Last Updated:
ಐಐಎಸ್ಸಿ ಅಧ್ಯಯನ ಪ್ರಕಾರ ಬೆಂಗಳೂರು ಹಳದಿ ಮಾರ್ಗ ಮೆಟ್ರೋ ಆರೋಗ್ಯ, ಒತ್ತಡ ಕಡಿತಕ್ಕೆ ಸಹಾಯಕ, ಆದರೆ 10-20 ಕಿಮೀಗೆ 60-70 ರೂ ದರ, ಕಡಿಮೆ ಫೀಡರ್ ಬಸ್ ಸಂಪರ್ಕ ಮಧ್ಯಮ ವರ್ಗಕ್ಕೆ ಸವಾಲು
ಬೆಂಗಳೂರು (Bengaluru) ಅಂದ್ರೆ ಟ್ರಾಫಿಕ್ ಜಾಮ್ (Traffic Jam), ಮಾಲಿನ್ಯ ಮತ್ತು ವಿಪರೀತ ಕೆಲಸದ ಒತ್ತಡ, ದಿನವಿಡೀ ಕಿರಿಕಿರಿ ಅನುಭವಿಸಿ ಮನೆ ತಲುಪುವಷ್ಟರಲ್ಲಿ ಸುಸ್ತಾಗುವ ಐಟಿ-ಬಿಟಿ ಉದ್ಯೋಗಿಗಳ ಪಾಲಿಗೆ ಇದೀಗ ಒಂದು ಸಿಹಿ ಸುದ್ದಿ ಸಿಕ್ಕಿದೆ. ಹೌದು, ಬೆಂಗಳೂರಿನ ಹಳದಿ ಮಾರ್ಗ (Yellow Line) ಬರೀ ಮೆಟ್ರೋ ಮಾರ್ಗವಲ್ಲ, ಇದು ನಿಮ್ಮ ಆರೋಗ್ಯ (Health) ಮತ್ತು ಜೀವನದ ಗುಣಮಟ್ಟವನ್ನೇ ಸುಧಾರಿಸುವ ಸಂಜೀವಿನಿ ಆಗಲಿದೆ ಎಂದು ಐಐಎಸ್ಸಿ (IISc) ಸಂಸ್ಥೆಯ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಮಗ್ರ ವೈಜ್ಞಾನಿಕ ಅಧ್ಯಯನವು ಬಹಿರಂಗಪಡಿಸಿದೆ.
ಐಐಎಸ್ಸಿ ನಡೆಸಿದ ಈ ಸಮೀಕ್ಷೆಯು ಒಂದು ಅಚ್ಚರಿಯ ವಿಷಯವನ್ನು ಹೊರಹಾಕಿದೆ. ಮಿತಿಮೀರಿದ ಟ್ರಾಫಿಕ್ನಿಂದಾಗಿ ಶೇ.58ರಷ್ಟು ಮಂದಿ ಯಾವುದೇ ದೈಹಿಕ ಚಟುವಟಿಕೆ ಇಲ್ಲದೆ ಬಳಲುತ್ತಿದ್ದಾರೆ. ಇದು ಮಧುಮೇಹ, ಅಧಿಕ ರಕ್ತದೊತ್ತಡದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ವರದಿ ಎಚ್ಚರಿಸಿದೆ ಎಂದು ಬೆಂಗಳೂರು ವೈರ್ ಡಾಟ್ ಕಾಮ್ ವೆಬ್ಸೈಟ್ ವರದಿ ಮಾಡಿದೆ.
ಆರ್.ವಿ ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸುವ ಹಳದಿ ಮೆಟ್ರೋದಿಂದ ಅನೇಕ ಲಾಭಗಳಿವೆ.
-ಮೆಟ್ರೋ ಪ್ರಯಾಣವು ಪ್ರಯಾಣಿಕರಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
-ವಾಯು ಮಾಲಿನ್ಯದಿಂದ ಸಂಪೂರ್ಣವಾಗಿ ರಕ್ಷಣೆ ಪಡೆಯಲು ಮೆಟ್ರೋ ವರದಾನವಾಗಿದೆ.
-ಪ್ರತಿದಿನ ಮೆಟ್ರೋ ಬಳಸುವವರಿಗೆ ವಾರಕ್ಕೆ 50 ರಿಂದ 75 ನಿಮಿಷಗಳಷ್ಟು ಹೆಚ್ಚುವರಿ ದೈಹಿಕ ಚಟುವಟಿಕೆ ಸಿಗುತ್ತದೆ.
ಎಲ್ಲಾ ಚೆನ್ನಾಗಿದೆ ಅಂದುಕೊಳ್ಳುವಾಗಲೇ ಒಂದು ಆಘಾತಕಾರಿ ವಿಷಯವೂ ಹೊರಬಿದ್ದಿದೆ. 10-20 ಕಿ.ಮೀ ಪ್ರಯಾಣಕ್ಕೆ ಮೆಟ್ರೋ ದರ ?60-?70 ಇದ್ದು, ಇದು ಮಧ್ಯಮ ವರ್ಗದ ಜನರ ಪಾಲಿಗೆ ದುಬಾರಿಯಾಗಿದೆ. ಜೊತೆಗೆ ಕೊನೆಯ ಹಂತದ ಸಂಪರ್ಕ ಮತ್ತು ಫೀಡರ್ ಬಸ್ ಸೇವೆಗಳ ಕೊರತೆಯು ಜನರನ್ನ ಇಂದಿಗೂ ಮೆಟ್ರೋದಿಂದ ದೂರ ಉಳಿಯುವಂತೆ ಮಾಡುತ್ತಿದೆ.
ಈ ವರದಿಯು ಐಐಎಸ್ಸಿ ಸಂಸ್ಥೆಯ ಸುಸ್ಥಿರ ಸಾರಿಗೆ ಪ್ರಯೋಗಾಲಯವು ನಡೆಸಿದ ಸಮಗ್ರ ಅಧ್ಯಯನವನ್ನು ಆಧರಿಸಿದೆ.ಈ ಅಧ್ಯಯನವನ್ನು ಐಐಎಸ್ಸಿ ಸಾರಿಗೆ ವ್ಯವಸ್ಥೆಗಳ ಎಂಜಿನಿಯರಿಂಗ್ ವಿಭಾಗದ ಪ್ರೊ. ಆಶಿಶ್ ವರ್ಮಾ ಅವರ ನೇತೃತ್ವದಲ್ಲಿ ನಡೆಸಲಾಗಿದೆ.
Bangalore [Bangalore],Bangalore,Karnataka
Jun 04, 2026 12:03 PM IST













