Last Updated:
ನಿಹಂಗರ ಅತ್ಯಂತ ಪ್ರಮುಖ ಗುರುತು ಎಂದರೆ ಅವರು ಧರಿಸುವ ನೀಲಿ ಬಣ್ಣದ ಉಡುಪು. ಅವರ ಪೇಟ (ಪಗಡಿ) ಮತ್ತು ವಸ್ತ್ರಗಳಲ್ಲಿ ನೀಲಿ ಬಣ್ಣವೇ ಪ್ರಮುಖವಾಗಿರುತ್ತದೆ. ಇದರ ಹಿಂದೆ ಧಾರ್ಮಿಕ ಮತ್ತು ಐತಿಹಾಸಿಕ ಎಂಬ ಎರಡೂ ರೀತಿಯ ನಂಬಿಕೆಗಳು ಬೆಸೆದುಕೊಂಡಿವೆ. ನೀಲಿ ಬಣ್ಣವನ್ನು ನಿಹಂಗರ ಯೋಧ ಗುರುತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ನಿರ್ಭಯತೆ, ತ್ಯಾಗ ಮತ್ತು ಯುದ್ಧಕ್ಕೆ ಸದಾ ಸಿದ್ಧರಾಗಿರುವ ಮನೋಭಾವಕ್ಕೂ ಹೋಲಿಸಲಾಗುತ್ತದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ದಾಳಿ ನಡೆದಿದೆ. ಗಾಯಗೊಂಡಿದ್ದ ಬಾದಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯ ಗಂಭೀರವಾಗಿಲ್ಲ ಎಂದು ವರದಿಯಾಗಿದೆ. ಸಿಖ್ ಸಮುದಾಯದ ನಿಹಾಂಗ್ ಹೋರಾಟಗಾರನೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಗಳು ಸೂಚಿಸುತ್ತವೆ. ಬಾದಲ್, ಅವರ ಪತ್ನಿ ಮತ್ತು ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರೊಂದಿಗೆ ತಖ್ತ್ ಶ್ರೀ ಹುಜೂರ್ ಸಾಹಿಬ್ನಲ್ಲಿ ಪೂಜೆ ಸಲ್ಲಿಸಲು ನಾಂದೇಡ್ಗೆ ಹೋಗಿದ್ದ ವೇಳೆ ದಾಳಿ ಮಾಡಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಸುದ್ದಿಯಲ್ಲಿ ನಿಹಾಂಗ್ ಹೋರಾಟಗಾರರು ಯಾರು? ಅವರಿಗೆ ಸಿಖ್ ಧರ್ಮಕ್ಕೂ ಏನು ಸಂಬಂಧವಿದೆ? ಅವರು ಬಾದಲ್ ಮೇಲೆ ಏಕೆ ದಾಳಿ ಮಾಡಿದರು? ಎಂಬ ವಿಚಾರದ ಮೇಲೆ ತಿಳಿಯೋಣ.














