Neet UG Re Exam: ನೀಟ್​ ಯುಜಿ ಮರು ಪರೀಕ್ಷೆಗೂ ಮುನ್ನ NTA ಎಚ್ಚರಿಕೆ! ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ / NEET UG Re-Exam: NTA Issues Strict Advisor | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ


Last Updated:

NEET UG 2026 ಮರು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ NTA ಮಹತ್ವದ ಸೂಚನೆ ನೀಡಿದೆ. ಜೂನ್ 21 ರಂದು ನಡೆಯುವ ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಒಂದಷ್ಟು ಸೂಚನೆ, ಜೊತೆಗೆ ಎಚ್ಚರಿಕೆಯನ್ನು ನೀಡಿದೆ.

ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ
ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ

ನೀಟ್ ಪರೀಕ್ಷೆಯ ಮರುಪರೀಕ್ಷೆಯ (NEET Exam) ಸಮಯ ಸಮೀಪಿಸುತ್ತಿರುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿದ್ಯಾರ್ಥಿಗಳಿಗೆ ಮುಖ್ಯ ಎಚ್ಚರಿಕೆ ನೀಡಿದೆ. NEET UG 2026 ಮರು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಸೂಚನೆ ನೀಡಿದೆ. ಜೂನ್ 21, 2026 ರಂದು ನಡೆಯಲಿರುವ NEET UG ಮರು ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ NTA SMS, ಇಮೇಲ್ ಮತ್ತು WhatsApp ಜ್ಞಾಪನೆಗಳನ್ನು ಕಳುಹಿಸಲು ಪ್ರಾರಂಭಿಸಿದೆ.

ಜೊತಎಗೆ ನಕಲಿ ಸಂದೇಶಗಳು, ಸೈಬರ್ ವಂಚನೆ ಮತ್ತು ಹಣ ಕೇಳುವ ಮೋಸಗಳು ಹೆಚ್ಚಾಗುತ್ತಿರುವುದರಿಂದ ವಿದ್ಯಾರ್ಥಿಗಳು ತುಂಬಾ ಎಚ್ಚರಿಕೆಯಿಂದಿರಬೇಕು ಎಂದು NTA ಸ್ಪಷ್ಟಪಡಿಸಿದೆ.

ನೀಟ್​ ಪರೀಕ್ಷೆಗೂ ಮುನ್ನ ಎನ್​ಟಿಎ ಎಚ್ಚರಿಕೆ!

ಮರು ಪರೀಕ್ಷೆಗೂ ಮುನ್ನ, ಅಭ್ಯರ್ಥಿಗಳಿಗೆ ತಮ್ಮ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಂಸ್ಥೆ SMS, ಇಮೇಲ್ ಮತ್ತು WhatsApp ಮೂಲಕ ಜ್ಞಾಪನೆಗಳನ್ನು ಕಳುಹಿಸುತ್ತಿದೆ. ವಿದ್ಯಾರ್ಥಿಗಳು ವಂಚನೆಯ ಸಂದೇಶಗಳು ಮತ್ತು ಸೈಬರ್ ವಂಚನೆಯ ಬಗ್ಗೆ ಎಚ್ಚರದಿಂದಿರಬೇಕು ಎಂದು NTA ಸೂಚಿಸಿದೆ. ಅಭ್ಯರ್ಥಿಗಳು ಅಧಿಕೃತ ಮಾರ್ಗಗಳ ಮೂಲಕ ಸ್ವೀಕರಿಸಿದ ಮಾಹಿತಿಯನ್ನು ಮಾತ್ರ ನಂಬಬೇಕು ಮತ್ತು ಅಧಿಕೃತ ವೆಬ್‌ಸೈಟ್‌ನಿಂದ ಮಾತ್ರ ತಮ್ಮ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

NTA ಎಂದಿಗೂ ಹಣ ಕೇಳುವುದಿಲ್ಲ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಯಾವುದೇ ವಿದ್ಯಾರ್ಥಿಯಿಂದ ಪಾವತಿ ಅಥವಾ ಹಣ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿ, ಪ್ರವೇಶ ಪತ್ರ, ಉತ್ತರ ಕೀಲಿ ಅಥವಾ ಪ್ರಶ್ನೆ ಪತ್ರಿಕೆಯನ್ನು ಹಂಚಿಕೊಳ್ಳುವುದಿಲ್ಲ. ಇಂತಹ ಸಂದೇಶಗಳು ಬಂದರೆ ಅವುಗಳ ಮೇಲೆ ಕ್ಲಿಕ್ ಮಾಡದೆ ತಕ್ಷಣವೇ ದೂರು ದಾಖಲಿಸಬೇಕು.

ವಾಟ್ಸಾಪ್ ಸಂದೇಶಗಳ ಬಗ್ಗೆ ಎಚ್ಚರಿಕೆ

NTA ವಿದ್ಯಾರ್ಥಿಗಳಿಗೆ ಮಾಹಿತಿ ಕಳುಹಿಸುವ ಅಧಿಕೃತ ವಾಟ್ಸಾಪ್ ಸಂಖ್ಯೆ +91 78279 80287. ಈ ಸಂಖ್ಯೆಯಲ್ಲಿ ನೀಲಿ ಪರಿಶೀಲನಾ ಬ್ಯಾಡ್ಜ್ (Blue Tick) ಮತ್ತು “ರಾಷ್ಟ್ರೀಯ ಪರೀಕ್ಷಾ ಸಂಸ್ಥೆ” ಎಂಬ ಹೆಸರು ಇರಬೇಕು. ಬೇರೆ ಯಾವುದೇ ಸಂಖ್ಯೆಯಿಂದ ಬಂದ ಸಂದೇಶಗಳನ್ನು ನಂಬಬಾರದು.

ಹಳೆಯ ಪ್ರವೇಶ ಪತ್ರ ಮಾನ್ಯವಲ್ಲ

ಮೇ 3ರಂದು ನೀಡಲಾಗಿದ್ದ ಹಳೆಯ ಪ್ರವೇಶ ಪತ್ರ ಈಗ ಮಾನ್ಯವಾಗುವುದಿಲ್ಲ. ಅನೇಕ ವಿದ್ಯಾರ್ಥಿಗಳಿಗೆ ಹೊಸ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿದೆ. ಆದ್ದರಿಂದ ಜೂನ್ 21ರ ಪರೀಕ್ಷೆಗೆ ಹೊಸ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ ಮುದ್ರಿಸಿಕೊಳ್ಳಬೇಕು. ಒಮ್ಮೆ ಡೌನ್‌ಲೋಡ್ ಮಾಡಿ ಮುದ್ರಿಸಿದ್ದರೆ ಮತ್ತೆ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ.

ಸೈಬರ್ ವಂಚನೆಯಿಂದ ಎಚ್ಚರ

ಪರೀಕ್ಷೆಗೆ ಸಂಬಂಧಿಸಿದಂತೆ ಹಣ ಕೇಳುವ, ಲಿಂಕ್‌ಗಳನ್ನು ಕಳುಹಿಸುವ ಅಥವಾ “ಪ್ರಶ್ನೆ ಪತ್ರಿಕೆ ಕೊಡುತ್ತೇವೆ” ಎಂದು ಹೇಳುವ ಸಂದೇಶಗಳು ಬಹಳ ಸಾಮಾನ್ಯವಾಗಿವೆ. ಇವುಗಳು ಸೈಬರ್ ವಂಚಕರಿಂದ ಬರುತ್ತವೆ. ವಿದ್ಯಾರ್ಥಿಗಳು ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು. ಸಂದೇಶ ಬಂದ ತಕ್ಷಣ NTA ಅಧಿಕೃತ ವೆಬ್‌ಸೈಟ್ ಅಥವಾ ಹೆಲ್ಪ್‌ಲೈನ್‌ಗೆ ಸಂಪರ್ಕಿಸಬೇಕು.

NTA ಸಂದೇಶ

NTA ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ:

  • ಅಧಿಸೂಚನೆಗಳು ಮತ್ತು ಅಧಿಕೃತ ವೆಬ್‌ಸೈಟ್ ಅನ್ನು ಮಾತ್ರ ನಂಬಿ.
  • ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುದ್ದಿಗಳನ್ನು ನಂಬಬೇಡಿ.
  • ಯಾವುದೇ ಸಂದೇಹ ಇದ್ದರೆ ತಕ್ಷಣ NTA ಹೆಲ್ಪ್‌ಲೈನ್‌ಗೆ ಕರೆ ಮಾಡಿ.

ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವುದು ಎಲ್ಲಾ ವಿದ್ಯಾರ್ಥಿಗಳ ಜವಾಬ್ದಾರಿ ಎಂದು NTA ತಿಳಿಸಿದೆ. ವಂಚಕರು ವಿದ್ಯಾರ್ಥಿಗಳ ಆತಂಕವನ್ನು ಬಳಸಿಕೊಂಡು ಹಣ ವಂಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು.

ಸಲಹೆ:

  • NTA ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಿ.
  • ಸಂದೇಹಾಸ್ಪದ ಸಂದೇಶಗಳನ್ನು ಸ್ಕ್ರೀನ್‌ಶಾಟ್ ತೆಗೆದು ಪೊಲೀಸ್ ಅಥವಾ NTAಗೆ ದೂರು ನೀಡಿ.
  • ಹೊಸ ಪ್ರವೇಶ ಪತ್ರವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ.

ವಿದ್ಯಾರ್ಥಿಗಳು ಆತಂಕಗೊಳ್ಳದೆ ತಯಾರಿಯಲ್ಲಿ ಗಮನ ಹರಿಸಬೇಕು. ನೀಟ್ ಪರೀಕ್ಷೆಯು ನ್ಯಾಯಸಮ್ಮತವಾಗಿ ನಡೆಯುತ್ತದೆ ಎಂದು NTA ಭರವಸೆ ನೀಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed