Last Updated:
ಬೆಂಗಳೂರು ಯುವತಿ ಕಾರ್ಪೊರೇಟ್ ಕೆಲಸ ಬಿಟ್ಟು ಹಿಮಾಲಯದ ಸ್ಪಿತಿ ಕಣಿವೆಯಲ್ಲಿ ಚಹಾ ಕೆಫೆ ಆರಂಭಿಸಿ ನೆಮ್ಮದಿ ಜೀವನ ಆರಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿದೆ.
ಬೆಂಗಳೂರು: ನೀವು ಕೂಡ ಪ್ರತಿದಿನ ಬೆಳಿಗ್ಗೆ ಎದ್ದು ಟ್ರಾಫಿಕ್‍ನಲ್ಲಿ (Traffic) ಸಿಲುಕಿ, ಆಫೀಸಿನ (Office) ಡೆಡ್‍ಲೈನ್‍ಗಳ ಒತ್ತಡದಲ್ಲಿ ಬೇಸತ್ತಿದ್ದೀರಾ? ಅಂತಹ ಒತ್ತಡದ ಜೀವನವನ್ನೇ ಬಿಟ್ಟು ಬಂದು, ಇದೀಗ ಹಿಮಾಲಯದ (Himalaya) ಪ್ರಶಾಂತ ಮಡಿಲಲ್ಲಿ ನೆಮ್ಮದಿ (Peaceful Life) ಕಂಡುಕೊಂಡಿದ್ದಾಳೆ ಬೆಂಗಳೂರಿನ (Bengaluru) ಯುವತಿಯೊಬ್ಬಳು.
ಅವಳು ತನ್ನ ಹೊಸ ದಿನಚರಿಯನ್ನು ಹೀಗೆ ವಿವರಿಸಿದಳು, “ಈಗ ನನ್ನ ಬೆಳಗಿನ ಸಮಯ ಹೀಗಿದೆ – ಚಾಯ್ ಬಡಿಸುವುದು, ಅಪರಿಚಿತರೊಂದಿಗೆ ಮಾತನಾಡುವುದು, ಸ್ವಲ್ಪ ಆಳವಾಗಿ ಉಸಿರಾಡುವುದು. ಇದು ಪ್ರತಿದಿನ ಆಕರ್ಷಕವಾಗಿಲ್ಲ. ಆದರೆ ಅಂತಿಮವಾಗಿ ನನ್ನಂತೆಯೇ ಭಾಸವಾಗುತ್ತದೆ ಎಂದಿದ್ದಾರೆ.
ಈ ವಿಷಯವು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ಗರೀಬ್ ಮೆಂಟಾಲಿಟಿ ಎಂದು ಟೀಕಿಸಿದರೆ, ಮತ್ತೆ ಕೆಲವರು ಒಬ್ಬೊಬ್ಬರ ಜೀವನ ದೃಷ್ಟಿಕೋನ ಒಂದೊಂದು, ಬದುಕನ್ನು ಅವರವರ ದಾರಿಯಲ್ಲಿ ಬದುಕಲಿ ಎಂದು ಬೆಂಬಲಿಸಿದ್ದಾರೆ. ಇನ್ನು ಕೆಲವರು, ಇದನ್ನು ಗ್ಲೋರಿಫೈ ಮಾಡಬೇಡಿ, ನೈಜ ಜೀವನದ ಕಠಿಣ ಪರಿಸ್ಥಿತಿ ಎದುರಾದಾಗ ಇದು ತುಂಬಾ ಕಷ್ಟವಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
Bangalore [Bangalore],Bangalore,Karnataka
Jun 05, 2026 12:17 PM IST













