Last Updated:
ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಬೆನ್ನಲ್ಲೇ ಅದೇ ಜೈಲಿನಲ್ಲಿರುವ ನಟ ದರ್ಶನ ಮತ್ತು ಪವಿತ್ರಾ ಗೌಡಗು ಇದರ ಬಿಸಿ ತಟ್ಟಿದೆ.
ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕೈದಿಗಳ ಪಾಲಿಗೆ ಸೆರೆಮನೆಯಾಗಬೇಕಿದ್ದ ಪರಪ್ಪನ ಅಗ್ರಹಾರ ಜೈಲು ಅರಮನೆಯಾಗಿದ್ಯಾ ಅನ್ನೋ ಚರ್ಚೆ ಜೋರಾಗಿದೆ. ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಮೊಬೈಲ್ ಪತ್ತೆ ಬೆನ್ನಲ್ಲೇ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ಫುಲ್ ಅಲರ್ಟ್ ಆಗಿದ್ದು, ಜೈಲು ಭೇಟಿ ಬಳಿಕ ಮತ್ತಷ್ಟು ಬಿಗಿ ವ್ಯವಸ್ಥೆ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಬೆನ್ನಲ್ಲೇ ಅದೇ ಜೈಲಿನಲ್ಲಿರುವ ನಟ ದರ್ಶನ ಮತ್ತು ಪವಿತ್ರಾ ಗೌಡಗೂ ಇದರ ಬಿಸಿ ತಟ್ಟಿದೆ.














