Narendra Modi: ಚಿನ್ನ-ಬೆಳ್ಳಿಯಲ್ಲ, ಮೋದಿ ಕೈಯಲ್ಲಿ 30 ಕಿಲೋಗ್ರಾಂ ತಾಮ್ರದ ಫಲಕ; ಒಳಗಡೆ ಇದೆ ಚೋಳರ ಗುಟ್ಟು! ಇದು ನೆದರ್‌ಲ್ಯಾಂಡ್‌ ಸೇರಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ರಾಬ್‌ ಜೆಟ್ಟನ್‌ ಅವರು


Last Updated:

ನೆದರ್‌ಲ್ಯಾಂಡ್ಸ್‌ನ ಲೈಡನ್ ಸಂಗ್ರಹಾಲಯದಲ್ಲಿದ್ದ ಚೋಳರ ಅನೈಮಂಗಲಂ ತಾಮ್ರ ಫಲಕಗಳು ದೀರ್ಘ ರಾಜತಾಂತ್ರಿಕ ಪ್ರಯತ್ನದ ಬಳಿಕ ನರೇಂದ್ರ ಮೋದಿ ಅವರಿಗೆ ಹಸ್ತಾಂತರವಾಗಿ ಭಾರತಕ್ಕೆ ಮರಳಿವೆ

ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ರಾಬ್‌ ಜೆಟ್ಟನ್‌ ಅವರು
ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ರಾಬ್‌ ಜೆಟ್ಟನ್‌ ಅವರು

ಬೆಂಗಳೂರು: ಸುಮಾರು 150 ರಿಂದ 160 ವರ್ಷಗಳ ಕಾಲ ನೆದರ್‌ಲ್ಯಾಂಡ್ಸ್‌ನ ಲೈಡನ್ ವಿಶ್ವವಿದ್ಯಾಲಯದ ಸಂಗ್ರಹಾಲಯದಲ್ಲಿ ಕೂತಿದ್ದ ಅಮೂಲ್ಯ ಚೋಳರ (Cholas) ತಾಮ್ರ ಫಲಕಗಳು ಅಂತಿಮವಾಗಿ ತಾಯ್ನಾಡು ಭಾರತಕ್ಕೆ ಮರಳಿ ಬಂದಿವೆ. ಮೇ 15-16, 2026 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ರಾಬ್ ಜೆಟ್ಟನ್ ಅವರು ಈ ಫಲಕಗಳ ಹಸ್ತಾಂತರ (Hand Over) ನಡೆಯಿತು. ಇದು ಭಾರತ-ನೆದರ್‌ಲ್ಯಾಂಡ್ಸ್ ನಡುವಿನ ಸಾಂಸ್ಕೃತಿಕ ರಾಜತಾಂತ್ರಿಕತೆಯ ಅತ್ಯಂತ ಮಹತ್ವದ (Important) ಮೈಲಿಗಲ್ಲಾಗಿದ್ದು, ಭಾರತ ಕನಿಷ್ಠ 14 ವರ್ಷಗಳ ಕಾಲ ಸಕ್ರಿಯ ರಾಜತಾಂತ್ರಿಕ ಪ್ರಯತ್ನ ನಡೆಸಿ ಈ ಫಲಕಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.

ಅನೈಮಂಗಲಂ ತಾಮ್ರ ಫಲಕಗಳು ಎಂಬ ಮಹಾರಹಸ್ಯ

ʼಅನೈಮಂಗಲಂ ತಾಮ್ರ ಫಲಕಗಳುʼ ಎಂದೇ ಪ್ರಸಿದ್ಧವಾಗಿರುವ ಈ ಫಲಕಗಳು  “Larger Leiden Plates” ಎಂದು ಗುರುತಿಸಿಕೊಂಡಿವೆ. ಇವುಗಳ ಆಕಾರ, ರೂಪ ಹಾಗೂ ಶೈಲಿಯ ವಿವರ ನೋಡಿದರೆ ಅಚ್ಚರಿ ಉಂಟಾಗುತ್ತದೆ. 21 ದೊಡ್ಡ ತಾಮ್ರ ಫಲಕಗಳು ಮತ್ತು 3 ಚಿಕ್ಕ ಫಲಕಗಳು ಸೇರಿ ಒಟ್ಟು 24 ಫಲಕಗಳ ಈ ಸಂಚಿ ಸುಮಾರು 30 ಕಿಲೋಗ್ರಾಂ ತೂಕ ಹೊಂದಿದ್ದು, ರಾಜೇಂದ್ರ ಚೋಳ I ರ ರಾಜಮುದ್ರೆ ಹೊಂದಿದ ಬೃಹತ್ ಕಂಚಿನ ಉಂಗುರದಿಂದ ಒಟ್ಟಿಗೆ ಬಂಧಿಸಲಾಗಿದೆ.

ಚೋಳ ರಾಜವಂಶದ ಕೀರ್ತಿ

ಫಲಕಗಳಲ್ಲಿರುವ ಶಾಸನ ವಿವರ ಅತ್ಯಂತ ಮಹತ್ವದ್ದು. ಮೊದಲ 5 ಫಲಕಗಳು ಸಂಸ್ಕೃತ ಭಾಷೆಯಲ್ಲಿ ಗ್ರಂಥ ಲಿಪಿಯಲ್ಲಿ ಚೋಳ ವಂಶಾವಳಿಯ ವಿವರ ಹೊಂದಿದ್ದು, ವಿಷ್ಣುವಿನಂತಹ ಪೌರಾಣಿಕ ಪೂರ್ವಜರಿಂದ ಆರಂಭಿಸಿ ರಾಜರ ಸಾಧನೆಗಳನ್ನು ದಾಖಲಿಸಿದೆ. ಉಳಿದ ಫಲಕಗಳು ತಮಿಳು ಭಾಷೆಯಲ್ಲಿ ಭೂ ದಾನ ಮತ್ತು ಆಡಳಿತ ವಿವರಗಳನ್ನು ಒಳಗೊಂಡಿದ್ದು ಚೋಳ ಆಡಳಿತದ ನಿಖರತೆ ಮತ್ತು ಕ್ರಮಬದ್ಧತೆಗೆ ಸಾಕ್ಷಿಯಾಗಿದೆ.

ಅಪ್ಪನ ಮಾತು, ಮಗನ ಸ್ಮರಣೆ

ಐತಿಹಾಸಿಕ ವಿಷಯದ ದೃಷ್ಟಿಯಿಂದ ಈ ಫಲಕಗಳು ಅತ್ಯಂತ ಅಮೂಲ್ಯ. ಬೃಹದೀಶ್ವರ ದೇವಾಲಯ ನಿರ್ಮಿಸಿ ಖ್ಯಾತಿ ಗಳಿಸಿದ ಮಹಾನ್ ಚೋಳ ಚಕ್ರವರ್ತಿ ರಾಜರಾಜ ಚೋಳ I (ಕ್ರಿ.ಶ. 985–1014) ತಮಿಳುನಾಡಿನ ನಾಗಪಟ್ಟಣಂ ಸಮೀಪದ ಅನೈಮಂಗಲಂ ಗ್ರಾಮ ಮತ್ತು ಅದರ ರಾಜಸ್ವವನ್ನು ಚೂಡಾಮಣಿ ವಿಹಾರ (Chudamani Vihara) ಬೌದ್ಧ ಮಠಕ್ಕೆ ನೀಡುವ ಮೌಖಿಕ ವಾಗ್ದಾನ ಮಾಡಿದ್ದರು. ಅವರ ಪುತ್ರ ರಾಜೇಂದ್ರ ಚೋಳ I (ಕ್ರಿ.ಶ. 1012–1042) ಈ ವಾಗ್ದಾನವನ್ನು ಚಿರಸ್ಥಾಯಿಯಾಗಿಸಲು ಅದನ್ನು ತಾಮ್ರ ಫಲಕಗಳಲ್ಲಿ ಕೆತ್ತಿಸಿದರು.

ಸಾಗರೋತ್ತರ ಸಂಬಂಧ ಹಾಗೂ ಚೋಳ ಸಾಮ್ರಾಜ್ಯ

ಈ ವಿಹಾರವನ್ನು ಶ್ರೀವಿಜಯ ಸಾಮ್ರಾಜ್ಯ (ಇಂದಿನ ಮಲೇಷ್ಯಾ-ಇಂಡೋನೇಷ್ಯಾ ಪ್ರದೇಶ) ದ ರಾಜ ಶ್ರೀ ಮಾರ ವಿಜಯೋತ್ತುಂಗ ವರ್ಮನ್ ನಿರ್ಮಿಸಿದ್ದನು. ಇದು ಚೋಳ ಮತ್ತು ಶ್ರೀವಿಜಯ ಸಾಮ್ರಾಜ್ಯಗಳ ರಾಜತಾಂತ್ರಿಕ ಸಂಬಂಧ ಮತ್ತು ಭಾರತೀಯ ಮಹಾಸಾಗರ ವ್ಯಾಪಾರ ಮಾರ್ಗಗಳ ಮೇಲಿನ ಚೋಳ ಪ್ರಭಾವಕ್ಕೆ ಜೀವಂತ ಸಾಕ್ಷಿ. ಅಲ್ಲದೇ ಹಿಂದೂ ಧರ್ಮದ ಜೊತೆಗೆ ಬೌದ್ಧ ಧರ್ಮಕ್ಕೂ ಪೋಷಣೆ ನೀಡಿದ ಚೋಳ ರಾಜರ ಧಾರ್ಮಿಕ ಸಹಿಷ್ಣುತೆಗೆ ಇವು ಅಮೂಲ್ಯ ಪ್ರಮಾಣಪತ್ರ.
ಯಾರಿಂದ ಈ ಫಲಕಗಳು ಅಲ್ಲಿ ತಲುಪಿದ್ದವು?

ಈ ಫಲಕಗಳು ನೆದರ್‌ಲ್ಯಾಂಡ್ಸ್ ತಲುಪಿದ ಕಥೆಯೂ ಆಸಕ್ತಿಕರ. 17-18ನೇ ಶತಮಾನದಲ್ಲಿ ಕೋರ್‌ ಮಂಡಲ್‌ (ಬಂಗಾಳಕೊಲ್ಲಿ ಪ್ರದೇಶ) ಕರಾವಳಿಯಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯ ವಸಾಹತುಶಾಹಿ ಉಪಸ್ಥಿತಿ ಇದ್ದ ಕಾಲದಲ್ಲಿ ಫ್ಲೋರೆಂಟಿಯಸ್ ಕ್ಯಾಂಪರ್ ಎಂಬ ಡಚ್ ಅಧಿಕಾರಿ ಇವುಗಳನ್ನು ಸ್ವಾಧೀನಪಡಿಸಿಕೊಂಡರು ಎಂದು ದಾಖಲೆಗಳು ಹೇಳುತ್ತವೆ.

ಸಾರ್ವಭೌಮ ಭಾರತದ ಕುರುಹು ಈ ತಾಮ್ರ ಫಲಕಗಳು

ಇದನ್ನೂ ಓದಿ: Bullet Train: ಜಸ್ಟ್ 2 ಗಂಟೆಯಲ್ಲಿ ಬೆಂಗಳೂರು ಟು ಹೈದರಾಬಾದ್; ಪ್ರಕೃತಿಯ ಮಡಿಲಿನಲ್ಲಿ ಕಾಡಿನ ನಡುವೆ ಪ್ರಯಾಣ!

1862ರಲ್ಲಿ ಲೈಡನ್ ವಿಶ್ವವಿದ್ಯಾಲಯಕ್ಕೆ ದಾನವಾಗಿ ನೀಡಲ್ಪಟ್ಟ ಇವು ಅಲ್ಲಿನ ಏಷ್ಯನ್ ಸಂಗ್ರಹಾಲಯದಲ್ಲಿ ಸಂರಕ್ಷಿಸಲ್ಪಟ್ಟಿದ್ದವು. UNESCO ಸೇರಿದಂತೆ ಬಹುಪಕ್ಷೀಯ ವೇದಿಕೆಗಳ ಮೂಲಕ ನಡೆಸಿದ ದೀರ್ಘ ರಾಜತಾಂತ್ರಿಕ ಮಾತುಕತೆ ಮತ್ತು ನೆದರ್‌ಲ್ಯಾಂಡ್ಸ್‌ನ ವಸಾಹತುಶಾಹಿ ಸಂಗ್ರಹಗಳ ಮರಳಿ ನೀಡುವ ನೀತಿ ಬದಲಾವಣೆ ಹಾಗೂ ಲೈಡನ್ ವಿಶ್ವವಿದ್ಯಾಲಯ ಮತ್ತು ಡಚ್ ಸರ್ಕಾರದ ಸ್ವಯಂಪ್ರೇರಿತ ಒಪ್ಪಿಗೆಯಿಂದ ಈ ಐತಿಹಾಸಿಕ ಹಸ್ತಾಂತರ ಸಾಧ್ಯವಾಯಿತು. ಈ ಫಲಕಗಳ ವಾಪಸಾತಿ ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆಯ ಜಾಗತಿಕ ಮಾನ್ಯತೆ, ತಮಿಳು ಭಾಷೆ ಮತ್ತು ಚೋಳ ನಾಗರಿಕತೆಯ ಹಿರಿಮೆ ಹಾಗೂ ಭಾರತದ ಪ್ರಾಚೀನ ಸಾಗರ ಶಕ್ತಿಯ ಸಾಕ್ಷಿಯನ್ನು ಜ್ವಾಜಲ್ಯಮಾನಗೊಳಿಸಿದೆ, ಇದು ಇಡೀ ಭಾರತಕ್ಕೆ ಹೆಮ್ಮೆಯ ಕ್ಷಣ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed