Pallavi Lakshmikanth: ಮಲ್ಲಮ್ಮ ಬಿಗ್ ಬಾಸ್ ಮನೆಗೆ ಹೋಗಲು ಕಾರಣವಾಗಿದ್ದ ಪಲ್ಲವಿ ಇನ್ನಿಲ್ಲ! | | ACTPnews

News18


Last Updated:

ಬಿಗ್ ಬಾಸ್ ಕನ್ನಡ ಖ್ಯಾತಿಯ ಮಲ್ಲಮ್ಮ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖ್ಯಾತ ಫ್ಯಾಷನ್ ಡಿಸೈನರ್ ಪಲ್ಲವಿ ಲಕ್ಷ್ಮಿಕಾಂತ್ ನಿಧನರಾಗಿದ್ದಾರೆ

News18
News18

ಬಿಗ್ ಬಾಸ್ ಕನ್ನಡ (Bigg Boss Kannada) ಖ್ಯಾತಿಯ ಮಲ್ಲಮ್ಮ(Mallamma) ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖ್ಯಾತ ಫ್ಯಾಷನ್ ಡಿಸೈನರ್ ಪಲ್ಲವಿ ಲಕ್ಷ್ಮಿಕಾಂತ್ (Pallavi Lakshmikanth) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ರಿಷಿ ಡಿಸೈನ್ ಸಂಸ್ಥೆಯ ಸಂಸ್ಥಾಪಕಿಯಾಗಿದ್ದ ಪಲ್ಲವಿ ಅವರ ಹಠಾತ್ ನಿಧನದ ಸುದ್ದಿ ಕಿರುತೆರೆ ಹಾಗೂ ಫ್ಯಾಷನ್ ಲೋಕದಲ್ಲಿ ಆಘಾತ ಮೂಡಿಸಿದೆ.

ಮಲ್ಲಮ್ಮ ಬದುಕಿನ ಪ್ರಮುಖ ವ್ಯಕ್ತಿಯಾಗಿದ್ದ ಪಲ್ಲವಿ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೂರನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದ ಮಲ್ಲಮ್ಮ, ತಮ್ಮ ಮುಗ್ಧತೆ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಉತ್ತರ ಕರ್ನಾಟಕದ ಹಿನ್ನೆಲೆಯಿಂದ ಬಂದಿದ್ದ ಮಲ್ಲಮ್ಮ ಬೆಂಗಳೂರಿನಲ್ಲಿ ನೆಲೆ ಕಂಡುಕೊಳ್ಳಲು ಪಲ್ಲವಿ ಲಕ್ಷ್ಮಿಕಾಂತ್ ನೆರವಾಗಿದ್ದರು.

ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮಗೆ ಪಲ್ಲವಿ ಅವರು ತಮ್ಮ ಫ್ಯಾಷನ್ ಬೋಟಿಕ್‌ನಲ್ಲಿ ಕೆಲಸದ ಅವಕಾಶ ನೀಡಿದ್ದರು. ಆದರೆ, ಮಲ್ಲಮ್ಮನನ್ನ ಕೇವಲ ಕೆಲಸಗಾರ್ತಿಯಾಗಿ ನೋಡದೆ ಮನೆಯವರಂತೆ ಪ್ರೀತಿಯಿಂದ ನೋಡಿಕೊಂಡಿದ್ದರು ಎನ್ನಲಾಗಿದೆ. ಮಲ್ಲಮ್ಮ ಕಷ್ಟದ ದಿನಗಳಲ್ಲಿ ಪಲ್ಲವಿ ನೀಡಿದ ಬೆಂಬಲ ಬದುಕಿನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿತ್ತು.

ಬಿಗ್ ಬಾಸ್ ವೇದಿಕೆ ತಲುಪಲು ನೆರವಾದ ಪಲ್ಲವಿ

ಮಲ್ಲಮ್ಮ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಪ್ರವೇಶಿಸುವುದರ ಹಿಂದೆ ಹಲವು ವ್ಯಕ್ತಿಗಳ ಸಹಕಾರವಿತ್ತು. ಇದರಲ್ಲಿ ಪಲ್ಲವಿ ಲಕ್ಷ್ಮಿಕಾಂತ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿದುಬಂದಿದೆ. ಮಲ್ಲಮ್ಮ ಅವರಲ್ಲಿದ್ದ ಮುಗ್ಧತೆ ಮತ್ತು ವಿಭಿನ್ನ ವ್ಯಕ್ತಿತ್ವವನ್ನು ಗುರುತಿಸಿದ್ದ ಪಲ್ಲವಿ ಅವರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು ಎನ್ನಲಾಗಿದೆ.

ಪಲ್ಲವಿ ಲಕ್ಷ್ಮಿಕಾಂತ್ ನಿಧನದ ಸುದ್ದಿ ಹೊರಬಂದ ಬಳಿಕ ಅಭಿಮಾನಿಗಳು ಹಾಗೂ ಚಿತ್ರರಂಗದ ವಲಯದಲ್ಲಿ ಸಂತಾಪ ವ್ಯಕ್ತವಾಗುತ್ತಿದೆ. ಅವರ ಸಾವಿಗೆ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಈ ಕುರಿತು ಅಧಿಕೃತವಾಗಿ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed