Last Updated:
ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಬೆಲೆ ಏರಿಕೆ, ಪಶ್ಚಿಮ ಏಷ್ಯಾ ಯುದ್ಧದ ನಡುವೆ ವರ್ಕ್ ಫ್ರಂ ಹೋಮ್, ರಿಮೋಟ್ ವರ್ಕಿಂಗ್ ಕರೆ, ಬೆಂಗಳೂರಿನ ಐಟಿ ಉದ್ಯೋಗಿಗಳು ಖುಷಿ, ರಿಯಲ್ ಎಸ್ಟೇಟ್ ಲಾಬಿ ಚಿಂತೆ.
ಬೆಂಗಳೂರಿನ (Bengaluru) ರಸ್ತೆಗಳಲ್ಲಿ (Road) 10 ಕಿಲೋಮೀಟರ್ ದೂರ ಕ್ರಮಿಸಲು ಒಂದು ಜನ್ಮವೇ ಬೇಕು ಎನ್ನುವಷ್ಟರ ಮಟ್ಟಿಗೆ ಟ್ರಾಫಿಕ್ (Traffic) ಕಿರಿಕಿರಿ ಅನುಭವಿಸುತ್ತಿರುವ ಐಟಿ (IT) ಉದ್ಯೋಗಿಗಳಿಗೆ ಈಗ ಸಾಕ್ಷಾತ್ ಪ್ರಧಾನಿ ನರೇಂದ್ರ ಮೋದಿಯವರೇ (Prime Minister Narendra Modi) ಬೆಂಬಲವಾಗಿ ನಿಂತಿದ್ದಾರೆ. ಹೌದು, ಹೈದರಾಬಾದ್‍ನಲ್ಲಿ ಮಾತನಾಡಿದ ಮೋದಿ, ಪಶ್ಚಿಮ ಏಷ್ಯಾದ ಯುದ್ಧದ (War) ಕಾರ್ಮೋಡ ಮತ್ತು ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆಯನ್ನು ಎದುರಿಸಲು ಭಾರತೀಯರು ಮತ್ತೆ ‘ಮನೆಯಿಂದ ಕೆಲಸ’ (Work From Home) ಮಾಡಬೇಕೆಂದು ಕರೆ ನೀಡಿದ್ದಾರೆ.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಐಟಿ ಪಾರ್ಕ್‍ಗಳು, ಬಾಡಿಗೆ ಕಟ್ಟಡಗಳು ಮತ್ತು ದೊಡ್ಡ ದೊಡ್ಡ ಬಿಲ್ಡರ್‍ಗಳ ವ್ಯವಹಾರಕ್ಕೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಸರ್ಕಾರ ಈ ನಡೆಯನ್ನು ಒಪ್ಪುತ್ತದೆಯೇ? ಸಿದ್ದು-ಡಿಕೆಶಿ ದೆಹಲಿ ಹೇಳಿದ್ದಕ್ಕೆ ಉಲ್ಟಾ ಮಾಡುತ್ತಾರೆ ಎಂಬ ಆತಂಕವೂ ಜನರಲ್ಲಿ ಮನೆಮಾಡಿದೆ.
Bangalore,Karnataka













