Peddi Movie: ಆಗ ಚಿರಂಜೀವಿ- ರಾಜ್​​ಕುಮಾರ್, ಇಂದು ರಾಮ್ ಚರಣ್-ಶಿವಣ್ಣ; 21 ವರ್ಷಗಳ ಹಿಂದಿನ ಫೋಟೋ ಸೀಕ್ರೆಟ್ ರಿವೀಲ್! | | ACTPnews

News18


Last Updated:

ರಾಜ್ ಕುಮಾರ್ ಅವರು 1974ರಲ್ಲಿ ನಟಿಸಿದ್ದ ಭಕ್ತ ಕುಂಬಾರ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ತಾಯಿ ಶ್ರೀದೇವಿ ಅವರು ಬಾಲ ಕಲಾವಿದರಾಗಿ ನಟಿಸಿದ್ದರು. ಈಗ ಶಿವರಾಜ್ ಕುಮಾರ್, ರಾಮ್ ಚರಣ್, ಜಾನ್ವಿ ಕಪೂರ್ ಅವರೊಂದಿಗೆ ಸೇರಿ ಪೆದ್ದಿ ಸಿನಿಮಾದಲ್ಲಿ ನಟಿಸುತ್ತಿರೋದು ವಿಶೇಷ ಸಂಗತಿ.

News18
News18

ಮೋಸ್ಟ್ ಅವೈಟೆಡ್ ಪ್ಯಾನ್ ಇಂಡಿಯಾ (Pan India Movie) ಸಿನಿಮಾ ‘ಪೆದ್ದಿ’ ಬಿಡುಗಡೆಗೆ ಸಿದ್ಧವಾಗಿದೆ (Peddi Movie Promotion). ನಿರ್ದೇಶಕ ಬುಚ್ಚಿಬಾಬು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಬಗ್ಗೆ ಭಾರೀ ಕುತೂಹಲವನ್ನು ಮೂಡಿಸಿದೆ. ಜೂನ್ 04 ರಂದು ಈ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಇದರೊಂದಿಗೆ ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇದರ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಡಾ. ರಾಜ್ ಕುಮಾರ್ (Dr. Rajkumar) ಅವರಿಗೆ ಸಂಬಂಧಿಸಿದ ಫೋಟೋ ಸಖತ್ ವೈರಲ್ ಆಗುತ್ತಿದೆ.

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೊಸ ಸಿನಿಮಾ ಪೆದ್ದಿ. ಬುಚ್ಚಿಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮಾಸ್ ವಿಲೇಜ್ ಸ್ಪೋರ್ಟ್ಸ್ ಡ್ರಾಮಾ ಆಗಿ ಸಿನಿಮಾ ಮೂಡಿ ಬರುತ್ತಿದ್ದು, ಸಿನಿಮಾದಲ್ಲಿ ಕನ್ನಡ ಸೂಪರ್ ಸ್ಟಾರ್ ಶಿವರಾಜ್ ಕುಮಾರ್, ಜಗಪತಿ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ತಂಡ ಈಗಾಗಲೇ ಚಿತ್ರದ ಕುರಿತು ಹಲವು ಅಪ್‌ಡೇಟ್‌ಗಳನ್ನು ನೀಡಿದ್ದು, ಯೂಟ್ಯೂಬ್‌ನಲ್ಲಿ ಸಿನಿಮಾದ ಸಾಂಗ್ಸ್ ಟ್ರೆಂಡ್ ಆಗುತ್ತಿದೆ. ಮತ್ತೊಂದು ಕಡೆ ಸಿನಿಮಾದ ಟ್ರೈಲರ್, ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ. ಜೂನ್ 04 ರಂದು ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ರಾಮ್ ಚರಣ್ ಹಾಗೂ ಶಿವರಾಜ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಚರಣ್, ಶಿವಣ್ಣ ಅವರೊಂದಿಗೆ ತೆಗೆದುಕೊಂಡ ಫೋಟೋ ಸಖತ್ ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆದಿದೆ. ಈ ಫೋಟೋ ಈ ಹಿಂದೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ನಟಸಾರ್ವಭೌಮ ರಾಜ್ ಕುಮಾರ್ ಅವರಿಗೆ ಲಿಂಕ್ ಆಗಿದ್ದು, ಈ ಕುರಿತಂತೆ ಇಬ್ಬರು ಮುಕ್ತವಾಗಿ ಮಾತನಾಡಿದ್ದಾರೆ.

ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ, ರಾಜ್ ಕುಮಾರ್ ಅವರ ನಡುವೆ ಇದ್ದ ಅನುಬಂಧ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆರಂಭದಿಂದಲೂ ಎರಡು ಕುಟುಂಬಗಳ ನಡುವೆ ಉತ್ತಮ ಸ್ನೇಹವಿದೆ. ಈಗ ಚರಣ್ ಅವರ ಪೆದ್ದಿ ಸಿನಿಮಾದಲ್ಲಿ ಶಿವಣ್ಣ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ನಡೆದ ಸಂದರ್ಶನವೊಂದರಲ್ಲಿ ಚಿರಂಜೀವಿ, ರಾಜ್ ಕುಮಾರ್ ಒಟ್ಟಿಗೆ ಇರುವ ಫೋಟೋವನ್ನು ತೋರಿಸಿ, ಈ ಸೀನ್ ಅನ್ನ ರೀ ಕ್ರಿಯೇಟ್ ಮಾಡಲು ಮನವಿ ಮಾಡಲಾಗಿತ್ತು. ಇದರಂತೆ ಶಿವಣ್ಣ ಅವರು ಚರಣ್ ಅವರಿಗೆ ಅಪ್ಪುಗೆ ನೀಡಿದ್ದು, ಸದ್ಯ ಇಬ್ಬರ ನಡುವಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನು, ರಾಜ್ ಕುಮಾರ್ ಅವರು 1974ರಲ್ಲಿ ನಟಿಸಿದ್ದ ಭಕ್ತ ಕುಂಬಾರ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ತಾಯಿ ಶ್ರೀದೇವಿ ಅವರು ಬಾಲ ಕಲಾವಿದರಾಗಿ ನಟಿಸಿದ್ದರು. ಈಗ ಶಿವರಾಜ್ ಕುಮಾರ್, ರಾಮ್ ಚರಣ್, ಜಾನ್ವಿ ಕಪೂರ್ ಅವರೊಂದಿಗೆ ಸೇರಿ ಪೆದ್ದಿ ಸಿನಿಮಾದಲ್ಲಿ ನಟಿಸುತ್ತಿರೋದು ವಿಶೇಷ ಸಂಗತಿ ಎಂದು ಹೇಳಬಹುದು. ಸದ್ಯ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ ಬಾಕ್ಸ್ ಆಫೀಸ್ ಬಳಿ ಹೇಗೆ ಪ್ರದರ್ಶನ ಕಾಣುತ್ತದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: Vaibhav Suryavanshi: ಲಕ್ಷುರಿ ಕಾರು, ಮುಂಬೈನಲ್ಲಿ ದುಬಾರಿ ಫ್ಲಾಟ್; ಜಸ್ಟ್ 15 ವರ್ಷಕ್ಕೆ ಇಷ್ಟು ಕೋಟಿ ಆಸ್ತಿನಾ?

ಈ ಹಿಂದೆ ರಾಜ್ ಕುಮಾರ್ ಹುಟ್ಟುಹಬ್ಬ ಸಂದರ್ಭದಲ್ಲಿ ಚಿರಂಜೀವಿ ಅವರು ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ರಾಜ್ ಕುಮಾರ್ ಅವರೊಂದಿಗೆ ಇದ್ದ ಸ್ನೇಹ ಸಂಬಂಧವನ್ನು ನೆನೆದು ಶುಭಾಶಯಗಳನ್ನು ತಿಳಿಸಿದ್ದರು. ರಾಜ್ ಕುಮಾರ್ ಅವರನ್ನು ಅಣ್ಣ ಎಂದೇ ಕರೆಯುತ್ತಿದ್ದ ಚಿರಂಜೀವಿ ಅವರು, ಸರಳತೆಯಲ್ಲಿಯೇ ಶ್ರೇಷ್ಠತೆ ಅಡಗಿದೆ ಎಂದು ತಮ್ಮ ಮಾತು ಹಾಗೂ ಕಾರ್ಯಗಳ ಮೂಲಕ ನನಗೆ ಪಾಠ ಕಲಿಸಿದ್ದರು. ನನ್ನ ಜೀವನದಲ್ಲಿ ಅಮೂಲ್ಯವಾದ ಪ್ರಭಾವ ಬೀರಿದ್ದರು ಎಂದು ಚಿರಂಜೀವಿ ಬರೆದಿದ್ದರು. ಅಂದಹಾಗೇ, ಈ ಫೋಟೋವನ್ನು ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಆಕಾಶ್ ಸಿನಿಮಾ 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಂದು 100 ದಿನಗಳನ್ನು ಪೂರೈಸಿ ಅದ್ದೂರಿ ಯಶಸ್ವಿಯಾಗಿತ್ತು. ಸಿನಿಮಾ ಶತದಿನೋತ್ಸವ ಕಾರ್ಯಕ್ರಮ 2005ರಲ್ಲಿ ಬೆಂಗಳೂರಿನ ಕೆಜಿ ರಸ್ತೆಯ ಮೇನಕಾ ಚಿತ್ರ ಮಂದಿರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಂದು ಚಿರಂಜೀವಿ ಅವರು ಆಗಮಿಸಿ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed