಬಹುದು. ಗರ್ಭಾವಸ್ಥೆಯ ಆರಂಭಿಕ ಲಕ್ಷಣಗಳಲ್ಲಿ ನಿಧಾನ ಜೀರ್ಣಾಂಗ ವ್ಯವಸ್ಥೆ, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬುವಿಕೆ ಕೂಡ ಒಂದಾಗಿರಬಹುದು.
  • ಸಾಮಾನ್ಯಕ್ಕಿಂತ ಹೆಚ್ಚು ದೇಹದ ಉಷ್ಣತೆ: ನಿಮ್ಮ ದೇಹದ ಉಷ್ಣತೆಯನ್ನು ಅಳೆಯುವ ಮೂಲಕ ನೀವು ಗರ್ಭಿಣಿಯಾಗಿದ್ದೀರಾ ಎಂಬುವುದನ್ನು ಪತ್ತೆ ಹಚ್ಚಬಹುದು. ನೀವು ಗರ್ಭಿಣಿಯಾಗಿದ್ದಾಗ, ಹಾರ್ಮೋನ್ ಪ್ರೊಜೆಸ್ಟರಾನ್ ನಿಮ್ಮ ತಳದ ದೇಹದ ಉಷ್ಣತೆಯನ್ನು ಹೆಚ್ಚಿಸುವಲ್ಲಿ ಕಾರಣವಾಗಿರುತ್ತದೆ.
  • ವಾಸನೆ: ಬೇಯಿಸಿದ ಮೊಟ್ಟೆಯ ಪರಿಮಳದಂತೆ ನೀವು ಒಂದು ರೀತಿಯ ವಾಸನೆಯನ್ನು ಸಹ ಅನುಭವಿಸಬಹುದು. ನಿಮಗೆ ಮೊದಲು ತೊಂದರೆ ಕೊಡದ ಕೆಲವು ವಾಸನೆಗಳು ನಂತರ ನಿಮಗೆ ಉಸಿರು ಗಟ್ಟಿಸುವಂತೆ ಮಾಡುತ್ತಿದ್ದರೆ, ನೀವು ಗರ್ಭಿಣಿಯಾಗಿದ್ದೀರಿ ಎಂದರ್ಥ.
  • ಸದಾ ಆಯಾಸದ ಭಾವನೆ: ಅತಿಯಾದ ಆಯಾಸವು ಗರ್ಭಧಾರಣೆಯ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಸಾಮಾನ್ಯವಾದ ದೈನಂದಿನ ಕೆಲಸಗಳನ್ನು ಮಾಡುವುದರಿಂದಲೂ ನಿಮಗೆ ತುಂಬಾ ದಣಿವು ಉಂಟಾಗುತ್ತಿದ್ದರೆ, ಇದು ನಿಮ್ಮ ದೇಹದಲ್ಲಿನ ಹೆಚ್ಚುವರಿ ಹಾರ್ಮೋನುಗಳ ಕಾರಣದಿಂದಾಗಿರಬಹುದು.
  • ಮೂತ್ರ ವಿಸರ್ಜಿಸಲು ಆಗಾಗ್ಗೆ ಪ್ರಚೋದನೆ: ನೀವು ಯಾವಾಗಲೂ ಬಾತ್ರೂಮ್ಗೆ ಹೋಗಬೇಕು ಅನಿಸುತ್ತಿದ್ದರೆ, ನಿಮ್ಮ ಮೂತ್ರಕೋಶವು ಅಧಿಕಾವಧಿ ಕೆಲಸ ಮಾಡುತ್ತಿದೆ ಎಂದರ್ಥ. ಏಕೆಂದರೆ ನಿಮ್ಮ ದೇಹವು ಹೆಚ್ಚುವರಿ ದ್ರವಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ, ನೀವು ಆಗಾಗ್ಗೆ ಮಧ್ಯರಾತ್ರಿಯಲ್ಲಿ ಶೌಚಾಲಯಕ್ಕೆ ಹೋಗುತ್ತಿದ್ದರೆ, ಇದು ಗರ್ಭಧಾರಣೆಯ ಮತ್ತೊಂದು ಚಿಹ್ನೆಯಾಗಿರಬಹುದು.
  • ರಕ್ತಸ್ರಾವ: ಇದು ತುಂಬಾ ಸಾಮಾನ್ಯವಲ್ಲದಿದ್ದರೂ, ನೀವು ಲಘು ರಕ್ತಸ್ರಾವವನ್ನು ಅನುಭವಿಸಬಹುದು. ಮಹಿಳೆಯರು ಹೆಚ್ಚಾಗಿ ರಕ್ತಸ್ರಾವವಾದರೆ ಮುಟ್ಟಾಗಿದ್ದೇವೆ ಅಂತ ತಪ್ಪಾಗಿ ಭಾವಿಸುತ್ತಾರೆ. ಆದರೆ ಇದು ಮುಟ್ಟಿಗಿಂತಲೂ ಹಗುರವಾಗಿದೆ ಮತ್ತು ದೀರ್ಘಕಾಲ ಉಳಿಯುವುದಿಲ್ಲ ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed