PG Collapse: ಆ ತಪ್ಪು ಆಗದಿದ್ದರೆ 7 ಜೀವಗಳನ್ನ ಉಳಿಸಬಹುದಿತ್ತು! ಸತ್ಯ ನಿಕೇತನ್ ದುರಂತಕ್ಕೆ ಹೈಕೋರ್ಟ್ ಆಕ್ರೋಶ, DU, MCDಗೆ ನೋಟಿಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನವದೆಹಲಿಯಲ್ಲಿ ಕುಸಿದ ಪಿಜಿ ಕಟ್ಟಡ


Last Updated:

ದೆಹಲಿ ಹೈಕೋರ್ಟ್ ಸತ್ಯ ನಿಕೇತನ್ ದುರಂತದ ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಮಹಾನಗರ ಪಾಲಿಕೆಯನ್ನು (MCD) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ದೆಹಲಿಯಲ್ಲಿ ಪೇಯಿಂಗ್ ಗೆಸ್ಟ್ (PG) ವಸತಿಗಳನ್ನು ನಿಯಂತ್ರಿಸಲು ಯಾವುದೇ ಶಾಸನಬದ್ಧ ಅಥವಾ ಕಾರ್ಯಾಚರಣೆಯ ನಿಯಮಗಳು (Statutory or Executive Rules) ಜಾರಿಯಲ್ಲಿವೆಯೇ ಎಂದು ಪ್ರಶ್ನಿಸಿದೆ

ನವದೆಹಲಿಯಲ್ಲಿ ಕುಸಿದ ಪಿಜಿ ಕಟ್ಟಡ
ನವದೆಹಲಿಯಲ್ಲಿ ಕುಸಿದ ಪಿಜಿ ಕಟ್ಟಡ

ನವದೆಹಲಿಯ ಸತ್ಯ ನಿಕೇತನ್ ಪ್ರದೇಶದಲ್ಲಿ ಪಿಜಿ ಹಾಸ್ಟೆಲ್ ಆಗಿ ಬಳಕೆಯಾಗುತ್ತಿದ್ದ ಕಟ್ಟಡ ಕುಸಿತದಿಂದ ಸಂಭವಿಸಿದ ಸಾವುಗಳ ಬಗ್ಗೆ ದೆಹಲಿ ಹೈಕೋರ್ಟ್ ಕಠಿಣ ನಿಲುವು ತೆಗೆದುಕೊಂಡಿದೆ. ಈ ದಾರುಣ ಅಪಘಾತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜವಾಬ್ದಾರಿಯನ್ನು ಪ್ರಶ್ನಿಸಿರುವ ನ್ಯಾಯಾಲಯ, ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಜವಾಬ್ದಾರಿಗಳ ಬಗ್ಗೆ ಜಾಗೃತರಾಗಿದ್ದರೆ, ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಹೇಳಿದೆ.  ಸತ್ಯ ನಿಕೇತನ್ ದುರಂತಕ್ಕೆ ಸಂಬಂಧಿಸಿದಂತೆ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ದೆಹಲಿ ಸರ್ಕಾರ, ಕೇಂದ್ರ ಸರ್ಕಾರ, ದೆಹಲಿ ಮಹಾನಗರ ಪಾಲಿಕೆ (MCD), ದೆಹಲಿ ಪೊಲೀಸ್ ಮತ್ತು ದೆಹಲಿ ವಿಶ್ವವಿದ್ಯಾಲಯಕ್ಕೆ (DU) ನೋಟಿಸ್ ಜಾರಿ ಮಾಡಿ ಉತ್ತರ ನೀಡುವಂತೆ ಕೋರಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸೇರಿದಂತೆ ಇತರ ಪ್ರಾಧಿಕಾರಗಳಿಗೂ ಈ ವಿಷಯದಲ್ಲಿ ತಮ್ಮ ನಿಲುವನ್ನು ಮಂಡಿಸುವಂತೆ ಕೋರ್ಟ್ ಸೂಚಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed