ಈ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಇವರಿಬ್ಬರ ಬದಲಿಗೆ ಅಲ್ಲಾ ಘಜನ್ಫರ್ ಹಾಗೂ ಶಾರ್ದೂಲ್ ಠಾಕೂರ್ ತಂಡಕ್ಕೆ ಸೇರಿಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ ಹಾಗೂ ನಾಂಡ್ರೆ ಬರ್ಗರ್ ತಂಡ ಸೇರಿಕೊಂಡಿದ್ದಾರೆ. ಲುವಾನ್ ಡ್ರೆ ಪ್ರಿಟೋರಿಯಸ್, ಸಂದೀಪ್ ಶರ್ಮಾ ಹಾಗೂ ಸುಶಾಂತ್ ಮಿಶ್ರಾ ಹೊರಗುಳಿದಿದ್ದಾರೆ.
ಎರಡೂ ತಂಡಗಳು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್ 16 ಪಂದ್ಯಗಳಲ್ಲಿ ಗೆದ್ದು ಅಲ್ಪ ಮುನ್ನಡೆ ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್ ತಂಡ 15 ರಲ್ಲಿ ಗೆಲುವು ಸಾಧಿಸಿದೆ.
ವಾಂಖೆಡೆಯಲ್ಲಿ ನಡೆದಿರುವ 9 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ 5ರಲ್ಲಿ ಗೆದ್ದರೆ, ರಾಜಸ್ಥಾನ್ ರಾಯಲ್ಸ್ 4ರಲ್ಲಿ ಗೆಲುವು ಸಾಧಿಸಿದೆ
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೀ), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ಶುಭಂ ದುಬೆ, ದಾಸುನ್ ಶನಕ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಯಶ್ ಪುಂಜಾ, ಬ್ರಿಜೇಶ್ ಶರ್ಮಾ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ರಿಯಾನ್ ರಿಕೆಲ್ಟನ್ (ವಿಕೀ), ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ವಿಲ್ ಜಾಕ್ಸ್, ಕಾರ್ಬಿನ್ ಬಾಷ್, ದೀಪಕ್ ಚಾಹರ್, ರಘು ಶರ್ಮಾ, ಅಲ್ಲಾ ಮೊಹಮ್ಮದ್ ಘಜನ್ಫರ್, ಶಾರ್ದೂಲ್ ಠಾಕೂರ್.
ರಾಜಸ್ಥಾನ್ ರಾಯಲ್ಸ್: ರವೀಂದ್ರ ಜಡೇಜಾ, ಸುಶಾಂತ್ ಮಿಶ್ರಾ, ಅಮನ್ ರಾವ್, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಮಯಾಂಕ್ ರಾವತ್, ರಾಬಿನ್ ಮಿಂಜ್, ಕ್ರಿಶ್ ಭಗತ್, ಟ್ರೆಂಟ್ ಬೌಲ್ಟ್.












