PF Money: ಇಡೀ ಪಿಎಫ್‌ ಜಾತಕವೇ ನಿಮ್ಮ ಕಿಸೆಯಲ್ಲಿ; ವಾಟ್ಸಾಪ್‌ನಲ್ಲಿಯೇ 24/7 ಮಾಹಿತಿ, UPI ಪಿನ್ ಹಾಕಿ ಸೆಕೆಂಡುಗಳಲ್ಲಿ ಹಣ ಪಡೆಯಿರಿ! | | ACTPnews

ಪಿಎಫ್‌ ಹಣ


Last Updated:

ಕೇಂದ್ರ ಸರ್ಕಾರ EPFO 3.0 ಮೂಲಕ UPI, ATM ಮೂಲಕ 3 ದಿನದಲ್ಲಿ PF ಹಣ ಹಿಂಪಡೆಯುವ ಸೌಲಭ್ಯ, WhatsApp ಕನ್ನಡ AI ಸೇವೆ, ಸ್ಕ್ಯಾಮ್ ಎಚ್ಚರಿಕೆ, KYC ಕಡ್ಡಾಯ ಎಂದು ಘೋಷಿಸಿದೆ

ಪಿಎಫ್‌ ಹಣ
ಪಿಎಫ್‌ ಹಣ

ಬೆಂಗಳೂರು: ದೇಶದ 7 ಕೋಟಿಗೂ ಅಧಿಕ ಉದ್ಯೋಗಿಗಳಿಗೆ (Employees) ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇನ್ನು ಮುಂದೆ ಭವಿಷ್ಯ ನಿಧಿ (PF) ಹಣಕ್ಕಾಗಿ EPFO ಕಚೇರಿಗಳ (EPFO Office) ಮುಂದೆ ಸಾಲುಗಟ್ಟಿ ನಿಲ್ಲುವ, ಕಾಗದ ಪತ್ರ ಹಿಡಿದು ಅಲೆದಾಡುವ ಅಥವಾ ತಿಂಗಳುಗಟ್ಟಲೆ ಕಾಯುವ ಗೋಳು ತಪ್ಪಲಿದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, UPI ಪಾವತಿ ಗೇಟ್‌ವೇ ಮೂಲಕ EPF ಹಣ ಹಿಂಪಡೆಯುವ ಸೌಲಭ್ಯದ ಪರೀಕ್ಷೆ ಪೂರ್ಣಗೊಂಡಿದ್ದು, ಕೇವಲ ಒಂದು UPI PIN ಬಳಸುವ ಮೂಲಕ ಸೆಕೆಂಡುಗಳಲ್ಲಿ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವ ಈ EPFO 3.0 ಮಹಾ ಕ್ರಾಂತಿಯ (Revolution) ವ್ಯವಸ್ಥೆಯು ಮೇ 2026ರ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಬಳಕೆಗೆ ಬರಲಿದೆ.

ಇನ್ಮೇಲೆ 3 ದಿನದಲ್ಲಿ ಸಿಗುತ್ತೆ ಪಿಎಫ್‌ ಹಣ

ಇದರ ಅಡಿಯಲ್ಲಿ ಸಾರ್ವಜನಿಕರು ಶಾಪಿಂಗ್‌ಗೆ ಬಳಸುವ PhonePe, GPay, BHIM ನಂತಹ UPI ಆಪ್‌ಗಳನ್ನು ಓಪನ್ ಮಾಡಿ, ಲಭ್ಯವಿರುವ PF ಬ್ಯಾಲೆನ್ಸ್ ಪರಿಶೀಲಿಸಿ, ತಮಗೆ ಬೇಕಾದ ಮೊತ್ತವನ್ನು ಎಂಟರ್ ಮಾಡಿ, UPI PIN ಹಾಕುವ ಮೂಲಕ ಕೇವಲ 3 ದಿನಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಹಣವನ್ನು ಪಡೆಯಬಹುದು. ಇದರೊಂದಿಗೆ ವಿಶೇಷ EPF ATM ಕಾರ್ಡ್ ಸೌಲಭ್ಯವೂ ಬರಲಿದ್ದು, ಯಾವುದೇ ATM ಗೆ ಹೋಗಿ ಕಾರ್ಡ್ ತೂರಿಸಿ, PIN ಹಾಕಿ ಹಣವನ್ನು ಕ್ಯಾಶ್ ರೂಪದಲ್ಲಿ ಪಡೆಯಬಹುದಾಗಿದೆ.

ಯಾವೆಲ್ಲಾ ಸಂದರ್ಭದಲ್ಲಿ ಎಷ್ಟು ಹಣ ಪಡೆಯಬಹುದು?

ಈ ಹೊಸ ನಿಯಮಗಳ ಪ್ರಕಾರ, ATM ಅಥವಾ UPI ಮೂಲಕ ಸಾಮಾನ್ಯ ಸಂದರ್ಭದಲ್ಲಿ PF ಬ್ಯಾಲೆನ್ಸ್‌ನ 50% ವರೆಗೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ 75% ವರೆಗೆ ಹಣವನ್ನು ಹಿಂಪಡೆಯಬಹುದು. ಅಲ್ಲದೆ, ಆಟೋ ಸೆಟಲ್‌ಮೆಂಟ್ ಮಿತಿಯನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, 95% ಕ್ಲೈಮ್‌ಗಳು ಸ್ವಯಂಚಾಲಿತವಾಗಿ (ಆಟೋಮ್ಯಾಟಿಕ್ ಕ್ಲೈಮ್) ಕೇವಲ 3 ದಿನಗಳಲ್ಲಿ ಬ್ಯಾಂಕ್ ಖಾತೆಗೆ ಜಮಾ ಆಗಲಿವೆ.

ದಿಢೀರ್‌ ಅಂತ ಕೆಲಸ ಹೋದರೆ 75% ಹಣ ಪಡೆಯಬಹುದು!

ದಿಢೀರ್ ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಇದು ವರವಾಗಲಿದ್ದು, ಜಾಬ್ ಹೋದ ತಕ್ಷಣವೇ 75% ಹಣವನ್ನು ಮತ್ತು 12 ತಿಂಗಳ ನಂತರ ಉಳಿದ 25% ಹಣವನ್ನು ಪಡೆಯಬಹುದು. ಇನ್ನು 55 ವರ್ಷಕ್ಕೆ ನಿವೃತ್ತಿಯಾದಾಗ, ಶಾಶ್ವತ ಅಂಗವಿಕಲತೆ ಎದುರಾದಾಗ, VRS (ಸ್ವಯಂ ನಿವೃತ್ತಿ) ತೆಗೆದುಕೊಂಡಾಗ, ವಿದೇಶಕ್ಕೆ ಶಿಫ್ಟ್ ಆದಾಗ ಅಥವಾ ಉದ್ಯೋಗ ಕಡಿತ (Retrenchment) ಆದಾಗ ಸಂಪೂರ್ಣ (100%) ಪೈಸಾ ಹಿಂಪಡೆಯಲು ಅವಕಾಶವಿದೆ.
ಉಚಿತವಾಗಿ 24/7 ವಾಟ್ಸಾಪ್‌ ಸೇವೆ!

ಇದರ ಜೊತೆಗೆ EPFO ಇನ್ನು ಮುಂದೆ 24/7 ಉಚಿತ ಸೇವೆಯನ್ನು ವಾಟ್ಸಾಪ್ (WhatsApp) ಮೂಲಕ ಕನ್ನಡದಲ್ಲೇ ಒದಗಿಸಲಿದ್ದು, ಸಾರ್ವಜನಿಕರು ರಾತ್ರಿ 2 ಗಂಟೆ ಅಥವಾ ಬೆಳಗ್ಗೆ 5 ಗಂಟೆಯಾಗಿದ್ದರೂ ತಕ್ಷಣವೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ಅಧಿಕೃತ WhatsApp ಸೇವೆಗಾಗಿ ಬಳಕೆದಾರರು ಹಸಿರು ಟಿಕ್ (✅) ಇರುವ EPFO ಸಂಖ್ಯೆಗೆ ತಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದಲೇ “Hello” ಎಂದು ಟೈಪ್ ಮಾಡಿ ಸಂದೇಶ ಕಳುಹಿಸಿದರೆ AI ಚಾಟ್‌ಬಾಟ್ ತಕ್ಷಣವೇ ಸ್ಪಂದಿಸುತ್ತದೆ. ಈ ಮೂಲಕ PF ಬ್ಯಾಲೆನ್ಸ್ ಪರಿಶೀಲನೆ, ಕೊನೆಯ 5 ಟ್ರಾನ್ಸಾಕ್ಷನ್‌ಗಳ ವೀಕ್ಷಣೆ, ಕ್ಲೈಮ್ ಸ್ಟೇಟಸ್ ಪರಿಶೀಲನೆ, ದೂರು ನೋಂದಣಿ ಹಾಗೂ ಆಧಾರ್/KYC ಸಮಸ್ಯೆಗಳ ಪರಿಹಾರವನ್ನು ಕನ್ನಡದಲ್ಲೇ ಸಂವಾದ ನಡೆಸಿ ಪಡೆದುಕೊಳ್ಳಬಹುದು.
ಈ ಸ್ಕ್ಯಾಮ್‌ಗಳಿಂದ ಎಚ್ಚರವಾಗಿರಿ!

ಆದರೆ ಈ ಸೌಲಭ್ಯಗಳ ಜೊತೆಗೆ ಸಾರ್ವಜನಿಕರು ಸ್ಕ್ಯಾಮರ್‌ಗಳಿಂದ ಸುರಕ್ಷಿತವಾಗಿರಲು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಬೇಕು; EPFO ಎಂದಿಗೂ WhatsApp ಅಥವಾ ಫೋನ್‌ನಲ್ಲಿ OTP ಕೇಳುವುದಿಲ್ಲ ಹಾಗೂ ನಿಮ್ಮ ಪಾಸ್‌ವರ್ಡ್, UAN ನಂಬರ್‌ಗಳನ್ನು ಯಾರಿಗೂ ಶೇರ್ ಮಾಡಬಾರದು. ಹಸಿರು ಟಿಕ್ ಇಲ್ಲದ ನಕಲಿ ನಂಬರ್‌ಗಳಿಗೆ ಮೆಸೇಜ್ ಮಾಡಬಾರದು ಮತ್ತು ಯಾವುದೇ ಫೇಕ್ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು.

ಈಗಾಗಲೇ ಬಳಕೆಯಲ್ಲಿರುವ ಸೇವೆಗಳ ವರದಿ

ಇದನ್ನೂ ಓದಿ: BMTC: ಏರ್‌ಪೋರ್ಟ್‌ನಿಂದ ನಂದಿಬೆಟ್ಟಕ್ಕೆ ಎಸಿ ಬಸ್;‌ ತುಮಕೂರು ಓಡಾಟವೂ ಸುಲಭ, 3 ಹೊಸ ಸೇವೆ, ನೂರಾರು ಉಪಯೋಗ!

ಮೇ 2026ರ ಅಂತ್ಯ ಅಥವಾ ಜೂನ್ 2026ರ ಆರಂಭದಲ್ಲಿ ಲೈವ್ ಆಗಲಿರುವ ಈ ಮಹಾ ಯೋಜನೆಯ ಲಾಭವನ್ನು ಪಡೆಯಲು ಸಾರ್ವಜನಿಕರು ಈಗಲೇ ತಮ್ಮ UAN ಸಕ್ರಿಯಗೊಳಿಸಿ, ಆಧಾರ್ ಕಾರ್ಡ್, PAN ಕಾರ್ಡ್, ಬ್ಯಾಂಕ್ ಖಾತೆ ಮತ್ತು IFSC ಕೋಡ್‌ಗಳನ್ನು ಲಿಂಕ್ ಮಾಡುವುದರ ಜೊತೆಗೆ ಮುಖ ದೃಢೀಕರಣವನ್ನು (FAT) ಪೂರ್ಣಗೊಳಿಸಿ KYC ಅಪ್‌ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ, ಇಲ್ಲದಿದ್ದರೆ ಈ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಸೇವೆಗಳಾದ 9966044425 ಗೆ ಮಿಸ್ಡ್ ಕಾಲ್ ನೀಡುವುದು, 7738299899 ಸಂಖ್ಯೆಗೆ ‘EPFOHO UAN’ ಎಂದು SMS ಕಳುಹಿಸುವುದು, UMANG ಆಪ್ ಬಳಸುವುದು ಅಥವಾ EPFO ಅಧಿಕೃತ ವೆಬ್‌ಸೈಟ್ ಭೇಟಿ ನೀಡುವುದನ್ನು ಮುಂದುವರಿಸಬಹುದು. ಕಾರ್ಮಿಕ ಸಚಿವ ಮಾಂಡವಿಯಾ ಅವರ ಪ್ರಕಾರ, FY25 ರಲ್ಲಿ 6.01 ಕೋಟಿ ಇದ್ದ ಕ್ಲೈಮ್‌ಗಳ ಇತ್ಯರ್ಥವು FY26 ರಲ್ಲಿ ಭಾರಿ ಏರಿಕೆ ಕಂಡು 8.31 ಕೋಟಿಗೆ ತಲುಪಿದ್ದು, ಈ ಕ್ರಾಂತಿಕಾರಿ ವ್ಯವಸ್ಥೆಯು ದೇಶದ ಕೋಟ್ಯಂತರ ಜನರ ಜೀವನವನ್ನು ಮತ್ತಷ್ಟು ಸುಲಭಗೊಳಿಸಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports