PBKS Playoffs: ಆರ್​ಸಿಬಿ ವಿರುದ್ಧ ಸೋತ ನಂತರ ಸಂಕಷ್ಟದಲ್ಲಿ ಪಂಜಾಬ್‌! ಹೀಗಾದ್ರೆ ಮಾತ್ರ ಶ್ರೇಯಸ್​​ ಪಡೆಗೆ ಪ್ಲೇಆಫ್ ಚಾನ್ಸ್ | ಕ್ರೀಡಾ ಸುದ್ದಿ | ACTPnews

ಪಂಜಾಬ್ ಕಿಂಗ್ಸ್


Last Updated:

ಪಂಜಾಬ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೇ ಇದೆ. ಇದು ಪಂಜಾಬ್‌ನ 13 ನೇ ಪಂದ್ಯವಾಗಿತ್ತು. ಲೀಗ್​​ನಲ್ಲಿ ಪಂಜಾಬ್ ಆರು ಗೆಲುವುಗಳು ಮತ್ತು ಆರು ಸೋಲುಗಳು ಹಾಗೂ ಒಂದು ಪಂದ್ಯ ರದ್ದಾಗಿದ್ದು ಒಟ್ಟು 13 ಅಂಕಗಳನ್ನು ಹೊಂದಿದೆ. ಈಗ ಕೇವಲ ಒಂದು ಪಂದ್ಯ ಮಾತ್ರ ಉಳಿದಿದ್ದು, ಆ ಪಂದ್ಯವನ್ನು ಗೆಲ್ಲುವುದು ಪಂಜಾಬ್‌ಗೆ ನಿರ್ಣಾಯಕವಾಗಿದೆ.

ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್

ಐಪಿಎಲ್ 2026ರ 61ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು. ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡದ ಸತತ ಆರನೇ ಸೋಲು ಇದಾಗಿದೆ. ಇದಕ್ಕೂ ಮೊದಲು, ಪಂಜಾಬ್ ತನ್ನ ಮೊದಲ ಏಳು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿತ್ತು. ಈ ಸೋಲು ಪಂಜಾಬ್ ಕಿಂಗ್ಸ್‌ನ ಪ್ಲೇಆಫ್ ತಲುಪುವ ಸಾಧ್ಯತೆಗಳಿಗೆ ಗಮನಾರ್ಹ ಹೊಡೆತ ನೀಡಿದೆ. ಆದರೆ ರೇಸ್​​ನಲ್ಲಿ ಇನ್ನೂ ಜೀವಂತವಾಗಿರುವ ಪಂಜಾಬ್‌ಗೆ ಪ್ಲೇಆಫ್ ತಲುಪಲು ಇರುವ ಸಾಧ್ಯತೆಗಳ ಬಗ್ಗೆ ತಿಳಿಯೋಣ.

ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 222 ರನ್ ಗಳಿಸಿ, ಪಂಜಾಬ್‌ಗೆ 223 ರನ್‌ಗಳ ಗುರಿಯನ್ನು ನೀಡಿತು. ಆದರೆ ಪಂಜಾಬ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 199 ರನ್‌ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು.

ಮಾಡು ಇಲ್ಲವೆ ಮಡಿ ಪಂದ್ಯ

ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೇ ಇದೆ. ಇದು ಪಂಜಾಬ್‌ನ 13ನೇ ಪಂದ್ಯವಾಗಿತ್ತು. ಲೀಗ್​​ನಲ್ಲಿ ಪಂಜಾಬ್ ಆರು ಗೆಲುವುಗಳು ಮತ್ತು ಆರು ಸೋಲುಗಳು ಹಾಗೂ ಒಂದು ಪಂದ್ಯ ರದ್ದಾಗಿದ್ದು ಒಟ್ಟು 13 ಅಂಕಗಳನ್ನು ಹೊಂದಿದೆ. ಈಗ ಕೇವಲ ಒಂದು ಪಂದ್ಯ ಮಾತ್ರ ಉಳಿದಿದ್ದು, ಆ ಪಂದ್ಯವನ್ನು ಗೆಲ್ಲುವುದು ಪಂಜಾಬ್‌ಗೆ ನಿರ್ಣಾಯಕವಾಗಿದೆ.

ಪಂಜಾಬ್ ಮುಂದಿನ ಪಂದ್ಯದಲ್ಲಿ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಏಳು ಗೆಲುವುಗಳೊಂದಿಗೆ 15 ಅಂಕಗಳನ್ನು ಗಳಿಸಲಿದ್ದು ಪ್ಲೇಆಫ್ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿ ಉಳಿಯಬಹುದು.

ಇತರ ತಂಡಗಳ ಸೋಲಿಗಾಗಿಯೂ ಪ್ರಾರ್ಥನೆ

ಪಂಜಾಬ್ ತಂಡ ಕೇವಲ ತನ್ನ ಕೊನೆಯ ಪಂದ್ಯವನ್ನ ಗೆದ್ದರೆ ಸಾಲದು. ಪ್ಲೇಆಫ್ ತಲುಪಬೇಕಾದರೆ ಇತರ ತಂಡಗಳು ಸೋಲಬೇಕೆಂದು ಅದು ಪ್ರಾರ್ಥಿಸಬೇಕಾಗುತ್ತದೆ. ಪಂಜಾಬ್​ಗಿಂತ ಒಂದು ಅಂಕ ಕಡಿಮೆ ಇದ್ದರೂ ಚೆನ್ನೈ, ರಾಜಸ್ಥಾನ ಮತ್ತು ಕೆಕೆಆರ್ ಕೂಡ ಪ್ರಸ್ತುತ ಪ್ಲೇಆಫ್ ರೇಸ್‌ನಲ್ಲಿವೆ. ಎಲ್ಲಾ ತಂಡಗಳು ಇನ್ನೂ 2 ಪಂದ್ಯಗಳನ್ನ ಹೊಂದಿದ್ದು, 12 ಅಂಕಗಳನ್ನ ಹೊಂದಿವೆ. ಈ ಮೂರು ತಂಡಗಳು ಕನಿಷ್ಠ ಒಂದು ಪಂದ್ಯವನ್ನ ಸೋಲಬೇಕು. ಆಗ ಎಲ್ಲಾ ತಂಡಗಳ ಅಂಕಗಳು 14 ಆಗಲಿವೆ. ಆರ್​ಸಿಬಿ, ಜಿಟಿ ಹಾಗೂ ಹೈದರಾದ್ ಜೊತೆಗೆ ಪಂಜಾಬ್ ತಂಡಕ್ಕೆ ಪ್ಲೇಆಫ್​ ಪ್ರವೇಶಿಸುವ ಅವಕಾಶ ಸಿಗಲಿದೆ.

ಪಂಜಾಬ್‌ನ ಮುಂದಿನ ಪಂದ್ಯ ಯಾರೊಂದಿಗೆ?

ಪಂಜಾಬ್ ಕಿಂಗ್ಸ್ ತಂಡದ ಮುಂದಿನ ಪಂದ್ಯ ಮೇ 23 ರಂದು ಲಖನೌದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿದೆ. ಪಂಜಾಬ್‌ಗೆ ಈ ಪಂದ್ಯದ ಅತ್ಯುತ್ತಮ ವಿಷಯವೆಂದರೆ ಲಖನೌ ಈ ಋತುವಿನಲ್ಲಿ ಅತ್ಯಂತ ದುರ್ಬಲ ತಂಡಗಳಲ್ಲಿ ಒಂದಾಗಿದೆ, ಇದು ಪಂಜಾಬ್‌ಗೆ ಸಮಾಧಾನ ತರುವ ಸುದ್ದಿಯಾಗಿದೆ.

ಕಳೆದ ಋತುವಿನಲ್ಲಿ  ಫೈನಲ್ ಆಡಿದ್ದ ಪಂಜಾಬ್

ಕಳೆದ ಋತುವಿನಲ್ಲಿ ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಆಡಿದ ತಂಡ ಪಂಜಾಬ್. ಕಳೆದ ವರ್ಷ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಶ್ರೇಯಸ್ ಪಡೆ ಈ ವರ್ಷವೂ ಮೊದಲಾರ್ಧದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತ್ತು. ಆದರೆ ದ್ವಿತಿಯಾರ್ಧದಲ್ಲಿ ಕಳಪೆ ಫೀಲ್ಡಿಂಗ್ ಹಾಗೂ ಕಳಪೆ ಬೌಲಿಂಗ್‌ನಿಂದಾಗಿ ಹಿನ್ನಡೆ ಅನುಭವಿಸಿದೆ. ಬಹುತೇಕ ಪಂದ್ಯಗಳನ್ನ ಕ್ಯಾಚ್ ಕೈಚೆಲ್ಲುವ ಮೂಲಕವೇ ಸೋಲು ಕಂಡಿದೆ.



Source link

Leave a Reply

Your email address will not be published. Required fields are marked *