PM Modi: ಪ್ರಧಾನಿ ಮೋದಿ ಅವರು ಕೊಟ್ಟ ಒಂದು ಐಡಿಯಾಗೆ ಐಟಿ ಮಂದಿ ಖುಷ್, ನಾವು ಬಯಸುತ್ತಿರುವುದು ಇದನ್ನೇ ಎಂದ ಉದ್ಯೋಗಿಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರಿನಲ್ಲಿ ಸಂಚಲನ


Last Updated:

ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಬೆಲೆ ಏರಿಕೆ, ಪಶ್ಚಿಮ ಏಷ್ಯಾ ಯುದ್ಧದ ನಡುವೆ ವರ್ಕ್ ಫ್ರಂ ಹೋಮ್, ರಿಮೋಟ್ ವರ್ಕಿಂಗ್ ಕರೆ, ಬೆಂಗಳೂರಿನ ಐಟಿ ಉದ್ಯೋಗಿಗಳು ಖುಷಿ, ರಿಯಲ್ ಎಸ್ಟೇಟ್ ಲಾಬಿ ಚಿಂತೆ.

ಬೆಂಗಳೂರಿನಲ್ಲಿ ಸಂಚಲನ
ಬೆಂಗಳೂರಿನಲ್ಲಿ ಸಂಚಲನ

ಬೆಂಗಳೂರಿನ (Bengaluru) ರಸ್ತೆಗಳಲ್ಲಿ (Road) 10 ಕಿಲೋಮೀಟರ್ ದೂರ ಕ್ರಮಿಸಲು ಒಂದು ಜನ್ಮವೇ ಬೇಕು ಎನ್ನುವಷ್ಟರ ಮಟ್ಟಿಗೆ ಟ್ರಾಫಿಕ್ (Traffic) ಕಿರಿಕಿರಿ ಅನುಭವಿಸುತ್ತಿರುವ ಐಟಿ (IT) ಉದ್ಯೋಗಿಗಳಿಗೆ ಈಗ ಸಾಕ್ಷಾತ್ ಪ್ರಧಾನಿ ನರೇಂದ್ರ ಮೋದಿಯವರೇ (Prime Minister Narendra Modi) ಬೆಂಬಲವಾಗಿ ನಿಂತಿದ್ದಾರೆ. ಹೌದು, ಹೈದರಾಬಾದ್‍ನಲ್ಲಿ ಮಾತನಾಡಿದ ಮೋದಿ, ಪಶ್ಚಿಮ ಏಷ್ಯಾದ ಯುದ್ಧದ (War) ಕಾರ್ಮೋಡ ಮತ್ತು ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆಯನ್ನು ಎದುರಿಸಲು ಭಾರತೀಯರು ಮತ್ತೆ ‘ಮನೆಯಿಂದ ಕೆಲಸ’ (Work From Home) ಮಾಡಬೇಕೆಂದು ಕರೆ ನೀಡಿದ್ದಾರೆ.

ಏನಿದು ಮಾಸ್ಟರ್ ಪ್ಲಾನ್?

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ದೇಶದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಅನಗತ್ಯ ಪ್ರಯಾಣ ತಗ್ಗಿಸಿ, ತೈಲ ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡಲು ರಿಮೋಟ್ ವಕಿರ್ಂಗ್ ಮತ್ತು ವರ್ಚುವಲ್ ಮೀಟಿಂಗ್‍ಗಳೇ ಏಕೈಕ ದಾರಿ ಎಂದು ಮೋದಿ ಪ್ರತಿಪಾದಿಸಿದ್ದಾರೆ. ಇದನ್ನು ಕೇವಲ ಸೌಲಭ್ಯವಲ್ಲ, ಬದಲಾಗಿ ರಾಷ್ಟ್ರೀಯ ಜವಾಬ್ದಾರಿ ಎಂದು ಅವರು ಕರೆದಿದ್ದಾರೆ ಎಂದು ನ್ಯೂಸ್ 18 ಇಂಗ್ಲಿಷ್ ವೆಬ್ ಸೈಟ್ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಸಂಚಲನ

ಮೋದಿಯವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಬೆಂಗಳೂರಿನ ಐಟಿ ಮಂದಿ ಮತ್ತು ಸೋಷಿಯಲ್ ಮೀಡಿಯಾ ಪೇಜ್‍ಗಳು ಫುಲ್ ವೈರಲ್ ಆಗುತ್ತಿವೆ. ನಾವು ತುಂಬಾ ದಿನದಿಂದ ಕೇಳುತ್ತಿದ್ದೇವೆ. ಈ ಟ್ರಾಫಿಕ್ ಬೇಸರ ಮೂಡಿಸಿದೆ. “ನಮ್ಮ ಮ್ಯಾನೇಜರ್ ಮೆದುಳು ಕಡಲೆಕಾಯಿ ಗಾತ್ರದ್ದು, ಅವರಿಗೆ ಉತ್ಪಾದಕತೆಗಿಂತ ನಮ್ಮನ್ನು ಕಣ್ಣೆದುರು ಕುರಿಸಿಕೊಳ್ಳುವ ಅಹಂಕಾರವೇ ಮುಖ್ಯ” ಎಂದು ಉದ್ಯೋಗಿಗಳು ಕಿಡಿಕಾರುತ್ತಿದ್ದಾರೆ. ಸರಾಸರಿ 63 ನಿಮಿಷಗಳನ್ನು ಕೇವಲ 19 ಕಿಮೀ ಕ್ರಮಿಸಲು ವ್ಯಯಿಸುವ ಬೆಂಗಳೂರಿಗರಿಗೆ ಇದು ಬಿಡುಗಡೆಯ ಹಾದಿಯಂತೆ ಕಾಣುತ್ತಿದೆ.
ರಿಯಲ್ ಎಸ್ಟೇಟ್ ಲಾಬಿ ಅಡ್ಡಿಯಾಗುತ್ತಾ?

ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಐಟಿ ಪಾರ್ಕ್‍ಗಳು, ಬಾಡಿಗೆ ಕಟ್ಟಡಗಳು ಮತ್ತು ದೊಡ್ಡ ದೊಡ್ಡ ಬಿಲ್ಡರ್‍ಗಳ ವ್ಯವಹಾರಕ್ಕೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಸರ್ಕಾರ ಈ ನಡೆಯನ್ನು ಒಪ್ಪುತ್ತದೆಯೇ? ಸಿದ್ದು-ಡಿಕೆಶಿ ದೆಹಲಿ ಹೇಳಿದ್ದಕ್ಕೆ ಉಲ್ಟಾ ಮಾಡುತ್ತಾರೆ ಎಂಬ ಆತಂಕವೂ ಜನರಲ್ಲಿ ಮನೆಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed