Last Updated:
ಇನ್ನು ಮ್ಯಾರಥಾನ್‌ಗೆ ದಿನಗಣನೆ ಆಂಭವಾಗುತ್ತಿದ್ದಂತೆಯೇ ರಿಜಿಸ್ಟರ್ ವಿಂಡೋ ಕೂಡಾ ಮುಚ್ಚುವ ಹಂತದಲ್ಲಿದೆ. ಹೀಗಾಗಿ ತಡಮಾಡದೇ ಈಗಲೇ ನೋಂದಣಿ ಮಾಡಿಕೊಳ್ಳುವಂತೆ ಆಯೋಜಕರು ಕರೆ ನೀಡಿದ್ದಾರೆ. ಇನ್ನು ಈ ಮ್ಯಾರಥಾನ್‌ನಲ್ಲಿ 8000ಕ್ಕೂ ಅಧಿಕ ಮಂದಿ ಬೆಂಗಳೂರಿಗರು ಭಾಗವಹಿಸುವ ನಿರೀಕ್ಷೆ ಇದೆ.
ಬೆಂಗಳೂರು(ಸೆ.25): ನೆಟ್‌ವರ್ಕ್ 18 ಆಯೋಜಿಸಿರುವ, ಟಿಇ ಸ್ಪೋರ್ಟ್ಸ್ ಮೂಲಕ ನಡೆಯುವ ನಮ್ಮ ರನ್ ಬೆಂಗಳೂರು 2026ಕ್ಕೆ ಕೆಲವೇ ದಿನಗಳು ಬಾಕಿ ಇವೆ. ಫಿಟ್ ಇಂಡಿಯಾ ಮತ್ತು ಮಾದಕವಸ್ತು-ಮುಕ್ತ ಭಾರತ ಧ್ಯೇಯದೊಂದಿಗೆ ನಡೆಯುವ ಈ ಫಿಟ್‌ನೆಸ್ ಹಬ್ಬ ಅಕ್ಟೋಬರ್ 11ರಂದು ಬೆಳಿಗ್ಗೆ 5:30ಕ್ಕೆ ನೈಸ್ ರೋಡ್ ಟೋಲ್ ಪ್ಲಾಜಾ, ಪಿಇಎಸ್ ಕಾಲೇಜು ಹಿಂದೆ, ಹೊಸಕೆರೆಹಳ್ಳಿಯಲ್ಲಿ ಆರಂಭವಾಗಲಿದೆ. ಇನ್ನು ಮ್ಯಾರಥಾನ್‌ಗೆ ದಿನಗಣನೆ ಆಂಭವಾಗುತ್ತಿದ್ದಂತೆಯೇ ರಿಜಿಸ್ಟರ್ ವಿಂಡೋ ಕೂಡಾ ಮುಚ್ಚುವ ಹಂತದಲ್ಲಿದೆ. ಹೀಗಾಗಿ ತಡಮಾಡದೇ ಈಗಲೇ ನೋಂದಣಿ ಮಾಡಿಕೊಳ್ಳುವಂತೆ ಆಯೋಜಕರು ಕರೆ ನೀಡಿದ್ದಾರೆ. ಇನ್ನು ಈ ಮ್ಯಾರಥಾನ್‌ನಲ್ಲಿ 8000ಕ್ಕೂ ಅಧಿಕ ಮಂದಿ ಬೆಂಗಳೂರಿಗರು ಭಾಗವಹಿಸುವ ನಿರೀಕ್ಷೆ ಇದೆ.
ಈ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಸೆಪ್ಟೆಂಬರ್ 20ರಂದು ಬನ್ನೇರುಘಟ್ಟದಲ್ಲಿ ನಡೆದ ತರಬೇತಿ ಓಟ ಯಶಸ್ವಿಯಾಗಿ ಮುಗಿದಿದೆ. ಸುಮಾರು 40 ಪೇಸರ್‌ಗಳು ಮತ್ತು ರನ್ನರ್‌ಗಳು ಭಾಗವಹಿಸಿ ರೇಸ್ ದಿನಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಸೆಪ್ಟೆಂಬರ್ 19ರಂದು ಹಾರ್ಡ್ ರಾಕ್ ಕೆಫೆಯಲ್ಲಿ ಪೇಸರ್ಸ್ ಮೀಟ್ ಮತ್ತು ಟಿ-ಶರ್ಟ್ ಅನಾವರಣ ನಡೆಯಿತು. 42 ಪೇಸರ್‌ಗಳು ರನ್ನರ್‌ಗಳನ್ನು ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸಲು ಕೈಜೋಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಕೃತ ರೇಸ್ ಟಿ-ಶರ್ಟ್‌ನ ಫಸ್ಟ್ ಲುಕ್ ಕೂಡಾ ಬಿಡುಗಡೆ ಮಾಡಲಾಗಿದೆ.
ಮಕ್ಕಳ 1 ಕಿ.ಮೀ. ಮತ್ತು 2 ಕಿ.ಮೀ. ಫನ್ ರನ್, ಹಿರಿಯರ 3 ಕಿ.ಮೀ. ವಾಕಥಾನ್, ಎಲ್ಲರಿಗೂ 5 ಕಿ.ಮೀ. ಮತ್ತು 10 ಕಿ.ಮೀ. ಫನ್ ರನ್, ಸ್ಪರ್ಧಾತ್ಮಕ 5 ಕಿ.ಮೀ. ಹಾಗೂ 10 ಕಿ.ಮೀ. ಟೈಮ್ಡ್ ರನ್ ಮತ್ತು 21 ಕಿ.ಮೀ. ಹಾಫ್ ಮ್ಯಾರಥಾನ್ ವಿಭಾಗಗಳಿವೆ. ಸ್ಪರ್ಧಾತ್ಮಕ ವಿಭಾಗಗಳಿಗೆ ಸುಮಾರು ₹3–4 ಲಕ್ಷ ಬಹುಮಾನ ಇದೆ. ನೋಂದಾಯಿತರಿಗೆ ಬ್ರಾಂಡೆಡ್ ಟಿ-ಶರ್ಟ್, ಫಿನಿಶರ್ ಮೆಡಲ್, ಬಿಬ್, ಇ-ಸರ್ಟಿಫಿಕೇಟ್, ಹೈಡ್ರೇಷನ್, ಜುಂಬಾ, ಫಿಟ್‌ನೆಸ್ ಫೆಸ್ಟಿವಲ್, ಲೈವ್ ಮ್ಯೂಸಿಕ್ ಮತ್ತು ವೃತ್ತಿಪರ ಫೋಟೋಗ್ರಫಿ ಸಿಗಲಿದೆ.
Calcimax 500 ಮೂಲಕ ಮೂಳೆ-ಕೀಲು ಆರೋಗ್ಯ ಸಲಹೆ, Fast&UP ಎನರ್ಜಿ ಸ್ಟೇಷನ್, US Cranberries ನ್ಯೂಟ್ರಿಷನ್ ಝೋನ್, Campa Sure ಹೈಡ್ರೇಷನ್, Dynapar QPS Plus ರಿಕವರಿ ಝೋನ್, Craveman ಐಸ್‌ಕ್ರೀಮ್, Sparsh Hospitals ವೈದ್ಯಕೀಯ ಸಹಾಯ, ಸ್ವಯಂಸೇವಕರು ಮತ್ತು ಶೌಚಾಲಯ ಸೌಲಭ್ಯ.
ಫೈನಲ್ ಕೌಂಟ್‌ಡೌನ್ ಶುರುವಾಗಿದ್ದು, ನೀವಿನ್ನೂ ನೋಂದಾವಣೆ ಮಾಡದಿದ್ದಲ್ಲಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ರಿಜಿಸ್ಟರ್ ಆಗಿ. ನಮ್ಮ ರನ್ ಬೆಂಗಳೂರಿನ ಭಾಗವಾಗಿ.














