PM Narendra Modi Movies: ಬೆಳ್ಳಿ ಪರದೆ ಮೇಲೆ ಮೋದಿ ಜೀವನ, ಸಿನಿಮಾ-ವೆಬ್ ಸರಣಿಯಲ್ಲಿ ಪ್ರಧಾನಿಯ ಅದ್ಭುತ ಚಿತ್ರಣ! | | ACTPnews

PM Narendra Modi Movies: ಬೆಳ್ಳಿ ಪರದೆ ಮೇಲೆ ಮೋದಿ ಜೀವನ, ಸಿನಿಮಾ-ವೆಬ್ ಸರಣಿಯಲ್ಲಿ ಪ್ರಧಾನಿಯ ಅದ್ಭುತ ಚಿತ್ರಣ! |


ಪಿ.ಎಂ.ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಆಧರಿಸಿದ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ವಿವೇಕ್ ಓಬೆರಾಯ್ ಅವರು ಪ್ರಧಾನಿ ಮೋದಿ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಓಮುಂಗ್ ಕುಮಾರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರ 2019 ರಲ್ಲಿ ರಿಲೀಸ್ ಆಗಿದೆ. ಬಹು ಕೋಟಿ ವೆಚ್ಚದಲ್ಲಿಯೇ ಈ ಸಿನಿಮಾ ತಯಾರಾಗಿತ್ತು.

ಈ ಸಿನಿಮಾದಲ್ಲಿ ಪ್ರಧಾನಿ ಮೋದಿ ಅವರು ಆರಂಭದ ಜೀವನ ಕತೆ ಇದೆ. ಮುಖ್ಯಮಂತ್ರಿ ಆದ ಸಮಯದ ಚಿತ್ರಣವು ಇದೆ. ಪ್ರಧಾನಿಯಾಗಿ ಬೆಳೆದ ಪಯಣವೂ ಇದೆ.

ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್

ಇದು 2019-2020 ರಲ್ಲಿ ಬಂದಿದೆ. ಆದರೆ, ಇದು ಒಟಿಟಿಯಲ್ಲಿ ಬಂದ ಸರಣಿ ಆಗಿದೆ. ಈ ಸರಣಿಯಲ್ಲಿ ಮೋದಿ ಅವರ ಜೀವನ ಚಿತ್ರಣ ಇದೆ. ರಾಜಕೀಯ ಜೀವನದ ವಿವಿಧ ಹಂತವನ್ನು ಕಟ್ಟಿಕೊಡಲಾಗಿದೆ.

ಕಲಾವಿದರಾದ ಫೈಸಲ್ ಖಾನ್, ಆಶಿಶ್ ಶರ್ಮಾ ಮತ್ತು ಮಹೇಶ್ ಠಾಕೂರ್ ಅವರು ಮೋದಿ ಅವರ ಜೀವನದ ವಿವಿಧ ಹಂತವನ್ನ ಜೀವಿಸಿದ್ದಾರೆ. ಉಮೇಶ್ ಶುಕ್ಲಾ ಈ ಸರಣಿಯನ್ನ ಡೈರೆಕ್ಟ್ ಮಾಡಿದ್ದಾರೆ.

ಮೋದಿ ಬಾಲ್ಯದ ಘಟನೆಯ ಚಿತ್ರ

ಪ್ರಧಾನಿ ಮೋದಿ ಅವರ ಬಾಲ್ಯದ ಘಟನೆ ಒಂದನ್ನ ಈ ಚಲೋ ಜೀತೆ ಹೈ ಚಿತ್ರ ಆಧರಿಸಿದೆ. ಆದರೆ, ಇದು ದೊಡ್ಡ ಸಿನಿಮಾ ಏನೂ ಅಲ್ಲ ಬಿಡಿ. ಕೇವಲ 32 ನಿಮಿಷದ ಚಿತ್ರ ಇದಾಗಿದೆ.

ಈ ಸಿನಿಮಾದಲ್ಲಿ ಮಂಗೇಶ್ ಹಡವಾಲೆ ಡೈರೆಕ್ಷನ್ ಮಾಡಿದ್ದಾರೆ. 2018 ಜುಲೈ-11 ರಂದು ಈ ಚಿತ್ರ ರಿಲೀಸ್ ಆಗಿತ್ತು. ಧೈರ್ಯ ದರ್ಜಿ, ದೇವ್ ಮೋದಿ, ದೀಪ್ತಿ ಅವ್ಲಾನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮಾ ವಂದೇ ಸಿನಿಮಾ

ಈ ಚಿತ್ರ ಕೂಡ ನರೇಂದ್ರ ಮೋದಿ ಅವರ ಜೀವನನ್ನ ಆಧರಿಸಿದೆ. ಮಲೆಯಾಳಂ ನಟ ಉನ್ನಿ ಮುಕುಂದನ್ ಈ ಚಿತ್ರದಲ್ಲಿ ನರೇಂದ್ರ ಮೋದಿ ಅವರ ಪಾತ್ರವನ್ನ ನಿರ್ವಹಿಸಿದ್ದಾರೆ.

ಕ್ರಾಂತಿ ಕುಮಾರ್ ಸಿ.ಎಚ್ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಅಲ್ಲಿ ಈ ಚಿತ್ರ ಬರುತ್ತದೆ. ಈ ಚಿತ್ರ ಕಳೆದ ವರ್ಷ ಡಿಸೆಂಬರ್ ಅಲ್ಲಿ ಶುರು ಆಗಿದೆ.

2027 ರಲ್ಲಿ ಈ ಚಿತ್ರ ರಿಲೀಸ್ ಅಂತ ಸಿನಿಮಾ ತಂಡ ಹೇಳಿಕೊಂಡಿದೆ. ನರೇಂದ್ರ ಮೋದಿ ಅವರ ಜೀವನ ಚರಿತ್ರೆಯನ್ನ ಇದು ಆಧರಿಸಿದೆ. ಸಾಮಾನ್ಯ ಆರಂಭದ ದಿನಗಳು ಹಾಗೂ ರಾಷ್ಟ್ರೀಯ ನಾಯಕತ್ವದವರೆಗಿನ ಪಯಣವನ್ನ ಈ ಚಿತ್ರ ಕಟ್ಟಿಕೊಡುತ್ತದೆ.

ಇನ್ನುಳಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು 76 ನೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಹಾಗೆ ಇವರ ಜೀವನ ಚರಿತ್ರೆಯನ್ನ ಆಧರಿಸಿದ ಚಿತ್ರಗಳು ನರೇಂದ್ರ ಮೋದಿ ಅವರು ನಡೆದು ಬಂದ ಹಾದಿಯನ್ನ ತೋರಿಸುವ ಕೆಲಸ ಮಾಡಿವೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed