Mutton Stall Scam: 1,200 ಕೆಜಿ ಹಾಳಾದ ಮಟನ್​, ಇಂಜೆಕ್ಷನ್​! ಅಂಗಡಿಗೆ ಹೋದ ಅಧಿಕಾರಿಗಳಿಗೆ ಕಾದಿತ್ತು ಬಿಗ್​ ಶಾಕ್​ / Mutton Stall Scam: 1,200 Kg Spoiled Meat Seized | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅಂಗಡಿಗೆ ಹೋದ ಅಧಿಕಾರಿಗಳಿಗೆ ಕಾದಿತ್ತು ಬಿಗ್​ ಶಾಕ್​!


Last Updated:

ಕಳೆದ 30 ವರ್ಷಗಳಿಂದ ಬಹಳ ಪ್ರಸಿದ್ಧವಾದ ಮಾಂಸದ ಅಂಗಡಿಯಲ್ಲಿ ಅತೀ ದೊಡ್ಡ ಹಗರಣ ಕಂಡುಬಂದಿದೆ. ಹೋಟೆಲ್​, ಮದುವೆ, ಸಮಾರಂಭಗಳಿಗೆ ಮಾಂಸ ಸಪ್ಲೈ ಮಾಡುತ್ತಿದ್ದ ಅಂಗಡಿಯಲ್ಲಿ ಕೆಜಿ ಗಟ್ಟಲೇ ಹಾಳಾದ ಮಾಂಸ ಪತ್ತೆಯಾಗಿದ್ದು, ರೇಡ್​ ಮಾಡಿದ ಅಧಿಕಾರಿಗಳೇ ಶಾಕ್​ ಆಗಿದ್ದಾರೆ.

ಅಂಗಡಿಗೆ ಹೋದ ಅಧಿಕಾರಿಗಳಿಗೆ ಕಾದಿತ್ತು ಬಿಗ್​ ಶಾಕ್​!
ಅಂಗಡಿಗೆ ಹೋದ ಅಧಿಕಾರಿಗಳಿಗೆ ಕಾದಿತ್ತು ಬಿಗ್​ ಶಾಕ್​!

ಸುಮಾರು 30 ವರ್ಷಗಳಿಂದ ನಡೆಸುತ್ತಿದ್ದ ಮಾಂಸದ ಅಂಗಡಿಯಲ್ಲಿ (Non veg Shop) ಅತೀ ದೊಡ್ಡ ಸ್ಕ್ಯಾಮ್ (Scam)​ ಕಂಡು ಬಂದಿದೆ. ಮಧುರೈ ನಗರದ ಅರಪಾಲಯಂ ಕ್ರಾಸ್ ರಸ್ತೆಯಲ್ಲಿರುವ ‘ಮೊಯ್ಸನ್ ಮಟನ್ ಸ್ಟಾಲ್’ ಎಂಬ ಮಾಂಸದ ಅಂಗಡಿ ಸುಮಾರು 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಅಂಗಡಿ. ಮಧುರೈ ಮತ್ತು ಸುತ್ತಮುತ್ತಲಿನ ಅನೇಕ ಹೋಟೆಲ್‌ಗಳಿಗೆ ಇವರು ಹೋಲ್​ ಸೆಲ್​ ಮತ್ತು ಚಿಲ್ಲರೆ ದರದಲ್ಲಿ ಕುರಿ ಮತ್ತು ಕೋಳಿ ಮಾಂಸವನ್ನು ಪೂರೈಸುತ್ತಿದ್ದರು. ಆದರೆ ಇದೀಗ ಈ ಅಂಗಡಿಯಲ್ಲಿ ನಡೆದ ಘಟನೆ ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಮದುವೆ, ಸಮಾರಂಭ ಮುಂತಾದ ದೊಡ್ಡ ಕಾರ್ಯಕ್ರಮಗಳಿಗೆ ಬೇಕಾಗುವ ಮೆಗಾ ಆರ್ಡರ್‌ಗಳಿಗೂ ಈ ಅಂಗಡಿಯಿಂದಲೇ ಮಾಂಸವನ್ನು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಇಂತಹ ಅಂಗಡಿಯ ವಿರುದ್ಧ ಇತ್ತೀಚೆಗೆ ಗಂಭೀರ ದೂರು ಒಂದನ್ನು ಆಹಾರ ಸುರಕ್ಷತಾ ಇಲಾಖೆ ಸ್ವೀಕರಿಸಿದೆ.

ಹಾಳಾದ ಮಾಂಸ ಮಾರಾಟ

ದೂರಿನ ಪ್ರಕಾರ, ಅಂಗಡಿಯಲ್ಲಿ ಹಾಳಾದ ಮಾಂಸವನ್ನು ಮಾರಾಟ ಮಾಡಲಾಗುತ್ತಿದ್ದು, ಲಾಭ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಂಸಕ್ಕೆ ನೀರನ್ನು ಇಂಜೆಕ್ಟ್ ಮಾಡಿ ತೂಕ ಹೆಚ್ಚಿಸಲಾಗುತ್ತಿದೆ ಎಂದು ತಿಳಿದುಬಂದಿತು. ಈ ಮಾಹಿತಿ ಸಿಗುತ್ತಿದ್ದಂತೆಯೇ ಮಧುರೈ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯ ನಿಯೋಜಿತ ಅಧಿಕಾರಿ ಶಿವರಾಮ ಪಾಂಡಿಯನ್ ಅವರ ನೇತೃತ್ವದಲ್ಲಿ ವಿಶೇಷ ದಾಳಿ ನಡೆಸಲಾಯಿತು. ಅಧಿಕಾರಿಗಳು ಅಂಗಡಿಗೆ ದಾಳಿ ನಡೆಸಿದಾಗ, ಅಲ್ಲಿ ಕೆಲಸ ಮಾಡುತ್ತಿದ್ದವರು ಕುರಿ ಮಾಂಸದೊಳಗೆ ನೀರನ್ನು ಇಂಜೆಕ್ಟ್ ಮಾಡುತ್ತಿರುವ ವೇಳೆ ನೇರವಾಗಿ ಕೈಗೆ ಸಿಕ್ಕಿದ್ದರು.

ಒಳ್ಳೆ ಮಾಂಸದಂತೆ ತೋರಿಸಿ ಗ್ರಾಹಕರನ್ನು ಮೋಸಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿತ್ತು ಎಂದು ತಿಳಿದುಬಂದಿತು. ಜೊತೆಗೆ, ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಹಳೆಯ, ಹಾಳಾಗುತ್ತಿರುವ ಕುರಿ ಮಾಂಸ ಮತ್ತು ಕೋಳಿ ಮಾಂಸವೂ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಹಾಳಾದ ಮಾಂಸದೊಂದಿಗೆ ಹೊಸ ಮಾಂಸ ಮಿಕ್ಸ್​ ಮಾಡಿ ಮಾರಾಟ

ಹಳೆಯ ಹಾಳಾದ ಮಾಂಸದ ಸುಮಾರು 1/4 ಭಾಗವನ್ನು ಹೊಸದಾಗಿ ಕತ್ತರಿಸಿದ ಮಾಂಸದೊಂದಿಗೆ ಬೆರೆಸಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಶಂಕೆಯೂ ಅಧಿಕಾರಿಗಳಿಗೆ ಉಂಟಾಯಿತು. ಇದರಿಂದ ಗ್ರಾಹಕರ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ದಾಳಿಯ ಸಮಯದಲ್ಲಿ ಒಟ್ಟಾರೆ 1,200 ಕೆಜಿ ಹಾಳಾದ ಕುರಿ ಮತ್ತು ಕೋಳಿ ಮಾಂಸವನ್ನು ವಶಪಡಿಸಿಕೊಂಡರು. ಇದರ ಮೌಲ್ಯವನ್ನು ಸುಮಾರು 12 ಲಕ್ಷ ರೂಪಾಯಿಗಳಷ್ಟೆಂದು ಅಂದಾಜಿಸಲಾಗಿದೆ.

ಅಂಗಡಿಗೆ ಬೀಗ, 13,000 ದಂಡ

ವಶಪಡಿಸಿಕೊಂಡ ಹಾಳಾದ ಮಾಂಸದ ಕೆಲವು ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅಂಗಡಿಯನ್ನು ಮುಚ್ಚುವಂತೆ ಆದೇಶಿಸಲಾಯಿತು. ಜೊತೆಗೆ, ಅಂಗಡಿ ಮಾಲೀಕರಿಗೆ 13,000 ರೂ. ದಂಡ ವಿಧಿಸಿ ಕಾನೂನಾತ್ಮಕ ಎಚ್ಚರಿಕೆ ನೀಡಲಾಗಿದೆ. ಜನರ ಜೀವವನ್ನು ಲೆಕ್ಕಿಸದೆ ಹಾಳಾದ ಮಾಂಸವನ್ನು ಮಾರಾಟ ಮಾಡುತ್ತಿರುವ ಈ ಘಟನೆ ಮಧುರೈನಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ಈ ಘಟನೆ ಬೆಳಕಿಗೆ ಬಂದ ನಂತರ, ಮಧುರೈ ಹಾಗೂ ಸುತ್ತಮುತ್ತಲಿನ ಇನ್ನೂ ಎಷ್ಟು ಮಾಂಸದ ಅಂಗಡಿಗಳು ಇಂತಹ ಅಕ್ರಮ ಕಾರ್ಯಗಳಲ್ಲಿ ತೊಡಗಿಕೊಂಡಿರಬಹುದು ಎಂಬ ಶಂಕೆ ಹೆಚ್ಚಾಗಿದೆ. ಇದರಿಂದ ಆಹಾರ ಸುರಕ್ಷತಾ ಇಲಾಖೆ ತನ್ನ ಶೋಧ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಿದೆ. ಇತರ ಮಾಂಸದ ಅಂಗಡಿಗಳಲ್ಲಿಯೂ ತಪಾಸಣೆ ನಡೆಸಿ, ಜನರಿಗೆ ತಲುಪುವ ಮಾಂಸದ ಗುಣಮಟ್ಟವನ್ನು ಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಈ ಘಟನೆ ಗ್ರಾಹಕರಿಗೂ ಎಚ್ಚರಿಕೆಯಾಗಿದೆ. ಮಾಂಸ ಖರೀದಿಸುವಾಗ ಅದರ ವಾಸನೆ, ಬಣ್ಣ, ಸ್ವಚ್ಛತೆ, ಅಂಗಡಿಯ ಪರಿಸರ ಇತ್ಯಾದಿಗಳನ್ನು ಗಮನಿಸುವುದು ಅಗತ್ಯ. ದರ ಕಡಿಮೆ ಇದೆ ಎಂದು ಮಾತ್ರ ನೋಡಿ ಖರೀದಿಸಿದರೆ, ಆರೋಗ್ಯಕ್ಕೆ ದೊಡ್ಡ ಹಾನಿ ಉಂಟಾಗಬಹುದು. ಸರ್ಕಾರದ ಇಲಾಖೆಗಳು ಕ್ರಮ ಕೈಗೊಳ್ಳುತ್ತಿದ್ದರೂ, ಜನರು ಸಹ ಜಾಗರೂಕರಾಗಿ, ಅನುಮಾನಾಸ್ಪದ ಅಂಗಡಿಗಳ ಬಗ್ಗೆ ದೂರನ್ನು ನೀಡಿದರೆ ಇಂತಹ ಅಕ್ರಮಗಳನ್ನು ಕಡಿಮೆ ಮಾಡಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed