Prabhas: ಬಾಹುಬಲಿ ಯಶಸ್ಸಿನ ಬಳಿಕ ಸರಿಯಾಗಿ ನಿದ್ದೆಯೇ ಮಾಡಿಲ್ಲ! ಆ ದಿನಗಳನ್ನು ನೆನೆದು ಪ್ರಭಾಸ್ ಭಾವುಕ | | ACTPnews

ಪ್ರಭಾಸ್


Last Updated:

‘ಬಾಹುಬಲಿ’ಗೂ ಮೊದಲು ತಮ್ಮ ಸಿನಿಮಾಗಳಿಗೆ ಇದ್ದ ಒತ್ತಡ ಮತ್ತು ‘ಬಾಹುಬಲಿ’ ಬಳಿಕದ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿತ್ತು. ಈ ಚಿತ್ರದ ನಂತರ ತಮ್ಮ ಮೇಲೆ ಇದ್ದ ಜವಾಬ್ದಾರಿ ಸಾವಿರ ಪಟ್ಟು ಹೆಚ್ಚಾಯಿತು ಎಂದು ಪ್ರಭಾಸ್ ತಿಳಿಸಿದ್ದಾರೆ.

 ಪ್ರಭಾಸ್
ಪ್ರಭಾಸ್

‘ಬಾಹುಬಲಿ’ (Baahubali) ಸಿನಿಮಾ ಪ್ರಭಾಸ್ (Prabhas) ಅವರ ಸಿನಿ ಜೀವನಕ್ಕೆ ಹೊಸ ತಿರುವು ನೀಡಿದ ಚಿತ್ರ. ಈ ಸಿನಿಮಾ ಅವರನ್ನು ತೆಲುಗು ಚಿತ್ರರಂಗದ ನಾಯಕನಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರೂಪಿಸಿತು. ಆದರೆ, ಈ ಅಭೂತಪೂರ್ವ ಯಶಸ್ಸಿನ ಹಿಂದೆ ಯಾರಿಗೂ ತಿಳಿಯದ ಮತ್ತೊಂದು ಕಥೆಯೂ ಇತ್ತು. ಇತ್ತೀಚೆಗೆ ‘ಬಾಹುಬಲಿ ದಿ ಟಾರ್ಚ್‌ಬೇರರ್’ (Baahubali – The Torchbearer) ಸಾಕ್ಷ್ಯಚಿತ್ರದಲ್ಲಿ ಮಾತನಾಡಿರುವ ಪ್ರಭಾಸ್, ಈ ಚಿತ್ರದ ಯಶಸ್ಸು ತಮ್ಮ ಜೀವನದಲ್ಲಿ ಎಷ್ಟು ದೊಡ್ಡ ಬದಲಾವಣೆ ತಂದಿತ್ತೋ, ಅಷ್ಟೇ ಪ್ರಮಾಣದಲ್ಲಿ ಮಾನಸಿಕ ಒತ್ತಡವನ್ನೂ ತಂದಿತ್ತು ಎಂದು ಮನಬಿಚ್ಚಿ ಹೇಳಿದ್ದಾರೆ.

ಸಾಕ್ಷ್ಯಚಿತ್ರದಲ್ಲಿ ಮಾತನಾಡಿದ ಪ್ರಭಾಸ್, ‘ಬಾಹುಬಲಿ’ ಬಿಡುಗಡೆಯಾದ ನಂತರ ಸುಮಾರು ಎರಡು ರಿಂದ ಮೂರು ವರ್ಷಗಳ ಕಾಲ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ. ಚಿತ್ರವು ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದ್ದರಿಂದ, ಮುಂದಿನ ಪ್ರತಿಯೊಂದು ಹೆಜ್ಜೆಯೂ ಅತ್ಯಂತ ಜವಾಬ್ದಾರಿಯುತವಾಗಿ ಇಡಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಅವರು ವಿವರಿಸಿದ್ದಾರೆ.

ಪ್ರಭಾಸ್ ಹೇಳುವಂತೆ, ‘ಬಾಹುಬಲಿ’ಗೂ ಮೊದಲು ತಮ್ಮ ಸಿನಿಮಾಗಳಿಗೆ ಇದ್ದ ಒತ್ತಡ ಮತ್ತು ‘ಬಾಹುಬಲಿ’ ಬಳಿಕದ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿತ್ತು. ಈ ಚಿತ್ರದ ನಂತರ ತಮ್ಮ ಮೇಲೆ ಇದ್ದ ಜವಾಬ್ದಾರಿ ಸಾವಿರ ಪಟ್ಟು ಹೆಚ್ಚಾಯಿತು ಎಂದು ಅವರು ತಿಳಿಸಿದ್ದಾರೆ.

‘ಬಾಹುಬಲಿ’ ನಂತರ ಯಾವ ರೀತಿಯ ಸಿನಿಮಾ ಮಾಡಬೇಕು ಎಂಬ ಬಗ್ಗೆ ತಮ್ಮ ತಂಡದೊಂದಿಗೆ ಅನೇಕ ಚರ್ಚೆಗಳು ನಡೆದಿದ್ದವು ಎಂದು ಪ್ರಭಾಸ್ ತಿಳಿಸಿದ್ದಾರೆ. ಮತ್ತೊಂದು ಭವ್ಯ ದೃಶ್ಯ ವೈಭವದ ಸಿನಿಮಾ ಮಾಡಬೇಕೇ, ಅಥವಾ ಸಂಪೂರ್ಣ ವಿಭಿನ್ನ ಕಥೆಯನ್ನು ಆಯ್ಕೆ ಮಾಡಬೇಕೇ ಎಂಬ ಗೊಂದಲ ಹಲವು ತಿಂಗಳು ಮುಂದುವರಿದಿತ್ತು ಎಂದು ಅವರು ಹೇಳಿದ್ದಾರೆ.

ಈ ಯಶಸ್ಸಿನ ಕಾರಣದಿಂದಲೇ ‘ಸಾಹೋ’ ಹಾಗೂ ‘ರಾಧೆ ಶ್ಯಾಮ್’ನಂತಹ ಅದ್ಧೂರಿ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಯಿತು. ವಿಶೇಷವಾಗಿ ‘ರಾಧೆ ಶ್ಯಾಮ್’ ಚಿತ್ರದ ಭವ್ಯ ಹಡಗಿನ ಸೆಟ್‌ಗಳಂತಹ ದೃಶ್ಯಗಳನ್ನು ರೂಪಿಸುವ ಆತ್ಮವಿಶ್ವಾಸವೂ ‘ಬಾಹುಬಲಿ’ಯ ಯಶಸ್ಸಿನಿಂದಲೇ ಬಂದಿತು ಎಂದು ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರಭಾಸ್ ಅವರ ಈ ಮಾತುಗಳು ಅನೇಕ ಅಭಿಮಾನಿಗಳ ಮನ ಮುಟ್ಟಿವೆ. ಸಾಮಾನ್ಯವಾಗಿ ದೊಡ್ಡ ಯಶಸ್ಸಿನ ಹಿಂದಿನ ಸಂಭ್ರಮ ಮಾತ್ರ ಕಾಣುವ ಪ್ರೇಕ್ಷಕರಿಗೆ, ಅದರ ಹಿಂದೆ ಇರುವ ಮಾನಸಿಕ ಒತ್ತಡ ಮತ್ತು ಜವಾಬ್ದಾರಿಯ ಬಗ್ಗೆ ನಟ ಪ್ರಾಮಾಣಿಕವಾಗಿ ಮಾತನಾಡಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed