Last Updated:
Nitish Bharadwaj: ಈ ಪೀಳಿಗೆ ಮಹಾಭಾರತದದ ಕೃಷ್ಣ ಅಂದ್ರೆ ಸೌರಭ್ ಭಾರದ್ವಾಜ್ ಎನ್ನಬಹುದು. ಆದರೆ 90 ಹಾಗೂ 80ರ ದಶಕದ ಪೀಳಿಗೆಯವ್ರನ್ನು ಮಹಾಭಾರತದ ಕೃಷ್ಣ ಯಾರು ಅಂತ ಕೇಳಿದ್ರೆ ಅವ್ರು ಹೇಳೋ ಒಂದೇ ಉತ್ತರ ನಿತೀಶ್ ಭಾರದ್ವಾಜ್!
ಈ ಪೀಳಿಗೆ ಮಹಾಭಾರತದದ (Mahabharata) ಕೃಷ್ಣ (Krishna) ಅಂದ್ರೆ ಸೌರಭ್ ಭಾರದ್ವಾಜ್ (Saurabh Bharadwaj) ಎನ್ನಬಹುದು. ಆದರೆ 90 ಹಾಗೂ 80ರ ದಶಕದ ಪೀಳಿಗೆಯವ್ರನ್ನು ಮಹಾಭಾರತದ ಕೃಷ್ಣ ಯಾರು ಅಂತ ಕೇಳಿದ್ರೆ ಅವ್ರು ಹೇಳೋ ಒಂದೇ ಉತ್ತರ ನಿತೀಶ್ ಭಾರದ್ವಾಜ್! ಹೌದು, ನಿತೀಶ್ ಭಾರದ್ವಾಜ್ (Nitish Bharadwaj) ಶ್ರೀಕೃಷ್ಣನಿಗೆ ಸಮಾನಾರ್ಥಕವಾಗಿ ಉಳಿದಿದ್ದಾರೆ. 1988 ರಲ್ಲಿ ಮೊದಲ ಬಾರಿಗೆ ಪ್ರಸಾರವಾದ ಬಿ.ಆರ್. ಚೋಪ್ರಾ (B.R. Chopra) ಅವರ ಐಕಾನಿಕ್ ಟೆಲಿವಿಷನ್ ಸರಣಿ ಮಹಾಭಾರತದಲ್ಲಿ ಕೃಷ್ಣನ ಪಾತ್ರವನ್ನು ನಿರ್ವಹಿಸಿದ ನಂತರ ಈ ನಟ ಮನೆಮಾತಾದರು. ಅನೇಕ ವೀಕ್ಷಕರು ದಶಕಗಳ ನಂತರವೂ ಅವರನ್ನು ಆ ಪಾತ್ರದೊಂದಿಗೆ ಗುರುತಿಸುತ್ತಿದ್ದಾರೆ.














