Last Updated:
ನಟ ಭಾಸ್ಕರ್ ಶೆಟ್ಟಿ ಈ ಹಿಂದೆ ದರ್ಶನ್ ಅಭಿನಯದ ಯೋಧ ಸಿನಿಮಾದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಜೊತೆ ಕೆಲಸ ಮಾಡಿದ್ದರು ಎನ್ನಲಾಗಿದೆ. ಇದೇ ವೇಳೆ ಇಬ್ಬರ ನಡುವೆ ಪರಿಚಯ ಮತ್ತು ಸೌಹಾರ್ದತೆ ಬೆಳೆದಿತ್ತು ಎಂದು ಭಾಸ್ಕರ್ ಹೇಳಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ (Om Prakash Rao) ವಿರುದ್ಧ ನಟ ಭಾಸ್ಕರ್ ಶೆಟ್ಟಿ (Bhaskar Shetty) ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಸಹಾಯ ಮಾಡುವಂತೆ ಹೇಳಿ ತಮ್ಮಿಂದ ಹಣ ಪಡೆದಿದ್ದು, ಇದೀಗ ಹಣ ವಾಪಸ್ ಕೇಳಿದಾಗ ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿರುವ ಭಾಸ್ಕರ್, ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.














