ದಿ ಪ್ಯಾರಡೈಸ್ ‘ಎರಡು ಜಡೆ’ ಸೀಕ್ರೆಟ್; ನಾನಿ ಹೇಳಿದ್ದೇನು?
(ಚಿತ್ರ ಕೃಪೆ: ದಿ ಪ್ಯಾರಡೈಸ್ ಸಿನಿಮಾ ಟೀಮ್)
ಆದರೆ, ಈ ಸ್ಟೈಲ್ ಯಾಕೆ ಅನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ನಾನಿ ಉತ್ತರ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಇರೋ “ನನ್ನ ಲುಕ್ ಸುಮ್ನೆ ಅಲ್ಲ. ಇದಕ್ಕೆ ಅರ್ಥ ಇದೆ.
ಇದನ್ನ ಸ್ಟೈಲ್ಗಾಗಿಯೇ ಮಾಡಿಲ್ಲ. ಸಿನಿಮಾ ನೋಡಿದಾಗ ಯಾಕೆ ಅನ್ನೋದು ತಿಳಿಯುತ್ತದೆ” ಅಂತಲೇ ನಾನಿ ಹೇಳಿಕೊಂಡಿದ್ದಾರೆ.
ನಾಯಕ ನಟ ನಾನಿ ಬೆಂಗಳೂರಿಗೆ ಬರ್ತಾನೇ ಇರ್ತಾರೆ. ಆದರೆ, ಹೆಚ್ಚಾಗಿ ಚಿತ್ರದ ಪ್ರಚಾರಕ್ಕೇನೆ ಬರ್ತಾನೆ. ಆದರೆ, ಇವರಿಗೆ ಬೆಂಗಳೂರಿನಲ್ಲಿ ಎರಡು ದಿನ ಇರಬೇಕು ಅಂತ ಆಸೆ ಇದೆ.
ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಇಳಿದ ಇವರಿಗೆ ಆತ್ಮೀಯವಾದ ಸ್ವಾಗತ ಸಿಗುತ್ತದೆ. ಇದರಿಂದ ನಾನಿಗೆ ತುಂಬಾನೆ ಖುಷಿ ಆಗುತ್ತದೆ. ನಾನು ಬೆಂಗಳೂರಿನಲ್ಲಿ ಇದ್ದೇನೋ ಇಲ್ಲ ಹೈದ್ರಾಬಾದ್ ಅಲ್ಲಿದ್ದೇನೋ ಅನಿಸುತ್ತದೆ.
ಎರಡು ಜಡೆ….
(ಚಿತ್ರ ಕೃಪೆ: ದಿ ಪ್ಯಾರಡೈಸ್ ಸಿನಿಮಾ ಟೀಮ್)
ಆ ರೀತಿನೇ ಎಲ್ಲರೂ ಪ್ರೀತಿ ತೋರಿಸುತ್ತಾರೆ. ಇದನ್ನ ನೋಡಿದಾಗ ತುಂಬಾನೆ ಖುಷಿ ಆಗುತ್ತದೆ. ನಮ್ಮ ಚಿತ್ರದಲ್ಲಿ ಮೋಹನ್ ಬಾಬು, ಸೊನಾಲಿ ಕುಲಕರ್ಣಿ ಅಭಿನಯಿಸಿದ್ದಾರೆ.
ರಾಘವ್ ಜುಯಲ್, ಹಾಗೂ ಕಯಾದು ನಟಿಸಿದ್ದಾರೆ. ಇಂತಹ ಅದ್ಭುತ ತಾರಾಗಣದೊಂದಿಗೆ ತೆರೆ ಹಂಚಿಕೊಂಡಿದ್ದೇನೆ. ಇದು ನನ್ನ ಸೌಭಾಗ್ಯ ಅಂತಲೂ ನಾನಿ ಹೇಳಿಕೊಂಡಿದ್ದಾರೆ.
ದಿ ಪ್ಯಾರಡೈಸ್ ಚಿತ್ರದಲ್ಲಿ ಅಮ್ಮ ಮತ್ತು ಮಗನ ಕತೆ ಇದೆ. ಇದನ್ನ ಒಂದು ಅದ್ಭುತ ಆ್ಯಕ್ಷನ್ ಮತ್ತು ದೃಶ್ಯ ವೈಭವದ ಮೂಲಕ ಕಟ್ಟಿಕೊಡಲಾಗಿದೆ.
ನಮ್ಮ ಈ ಚಿತ್ರ ಸೆಪ್ಟೆಂಬರ್-24 ರಂದು ರಿಲೀಸ್ ಆಗುತ್ತಿದೆ. ಇದು ಪ್ರೇಕ್ಷಕರಿಗೆ ಅದ್ಭುತವಾದ ಅನುಭವ ನೀಡಲಿದೆ ಅಂತಲೂ ನಾನಿ ಹೇಳಿಕೊಂಡಿದ್ದಾರೆ. ಈ ಚಿತ್ರವನ್ನ ಶ್ರೀಕಾಂತ್ ಡೈರೆಕ್ಷನ್ ಮಾಡಿದ್ದಾರೆ.
ದೊಡ್ಡ ಬಜೆಟ್ನ ಈ ಚಿತ್ರಕ್ಕಾಗಿ ನಾನಿ ಬಹಳ ದಿನ ಚಿತ್ರೀಕರಣ ಮಾಡಿದ್ದಾರೆ. ಇಲ್ಲಿವರೆಗಿನ ಚಿತ್ರಗಳಲ್ಲಿ ಇದುವೇ ಅತಿ ಹೆಚ್ಚು ದಿನಗಳ ಕಾಲ ಶೂಟಿಂಗ್ ಮಾಡಿದ ಚಿತ್ರವಾಗಿದೆ ಅಂತಲೂ ನಾನಿ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.













