Last Updated:
Niveditha Gowda: ಮುಖದಲ್ಲಿ ಪಿಂಪಲ್ ಆದರೆ ನಿವೇದಿತಾ ಗೌಡ ಏನು ಮಾಡ್ತಾರೆ ಗೊತ್ತಾ? ಇತ್ತೀಚಿನ ವರ್ಷಗಳ ತನಕವೂ ಮೇಕಪ್ ಮಾಡ್ತಿರ್ಲಿಲ್ವಂತೆ ನಟಿ.
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಅವರ ಸ್ಕಿನ್ ಎಷ್ಟು ಚಂದ ಅಲ್ವಾ? ಕ್ಲೀನ್ & ಕ್ಲಿಯರ್. ಹಾಗಾದರೆ ಸ್ಕಿನ್ಗಾಗಿ ನಿವೇದಿತಾ ಏನು ಮಾಡುತ್ತಾರೆ? ಅವರ ಸ್ಕಿನ್ ಕೇರ್ ರೊಟೀನ್ ಏನು? ಮುಖಕ್ಕೆ ಏನು ಹಚ್ಚುತ್ತಾ? ಅವರ ಮುಖ ಇಷ್ಟು ಕ್ಲಿಯರ್ ಆಗಿರೋದು ಹೇಗೆ?
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ನಿವೇದಿತಾ ಗೌಡ ಅವರು ತಮ್ಮ ಸ್ಕಿನ್ ಕೇರ್ ಬಗ್ಗೆ ಮಾತನಾಡಿದ್ದಾರೆ. ಅವರು ಇತ್ತೀಚಿನವರೆಗೂ ಮೇಕಪ್ ಮಾಡಿಕೊಳ್ಳುತ್ತಿರಲಿಲ್ಲ ಎಂದು ನಟಿ ರಿವೀಲ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಅವರು ಪಿಂಪಲ್ ಆದಾಗ ಏನು ಮಾಡುತ್ತಾರೆ ಎನ್ನುವುದನ್ನು ಕೂಡಾ ರಿವೀಲ್ ಮಾಡಿದ್ದಾರೆ. ನಟಿಯ ಟ್ರಯಲ್ ಏನು? ಅವರು ತಮ್ಮ ಸ್ಕಿನ್ ಕೇರ್ ಬಗ್ಗೆ ಮಾತನಾಡಿದ್ದೇನು? ಇಲ್ಲಿ ಓದಿ.
ಈಗೀಗ ಮೇಕಪ್ ಮಾಡೋಕೆ ಶುರು ಮಾಡಿದ್ದೇನೆ. ಮುಂಚೆ ಮೇಕಪ್ ಮಾಡುತ್ತಿರಲಿಲ್ಲ. ಮೇಕಪ್ ಮಾಡಿದರೆ ಸ್ಕಿನ್ ಹಾಳಾಗುತ್ತೆ ಅನಿಸಿತ್ತು. ಅಮ್ಮ ಏನೂ ಹಚ್ಚಲ್ಲ ಸ್ಕಿನ್ಗೆ. ಅದು ತುಂಬಾ ಚೆನ್ನಾಗಿದೆ. ಹಾಗಾಗಿ ನಾನು ಕೂಡಾ ಮೇಕಪ್ ಮಾಡಿದ್ರೆ ಮುಖ ಹಾಳಾಗುತ್ತೆ ಅಂತ ಅನಿಸುತ್ತಿತ್ತು ಎಂದಿದ್ದಾರೆ.
ರೀಸೆಂಟ್ ತನಕವೂ ಏನೂ ಹಚ್ಚುತ್ತಿರಲಿಲ್ಲ. ಈಗೀಗ ಸ್ವಲ್ಪ ಹಚ್ಚಿಕೊಳ್ತೀನಿ. ಈಗಲೂ ನಾನು ಮೇಕಪ್ ಮಾಡಿದರೆ ನಾನು ಅದನ್ನು ನೀಟಾಗಿ ರಿಮೂವ್ ಮಾಡ್ತೀನಿ. ಮಲಗೋ ಮೊದಲು ಫೇಸ್ವಾಶ್ ಮಾಡ್ತೀನಿ.
ಯಾವುದೇ ಒಂದು ಸ್ಕಿನ್ ಕೇರ್ ಪ್ರಾಡಕ್ಟ್ ನಾನು ಯೂಸ್ ಮಾಡಿ ನನಗೆ ಸಮಸ್ಯೆ ಆಗಿಲ್ಲ ಅಂದ್ರೆ ಅದೇ ಪ್ರಾಡಕ್ಟ್ ಯೂಸ್ ಮಾಡುತ್ತೇನೆ. ಮೊಸರು ಹಾಗೂ ಜೇನನ್ನು ಹಚ್ಚಿಕೊಂಡರೆ ತುಂಬಾ ಬೇಗ ಕಡಿಮೆಯಾಗುತ್ತದೆ.
ನಾನು ಹೊರಗಡೆ ಹೋಗುವಾಗ ಸನ್ಸ್ಕ್ರೀನ್ ಮಿಸ್ ಮಾಡೋದೆ ಇಲ್ಲ. ಮನೆಯಲ್ಲಿದ್ದಾಗಲೂ ಸನ್ಸ್ಕ್ರೀನ್ ಹಾಕಿಕೊಳ್ತೀನಿ. ನಾನು ಟ್ರಯಲರ್ ಮಾಡಿಯೇ ನಮಗೆ ಬೆಸ್ಟ್ ಯಾವುದು ಪ್ರಾಡಕ್ಟ್ ಅಂತ ತಿಳಿಯೋಕೆ ಸಾಧ್ಯ ಎಂದಿದ್ದಾರೆ.
Bangalore [Bangalore],Bangalore,Karnataka













