ರಿಷಬ್ ಶೆಟ್ಟಿ ತೆರೆ ಮೇಲೆ ಅಷ್ಟೆ ಹೀರೋ ಅಲ್ಲ, ಮನೆಯಲ್ಲೂ ಹೀರೋನೆ. ರಿಷಬ್ ಶೆಟ್ಟಿ ಸುಮ್ನೆ ಅಲ್ಲ, ಅಪ್ಪನಾಗಿ ಮಕ್ಕಳನ್ನ ಅದೆಷ್ಟು ಕೇರ್ ಮಾಡ್ತಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ.
ಮನೆಯಲ್ಲೂ ಗ್ರೇಟ್ ಹೀರೋ
(ಚಿತ್ರ ಕೃಪೆ: ಪ್ರಗತಿ ಶೆಟ್ಟಿ ಇನ್ಸ್ಟಾಗ್ರಾಮ್)
ಆದರೆ, ಇದನ್ನ ವಿಷ್ಯೂಲಿ ಹೇಳಿದ್ದಾರೆ. ಮಗಳು ರಾಧ್ಯಾ ಶೆಟ್ಟಿ ಅಂದ್ರೆ ಅದೆಷ್ಟು ಪ್ರೀತಿ ಅಂತಲೂ ತೋರಿಸಿದ್ದಾರೆ. ಮಗ ರಣ್ವಿತ್ ಶೆಟ್ಟಿಯನ್ನ ಅದೆಷ್ಟು ಮುದ್ದಿಸುತ್ತಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ.
ಮಕ್ಕಳ ಜೊತೆಗೆ ರಿಷಬ್ ಶೆಟ್ಟಿ ಹೇಗೆ ಇರ್ತಾರೆ. ಮನೆಯಲ್ಲಿ ಇವರು ಅಪ್ಪನಾಗಿ ಅದೆಷ್ಟು ಗ್ರೇಟ್ ಅನ್ನುವುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ. ಮಕ್ಕಳಿಗೆ ಊಟ ಮಾಡಿಸೋದು, ಮಕ್ಕಳಿಗೆ ಟೈಮ್ ಕೊಡುವುದು, ಮಕ್ಕಳ ಜೊತೆಗೆ ಮಕ್ಕಳಾಗಿ ಆಡೋದು.
ಹೀಗೆ ರಿಷಬ್ ಶೆಟ್ರು ಅಪ್ಪನಾಗಿ ಅದೆಷ್ಟು ಸೂಪರ್ ಅನ್ನೋದನ್ನ ಅಷ್ಟೆ ವಿಶೇಷವಾಗಿಯೇ ಹೇಳಿದ್ದಾರೆ. ಮಕ್ಕಳ ಜೊತೆಗಿನ ರಿಷಬ್ ಶೆಟ್ಟಿ ಅವರ ಹಳೆಯ ವಿಡಿಯೋ ಕಲೆಕ್ಟ್ ಮಾಡಿದ್ದಾರೆ. ಅದನ್ನ ಒಂದು ವಿಡಿಯೋ ಮಾಡಿ, ಹ್ಯಾಪಿ ಫಾದರ್ಸ್ ಡೇ ಅಂತಲೂ ಹೇಳಿದ್ದಾರೆ.
ಪ್ರಗತಿ ಶೆಟ್ಟಿ ಅವರು ಈ ಒಂದು ವಿಡಿಯೋವನ್ನ ಫಾದರ್ಸ್ ಡೇಗಾಗಿಯೇ ಮಾಡಿಸಿದ್ದಾರೆ. ಅದನ್ನ ಇನ್ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ. ಇಂಗ್ಲಿಷ್ ಅಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಅದು ಮುಂದೆ ಇದೆ ಓದಿ.
ಫಾದರ್ಸ್ ಡೇಗೆ ಪ್ರಗತಿ ಶೆಟ್ಟಿ ಸ್ಪೆಷಲ್ ವಿಶ್
(ಚಿತ್ರ ಕೃಪೆ: ಪ್ರಗತಿ ಶೆಟ್ಟಿ ಇನ್ಸ್ಟಾಗ್ರಾಮ್)
“A hero on screen, but an even bigger hero at home. Happy Father’s Day to the amazing man who completes our family. Wishing you all the love and happiness you deserve today and always “
ಈ ಸಾಲುಗಳ ಸಂಪೂರ್ಣ ಅರ್ಥ ಹೀಗೆ ಬರುತ್ತದೆ. ಬೆಳ್ಳಿ ತೆರೆ ಮೇಲೆ ಹೀರೋ. ಆದರೆ, ಅದಕ್ಕೂ ಹೆಚ್ಚಾಗಿ ರಿಷಬ್ ಶೆಟ್ಟಿ ಮನೆಯಲ್ಲಿ ಅತಿ ದೊಡ್ಡ ಹೀರೋ ಅಂತಲೇ ಬರೆದಿದ್ದಾರೆ.
“>ಪ್ರಗತಿ ಶೆಟ್ಟಿ ಅವರ ಈ ಒಂದು ವಿಶೇಷ ವಿಡಿಯೋದ ಪೋಸ್ಟ್ ಅನ್ನ ಅನೇಕರು ನೋಡಿದ್ದಾರೆ. ಹ್ಯಾಪಿ ಫಾದರ್ಸ್ ಡೇ ಅಂತ ವಿಶ್ ಕೂಡ ಮಾಡಿದ್ದಾರೆ. ರೆಡ್ ಹಾರ್ಟ್ ಇಮೋಜಿ ಇಲ್ಲಿ ಇದ್ದೇ ಇವೆ.
ರಿಷಬ್ ಶೆಟ್ರು ಅದೆಷ್ಟು ಗ್ರೇಟ್ ಅನ್ನೋದನ್ನು ಇಲ್ಲೊಬ್ಬರು ತುಂಬಾನೆ ಚೆನ್ನಾಗಿ ಬರೆದಿದ್ದಾರೆ. ಅದು ಈ ರೀತಿ ಇದೆ. “ಒಳ್ಳೆ ಗಂಡ, ಒಳ್ಳೆ ತಂದೆ, ಒಳ್ಳೆ ಮನುಷ್ಯತ್ವ ಇರೋ ಮನುಷ್ಯ, ಮಾನವೀಯತೆ ಹಾಗೂ ಸರಳತೆ ಇನ್ನ ಏನಿಲ್ಲ ಇವರಲ್ಲಿ, ನಿಜವಾಗ್ಲೂ ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತೆ” ಅಂತಲೇ ಹೇಳಿದ್ದಾರೆ ಅಂತಲೇ ಹೇಳಬಹುದು.












