NHAI Signal-free Corridor: ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್​; ನಗರದಿಂದ ವಿಮಾನ ನಿಲ್ದಾಣವರೆಗೂ ಸಿಗ್ನಲ್​ ಮುಕ್ತ ಸಂಚಾರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

News18


Last Updated:

ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿ NHAI ನಿಂದ ಸಿಗ್ನಲ್ ರಹಿತ ಕಾರಿಡಾರ್ ನಿರ್ಮಾಣ. ಸಾದಹಳ್ಳಿ ಗೇಟ್ ಅಂಡರ್ ಪಾಸ್ ಕಾಮಗಾರಿ ಮುಂದಿನ ವಾರದಿಂದ ಆರಂಭವಾಗಲಿದೆ.

News18
News18

ಬೆಂಗಳೂರು ದೇಶದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ (Bengaluru City) ಒಂದಾಗಿದೆ. ಬೆಂಗಳೂರು ಐಟಿ ರಂಗಕ್ಕೆ (IT Industries) ಮಾತ್ರವಲ್ಲದೆ ಹಲವು ಮೊದಲುಗಳಿಗೆ ಕಾರಣವಾಗಿದೆ. ಈ ಕಾರಣದಿಂದಲೇ ಇಲ್ಲಿಗೆ ದೇಶದ ವಿವಿಧ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಾರೆ. ಇದರಿಂದ ನಗರದ ಬೆಳವಣಿಗೆ ವೇಗ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅಷ್ಟೇ ವೇಗವಾಗಿ ಟ್ರಾಫಿಕ್ ಸಮಸ್ಯೆ (Traffic Problem) ಕೂಡ ಹೆಚ್ಚಾಗಿದೆ. ಬೆಂಗಳೂರು ಟ್ರಾಫಿಕ್ ಬಗ್ಗೆ ಹಲವು ಬಾರಿ ಚರ್ಚೆ ಆಗಿದ್ದರೂ, ನಗರದಲ್ಲಿ ಒಂದು ಕಿಲೋ ಮೀಟರ್ ಪ್ರಯಾಣ ಮಾಡಬೇಕು ಎಂದರೂ ನೀವು ಹೆಚ್ಚು ಸಮಯ ವ್ಯಯಿಸಬೇಕಾಗುತ್ತದೆ. ಟ್ರಾಫಿಕ್ ಸಮಸ್ಯೆಯಿಂದ ಆಫೀಸ್​​ಗೆ ಲೇಟ್ ಆಗಿ ಹೋಗೋದು, ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಗೆ ತಡವಾಗಿ ಹೋಗಿ ಜರ್ನಿಯನ್ನ ಮಿಸ್ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ (Signal Free Corridor). ಇತ್ತೀಚೆಗೆ ಇನ್ಫೋಸಿಸ್ ಸಹ-ಸಂಸ್ಥಾಪಕ ಕೂಡ ಬೆಂಗಳೂರು ಟ್ರಾಫಿಕ್ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು.

ಇದರ ನಡುವೆಯೇ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಕಡೆಗೆ ಪ್ರಯಾಣ ಮಾಡುವ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ವಿಮಾನ ನಿಲ್ದಾಣ ಮಾರ್ಗದಲ್ಲಿ ಸಿಗ್ನಲ್ ರಹಿತ ಕಾರಿಡಾರ್ ನಿರ್ಮಾಣಕ್ಕೆ NHAI ಮುಂದಾಗಿದೆ. ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾದಹಳ್ಳಿ ಗೇಟ್ ಅಂಡರ್ ಪಾಸ್ ಯೋಜನೆಗೆ ಭಾರತೀಯ ಹೆದ್ದಾರಿ ಪ್ರಾಧಿಕಾರ ಮುಂದಿನ ವಾರದಿಂದ ಕಾಮಗಾರಿ ಆರಂಭ ಮಾಡಲಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಸುಮಾರು 700 ಮೀಟರ್ ಉದ್ದ ಇರುವ ಈ ಅಂಡರ್ ಪಾಸ್ ನಿರ್ಮಾಣಕ್ಕೆ 15 ತಿಂಗಳ ಕಾಲ ರಾತ್ರಿ ವೇಳೆ 11 ಗಂಟೆಯಿಂದ ಬೆಳಗ್ಗೆ 05 ಗಂಟೆ ವರಗೂ ಕಾಮಗಾರಿ ನಡೆಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಜುಲೈ 01 ರಂದು ಭಾರತೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅನುಮತಿ ನೀಡಿದ್ದಾರೆ.

ವಿಮಾನ ನಿಲ್ದಾಣದ ಮಾರ್ಗದ ಹೆದ್ದಾರಿಯಲ್ಲಿ 22 ಕಿಲೋ ಮೀಟರ್ ದೂರ, ಅಂದರೆ ಹೆಬ್ಬಾಳದಿಂದ ಸಾದಹಳ್ಳಿ ಜಂಕ್ಷನ್ ನಡುವೆ ಸಾದಹಳ್ಳಿ ಗೇಟ್ ಬಳಿ ಮಾತ್ರ ಸಿಗ್ನಲ್ ಹೊಂದಿದೆ. ಉಳಿದ ಕಾರಿಡಾರ್ ನಲ್ಲಿ ಫ್ಲೈಓವರ್ ಮತ್ತು ಎಲಿವೇಟೆಡ್ ಕಾರಿಡಾರ್ ಮೂಲಕ ಸಿಗ್ನಲ್ ಮುಕ್ತ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಸದ್ಯ 30 ಕೋಟಿ ರೂಪಾಯಿ ಹೆಚ್ಚಳದಲ್ಲಿ ನಿರ್ಮಾಣ ಆಗಲಿರುವ 06 ಲೈನ್ ಗಳ ಸದಾಹಳ್ಳಿ ಅಂಡರ್ ಪಾಸ್​ಗೆ ಈ ಹಿಂದೆ ತಡೆಗಳು ದೂರವಾಗಿದೆ. ಇದರೊಂದಿಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಲು ಯಾವುದೇ ತಡೆ ಇಲ್ಲದೆ, ಮುಂದಿನ ವಾರದಿಂದ ಟ್ರಾಫಿಕ್ ಮಾರ್ಗಗಳಲ್ಲಿ ಬದಲಾವಣೆ ಮಾಡುವುದಾಗಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Construction Waste: ಮೈಸೂರಿನಲ್ಲಿ ಹೊಸ ಮನೆಕಟ್ಟುವವರಿಗೆ ಗುಡ್​​ನ್ಯೂಸ್ ಕೊಟ್ಟ ಪಾಲಿಕೆ; ಕಟ್ಟಡ ತ್ಯಾಜ್ಯ ವಿಲೇವಾರಿಗೆ ಸಮಸ್ಯೆಗೆ ಶಾಶ್ವತ ಮುಕ್ತಿ!

ಅಂಡರ್ ಪಾಸ್ ನಿರ್ಮಾಣಕ್ಕೆ ಇದೇ ಸೆಪ್ಟೆಂಬರ್ ನಲ್ಲಿ ಭೂಮಿ ಅಗೆಯುವ ಕಾಮಗಾರಿ ಆರಂಭ ಆಗಲಿದ್ದು, ಈ ಯೋಜನೆಯ ನಿರ್ಮಾಣವನ್ನು ವಿದ್ಯಾ ಇನ್ಫ್ರಾಬುಲ್ಟ್ ಪ್ರೈವೇಟ್ ಲಿಮಿಟೆಡ್ ಮಾಡಲಿದೆ. ಯೋಜನೆಗೆ ಅಗತ್ಯವಿರುವ ಡಿಸೈನ್ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಜುಲೈ, ಆಗಸ್ಟ್ ತಿಂಗಳಿನಲ್ಲಿ ಮಳೆ ಹೆಚ್ಚಾಗಿರುವ ಕಾರಣ, ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಅಂಡರ್ ಪಾಸ್ ಕಟ್ ಅಂಡ್ ಕವರ್ ಪದ್ಧತಿಯಲ್ಲಿ ನಿರ್ಮಾಣ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂಡರ್ ಪಾಸ್ ನಿರ್ಮಾಣಕ್ಕೂ ಮುನ್ನ ಇಲ್ಲಿ ಫ್ಲೈಓವರ್ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಆದರೆ ಭೂ ಒತ್ತುವರಿ ಕಷ್ಟವಾದ ಕಾರಣ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed