ಒಟಿಟಿಗೆ ಬಂದೇ ಬಿಡ್ತು ಮ್ಯಾಂಗೋ ಪಚ್ಚ
(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್)
ಜೀಯೋ ಹಾಟ್ಸ್ಟಾರ್ ಅಲ್ಲಿ ಮ್ಯಾಂಗೋ ಪಚ್ಚ ಸ್ಟ್ರೀಮಿಂಗ್ ಆಗುತ್ತಿದೆ. ಈ ವಿಷಯವನ್ನ ಚಿತ್ರದ ನಾಯಕ ನಟ ಸಂಚಿತ್ ಸಂಜೀವ್ ಕೂಡ ಈ ಪ್ರೋಮೋದಲ್ಲಿ ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್-25 ರಂದು ಈ ಚಿತ್ರ ಜೀಯೋ ಹಾಟ್ಸ್ಟಾರ್ ಅಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್ ಅಲ್ಲಿ ಈ ಚಿತ್ರ ನೋಡದೇ ಇರೋರು ಜೀಯೋ ಹಾಟ್ಸ್ಟಾರ್ ಅಲ್ಲಿ ಈ ಚಿತ್ರ ನೋಡಬಹುದಾಗಿದೆ.
ಈ ಚಿತ್ರವನ್ನ ನವ ನಿರ್ದೇಶಕ ವಿವೇಕ್ ಪ್ರಕಾಶ್ ಡೈರೆಕ್ಷನ್ ಮಾಡಿದ್ದಾರೆ. ಸಂಚಿತ್ ಸಂಜೀವ್ ಅವರಿಗೆ ಇದು ಮೊದಲ ಚಿತ್ರವೇ ಆಗಿತ್ತು. ಇದನ್ನ ಅಷ್ಟೆ ಶ್ರದ್ಧೆಯಿಂದಲೇ ಸಂಚಿತ್ ಸಂಜೀವ್ ಮಾಡಿದ್ದರು.
ಕಾಜಲ್ ಕುಂದರ್ ಈ ಚಿತ್ರದಲ್ಲಿ ಸಂಚಿತ್ಗೆ ಜೋಡಿ ಆಗಿದ್ದರು. ಕನ್ನಡದ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಚರಣ್ ರಾಜ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದರು.
ಸೆಪ್ಟೆಂಬರ್-25 ರಿಂದ ಸ್ಟ್ರೀಮಿಂಗ್
(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್)
ಚಿತ್ರದ ನಾಯಕ ನಟ ಸಂಚಿತ್ ಸಂಜೀವ್ ಅಭಿನಯದ ಬಗ್ಗೆ ಒಳ್ಳೆ ಅಭಿಪ್ರಾಯ ಬಂದಿವೆ. ಮೊದಲ ಚಿತ್ರದಲ್ಲಿಯೇ ಅದ್ಭುತ ಅನಿಸುವ ರೀತಿನೇ ಅಭಿನಯಿಸಿದ್ದಾರೆ ಅನ್ನುವ ಮಾತುಗಳು ಕೇಳಿ ಬಂದಿವೆ.
ಈ ಚಿತ್ರದ ಸಂಗೀತದ ಬಗ್ಗೆನೂ ಒಳ್ಳೆ ಓಪಿನಿಯರ್ ಬಂದಿವೆ. ಚರಣ್ ರಾಜ್ ಅವರ ಸಂಗೀತ ಉತ್ತಮ ಅಂತಲೂ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.
ಈ ಚಿತ್ರ ಭೂಗತ ಲೋಕದ ಕತೆ ಹೊಂದಿದೆ. ಡ್ರಗ್ಸ್ ದಂಧೆ ಕುರಿತು ಹೇಳುತ್ತದೆ. ಆದರೆ, ಇಲ್ಲಿ ಭಾವನಾತ್ಮಕ ಸ್ಟೋರಿನೂ ಇದೆ. ಅಣ್ಣ ಮತ್ತು ತಮ್ಮನ ಕತೆಯನ್ನ ಇಲ್ಲಿ ನೋಡಬಹುದು.
ಈ ಚಿತ್ರದಲ್ಲಿ ಇನ್ನೂ ಒಂದು ಸೆಳೆತ ಇದೆ. ಅದೇನು ಅಂದ್ರೆ ಆ ದಿನಗಳ ಚಿತ್ರಣ ನೋಡಿ. ಹೌದು, 2001 ರಿಂದ 2010 ರವರೆಗಿನ ಸಮಯದಲ್ಲಿ ಮೈಸೂರು ಹೇಗಿತ್ತು ಅನ್ನೋದನ್ನು ಈ ಚಿತ್ರದಲ್ಲಿ ನೋಡಬಹುದು.
ಆಗಿನ ಸಿಡಿ ಅಂಗಡಿಗಳು, ಬಿಪಿಎಲ್ ಟಿವಿ, ಮಾರುತಿ ಝನ್ ಕಾರ್ ಅನ್ನ ಈ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು. ಇನ್ನುಳಿದಂತೆ ಈ ಚಿತ್ರ ಒಟಿಟಿಗೆ ಬರ್ತಿದೆ. ಥಿಯೇಟರ್ ಅಲ್ಲಿ ಮಿಸ್ ಮಾಡಿಕೊಂಡವರು ಇದನ್ನ ಜೀಯೋ ಹಾಟ್ಸ್ಟಾರ್ ಅಲ್ಲಿ ನೋಡಬಹುದಾಗಿದೆ.













