Marriage: ಹಾರ್ದಿಕ್ ಪಾಂಡ್ಯ ಗುಟ್ಟಾಗಿ ಎರಡನೇ ಮದುವೆಯಾದ್ರಾ? ಸೀಕ್ರೆಟ್ ರಿವೀಲ್ ಮಾಡಿದ ಈ ಒಂದು ಫೋಟೋ | ಕ್ರೀಡಾ ಸುದ್ದಿ | ACTPnews

ಹಾರ್ದಿಕ್ ಪಾಂಡ್ಯ


Last Updated:

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಎರಡನೇ ಮದುವೆ ಬಗ್ಗ ಸಾಕಷ್ಟು ಚರ್ಚೆ ಆಗುತ್ತಿದೆ. ಇದರ ನಡುವೆ ಹಾರ್ದಿಕ್ ಪಾಂಡ್ಯ ಅವರ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾ(Team India)ದ ಸ್ಟಾರ್ ಆಲ್‌ರೌಂಡರ್ (All-rounder) ಹಾರ್ದಿಕ್ ಪಾಂಡ್ಯ (Hardik Pandya) ಅವರ ಹೊಸ ಫೋಟೋ (Photo) ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಹೊಸ ಫೋಟೋದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಮಹಿಕಾ ಶರ್ಮಾ (Mahika Sharma) ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಫೋಟೋ ವೈರಲ್ ಆಗುತ್ತಿದ್ದು, ಇಬ್ಬರು ಗುಟ್ಟಾಗಿ ಮದುವೆ(Marriage)ಯಾಗಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ, ಮಹಿಕಾ ಶರ್ಮಾ ತಮ್ಮ ಬೈತಲೆ ಮತ್ತು ಹಣೆಯ ಮೇಲೆ ಕುಂಕುಮ ಧರಿಸಿ ಕಾಣಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಹಣೆಯ ಮೇಲೆ ತಿಲಕ ಇಟ್ಟಿದ್ದಾರೆ. ಫೋಟೋದಲ್ಲಿ, ಹಾರ್ದಿಕ್ ತನ್ನ ಗೆಳತಿ ಮಹಿಕಾಳ ತಾಯಿಯೊಂದಿಗೆ ಪೋಸ್ ನೀಡುತ್ತಿರುವುದು ಕಂಡು ಬಂದಿದೆ. ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಹಾರ್ದಿಕ್ ಅಥವಾ ಮಹಿಕಾ ಶರ್ಮಾ ತಮ್ಮ ಮದುವೆಯ ಸುದ್ದಿಯನ್ನು ದೃಢಪಡಿಸಿಲ್ಲ.

ಪಾಂಡ್ಯ ಗುಟ್ಟಾಗಿ ಮದುವೆಯಾದ್ರಾ?

ಹಿಂದೂ ಸಂಪ್ರದಾಯದಲ್ಲಿ ಅರಿಶಿನ-ಕುಂಕುಮಕ್ಕೆ ಅತ್ಯಂತ ಪ್ರಮುಖ ಸ್ಥಾನವಿದೆ. ಕುಂಕುಮವು ವಿವಾಹಿತ ಮಹಿಳೆಯರಿಗೆ ಸೌಭಾಗ್ಯ ಮತ್ತು ಸುಮಂಗಲಿತ್ವದ ಸಂಕೇತವಾಗಿದೆ. ವಿವಾಹಿತ ಮಹಿಳೆಯರು ತಮ್ಮ ಬೈತಲೆ ಮೇಲೆ ಕುಂಕುಮವನ್ನು ಇಟ್ಟುಕೊಳ್ಳುವುದು ಆಕೆಯ ಜೀವನದಲ್ಲಿ ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದು ದಂಪತಿಗಳನ್ನು ದುಷ್ಟಶಕ್ತಿಗಳಿಂದ ರಕ್ಷಿಸುವ ಸಂಕೇತವೂ ಆಗಿದೆ. ಹೀಗಾಗಿ ಮಹಿಕಾ ಶರ್ಮಾ ಅವರ ಬೈತಲೆ ಮೇಲಿರುವ ಕುಂಕುಮ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೊದಲ ಪತ್ನಿಗೆ ಡೈವೋರ್ಸ್

ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ವೈಯಕ್ತಿಕ ಜೀವನದ ಸುದ್ದಿಗಳಲ್ಲಿದ್ದಾರೆ. 2024 ರಲ್ಲಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಮತ್ತು ನಂತರ ಗೆಳತಿ ಜಾಸ್ಮಿನ್ ವಾಲಿಯಾ ಅವರೊಂದಿಗಿನ ಡೇಟಿಂಗ್ ನಂತರ, ಮಹಿಕಾ ಶರ್ಮಾ ಜೊತೆಗಿನ ಪ್ರೇಮ ಸಂಬಂಧ ಹಾರ್ದಿಕ್ ಪಾಂಡ್ಯ ಅವರನ್ನು ಸುದ್ದಿಯಲ್ಲಿರುವಂತೆ ಮಾಡಿವೆ. ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ, ಈ ಸ್ಟಾರ್ ಜೋಡಿಯ ಫೋಟೋ ಸೋಶಿಯಕ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ
ಮಹಿಕಾ ಶರ್ಮಾ ಯಾರು?

ಮಹಿಕಾ ಶರ್ಮಾ 24 ವರ್ಷದ ಮಾಡೆಲ್ ಮತ್ತು ನಟಿ. ಅವರು ಫ್ರೀಲ್ಯಾನ್ಸರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಫೇಮಸ್ ರ‍್ಯಾಪರ್ ರಾಗಾ ಅವರ ಮ್ಯಾಜಿಕ್ ವೀಡಿಯೊದಲ್ಲಿ ಕೆಲಸ ಮಾಡಿದರು.

ಬಳಿಕ ಅವರು ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ “ಇಂಟು ದಿ ಡಸ್ಕ್” ಮತ್ತು ಓಮಂಗ್ ಕುಮಾರ್ ಅವರ “ಪಿಎಂ ನರೇಂದ್ರ ಮೋದಿ” ಸೇರಿದಂತೆ ಹಲವಾರು ಕಿರುಚಿತ್ರಗಳಲ್ಲಿ ಕಾಣಿಸಿಕೊಂಡರು. ಮಹಿಕಾ ಶರ್ಮಾ ಅರ್ಥಶಾಸ್ತ್ರ ಮತ್ತು ಹಣಕಾಸು ಅಧ್ಯಯನ ಮಾಡಿದ್ದಾರೆ. ಅವರು ತಾನಿಷ್ಕ್, ವಿವೋ ಮತ್ತು ಯುನಿಕ್ಲೊದಂತಹ ಬ್ರ್ಯಾಂಡ್‌ಗಳ ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed