NEET Exam: ನೀಟ್ ಪರೀಕ್ಷೆಗೂ ಮುನ್ನ ಮತ್ತೊಂದು ಮಹಾ ಯಡವಟ್ಟು! ಹಾಲ್ ಟಿಕೆಟ್ ಕಂಡು ಅಭ್ಯರ್ಥಿಯೇ ಶಾಕ್! ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

NTA Error: ಅಭ್ಯರ್ಥಿಯ ಕುಟುಂಬದವರು ಸಮಸ್ಯೆ ಕಂಡು ತಕ್ಷಣವೇ ಎನ್‌ಟಿಎ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಮಾತನಾಡಿದರು, ಅಲ್ಲಿ ಒಬ್ಬ ಅಧಿಕಾರಿ ಈ ತಪ್ಪನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು. ಆದರೆ ಪರೀಕ್ಷೆಗೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇದ್ದರೂ ಎನ್‌ಟಿಎ ಇದುವರೆಗೂ ಆ ತಪ್ಪನ್ನು ಸರಿಪಡಿಸಿಲ್ಲ ಎಂದು ಹೇಳಲಾಗಿದೆ.

News18
News18

ನಾಗಪುರ: ನೀಟ್ ಪರೀಕ್ಷೆ (NEET Re Exam) ಬರೆಯುವ ವಿದ್ಯಾರ್ಥಿಯೊಬ್ಬ ತಮ್ ಹೊಸ ಹಾಲ್ ಟಿಕೆಟ್ ನೋಡಿ ಅಚ್ಚರಿಗೆ ಒಳಗಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ನಾಗಪುರದ 18 ವರ್ಷದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬ ವ್ಯಕ್ತಿ ತಮ್ಮ ಹೊಸ ಹಾಲ್ ಟಿಕೆಟ್ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ. ಯಾಕೆಂದರೆ ಅವರ ಪರೀಕ್ಷಾ ಕೇಂದ್ರವನ್ನು ಅಬುಧಾಬಿಯಲ್ಲಿ (2,500 ಕಿ.ಮೀ. ದೂರ) ನಿಗದಿಪಡಿಸಲಾಗಿತ್ತು. ತನ್ನ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲದ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಈಗ ಪರೀಕ್ಷೆ ಹೇಗೆ ಬರೆಯಲಿ ಎಂದು ಕಂಗಾಲಾಗಿದ್ದಾರೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವಿದೇಶಗಳಲ್ಲೂ ಪರೀಕ್ಷಾ ಕೇಂದ್ರಗಳನ್ನು ನೀಡುತ್ತದೆ. ಆದರೆ ಅದು ಸಾಮಾನ್ಯವಾಗಿ ಎನ್‌ಆರ್‌ಐ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಮಾತ್ರ ಇರುತ್ತದೆ. ಆದರೆ ಭಾರತದಲ್ಲೇ ಇರುವ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಅವರಿಗೆ ವಿದೇಶದ ಪರೀಕ್ಷಾ ಕೇಂದ್ರವನ್ನು ನೀಡಿರೋದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: USA-Italy: ಟ್ರಂಪ್ ಬಾಲಿಶ ಹೇಳಿಕೆಯಿಂದ ಹದಗೆಟ್ಟ ಸಂಬಂಧ! ಇಟಲಿ ವಿದೇಶಾಂಗ ಸಚಿವರ ಅಮೆರಿಕಾ ಪ್ರವಾಸ ದಿಢೀರ್ ರದ್ದು!

ಜೂನ್ 14ರಂದು ಜನರೇಟ್ ಆದ ಹಾಲ್ ಟಿಕೆಟ್‌ನಲ್ಲಿ ಅಬು ಧಾಬಿ ಇಂಡಿಯನ್ ಸ್ಕೂಲ್ ಅನ್ನು ಮೊಹಮ್ಮದ್ ತಾಲಿಬ್ ಅವರಿಗೆ ಪರೀಕ್ಷಾ ಕೇಂದ್ರವಾಗಿ ತೋರಿಸಲಾಗಿತ್ತು. ಕುಟುಂಬದವರು ತಕ್ಷಣವೇ ಎನ್‌ಟಿಎ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಮಾತನಾಡಿದರು, ಅಲ್ಲಿ ಒಬ್ಬ ಅಧಿಕಾರಿ ಈ ತಪ್ಪನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು. ಆದರೆ ಪರೀಕ್ಷೆಗೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇದ್ದರೂ ಎನ್‌ಟಿಎ ಇದುವರೆಗೂ ಆ ತಪ್ಪನ್ನು ಸರಿಪಡಿಸಿಲ್ಲ ಎಂದು ಹೇಳಲಾಗಿದೆ.

ತಾಲಿಬ್ ಕುಟುಂಬದವರು ಬಹಳ ಚಿಂತೆಗೊಳಗಾಗಿ, ಪರೀಕ್ಷಾ ಕೇಂದ್ರ ಬದಲಾಗದಿದ್ದರೆ ಪ್ರಯಾಣದ ದಾಖಲೆಗಳು ಮತ್ತು ವಿಮಾನ ಟಿಕೆಟ್‌ಗಳನ್ನು ಏರ್ಪಡಿಸಲು ಸಿದ್ಧತೆ ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ. ಹೆತ್ತವರು ಇಷ್ಟು ಕಡಿಮೆ ಸಮಯದಲ್ಲಿ ಪಾಸ್‌ಪೋರ್ಟ್ ಮತ್ತು ಪ್ರಯಾಣ ಪ್ಲಾನ್ ಬಗ್ಗೆ ಮಾಡುವುದು ತುಂಬಾ ಕಷ್ಟ ಎಂದು ಚಿಂತೆಗೆ ಒಳಗಾಗಿದ್ದಾರೆ.

ನೀಟ್ ಪ್ರಶ್ನೆ ಪೇಪರ್ ಲೀಕ್ ಆದ ನಂತರ ತಾಲಿಬ್ ತುಂಬಾ ಒತ್ತಡದಲ್ಲಿದ್ದರು. ಆ ಹಿನ್ನಡೆಯಿಂದ ಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಇದೀಗ ಇದಕ್ಕೆ ಹಾಲ್ ಟಿಕೆಟ್ ತಪ್ಪು ಕೂಡ ಸೇರಿ ಅವರ ಆಘಾತವನ್ನು ಮತ್ತಷ್ಟು ಹೆಚ್ಚಿಸಿದೆ. ಎನ್‌ಟಿಎ ಅಧಿಕಾರಿಗಳು ಈ ಬಗ್ಗೆ ಕೇಳಿದ ಯಾವುದೇ ಪ್ರಶ್ನೆಗೆ ಉತ್ತರ ನೀಡಲಿಲ್ಲ. ಆದರೆ ಮೂಲಗಳ ಪ್ರಕಾರ ಈಗ ಈ ಹಂತದಲ್ಲಿ ವ್ಯಾಪಕ ಬದಲಾವಣೆಗಳು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದೇ ಸಮಯದಲ್ಲಿ ಹಲವು ಪೋಷಕರು ತಮ್ಮ ಮಕ್ಕಳ ಹಾಲ್ ಟಿಕೆಟ್‌ನಲ್ಲಿ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲಾಗಿದೆ ಎಂದು ದೂರಿದ್ದಾರೆ. ಅವರು ನಿಯೋಜಿತ ಕೇಂದ್ರಗಳಲ್ಲಿ ಯಾವುದನ್ನೂ ಆಯ್ಕೆ ಮಾಡದಿದ್ದರೂ ಈ ಬದಲಾವಣೆಯ ಯಡವಟ್ಟು ಮಾಡಲಾಗಿದೆ.

ಇದನ್ನೂ ಓದಿ: Kerala Duryodhana Temple: ಮಹಾಭಾರತದ ದುರ್ಯೋಧನನ ಹೆಸರಲ್ಲಿ ಇಂದಿಗೂ ಕೇರಳದ ಈ ಭೂಮಿಗೆ ತೆರಿಗೆ ಪಾವತಿಸುತ್ತೆ ಕೇರಳದ ಈ ದೇಗುಲ!

ಕಳೆದ ತಿಂಗಳು ನೀಟ್ ಪರೀಕ್ಷೆ ರದ್ದುಪಡಿಸಿದ ನಂತರ, ಎನ್‌ಟಿಎ ಪೋಷಕರು ಮತ್ತು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಸಂದೇಶ ಕಳುಹಿಸಿ, ತಮ್ಮ ಹಳೆಯ ಪರೀಕ್ಷಾ ಕೇಂದ್ರವನ್ನೇ ಉಳಿಸಿಕೊಳ್ಳಲು ಬಯಸುತ್ತಾರೆಯೇ ಅಥವಾ ಹೊಸ ಕೇಂದ್ರವನ್ನು ಆಯ್ಕೆ ಮಾಡಲು ಬಯಸುತ್ತಾರೆಯೇ ಎಂದು ಕೇಳಿದ್ದರು. ಎನ್‌ಟಿಎ 2,500 ರೂಪಾಯಿ ಪರೀಕ್ಷಾ ಶುಲ್ಕದ ರಿಫಂಡ್‌ಗಾಗಿ ಬ್ಯಾಂಕ್ ವಿವರಗಳನ್ನು ಕೇಳಿದ್ದರು. ಯಾವುದೇ ಹೊಸ ಶುಲ್ಕವನ್ನು ವಸೂಲಿ ಮಾಡಲಾಗಿಲ್ಲ ಎಂದು ಪೋಷಕರು ಹೇಳಿದ್ದಾರೆ.

ಹಲವು ಪೋಷಕರು ತಮ್ಮ ಮೂಲ ಪರೀಕ್ಷಾ ಕೇಂದ್ರವನ್ನೇ ಉಳಿಸಿಕೊಳ್ಳುವ ಆಯ್ಕೆಯನ್ನು ಆರಿಸಿದ್ದೇವೆ ಎಂದು ಹೇಳಿದ್ದಾರೆ, ವಿಶೇಷವಾಗಿ ನಾಗಪುರ ನಗರದ ಒಳಗಿನ ಕೇಂದ್ರಗಳನ್ನು ಆಯ್ಕೆ ಮಾಡಿದವರು. ಆದರೆ ಹೊಸ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿದ ನಂತರ ಕೆಲವರು ತಮ್ಮ ಪರೀಕ್ಷಾ ಕೇಂದ್ರಗಳು ಬಹಳ ದೂರದ ಸ್ಥಳಗಳಲ್ಲಿ, ಇತರ ಜಿಲ್ಲೆಗಳಲ್ಲೂ ಇದೆ ಎಂದು ಕಂಡುಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed