Last Updated:
ಟೆಸ್ಟ್ ತಂಡದಲ್ಲಿ ಹೊಸ ಮುಖಗಳಿಗೂ ಸಹ ಅವಕಾಶ ನೀಡಲಾಗಿದ್ದು, ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಮಾನವ್ ಸುತಾರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮಾನವ್ ಸುತಾರ್ ಯಾರು? ಹಿನ್ನೆಲೆ ಏನು? ಅನ್ನೋದರ ಫುಲ್ ಡಿಟೇಲ್ಸ್ ಇಲ್ಲಿದೆ.
ಅಫ್ಘಾನಿಸ್ತಾನ (Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ (Test Match) ಬಿಸಿಸಿಐ ಭಾರತ ತಂಡವನ್ನು ಘೋಷಣೆ ಮಾಡಿದೆ. ಶುಭ್ಮನ್ ಗಿಲ್ (Shubman Gill) ಭಾರತ ತಂಡವನ್ನು ಮುನ್ನಡೆಸಲಿದ್ದು, ಕೆಎಲ್ ರಾಹುಲ್ (KL Rahul) ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಟೆಸ್ಟ್ ತಂಡದಲ್ಲಿ (Test Team) ಹೊಸ ಮುಖಗಳಿಗೂ ಸಹ ಅವಕಾಶ ನೀಡಲಾಗಿದ್ದು, ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಮಾನವ್ ಸುತಾರ್ (Manav Suthar) ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮಾನವ್ ಸುತಾರ್ ಯಾರು? ಹಿನ್ನೆಲೆ ಏನು? ಅನ್ನೋದರ ಫುಲ್ ಡಿಟೇಲ್ಸ್ ಇಲ್ಲಿದೆ.
ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಮಾನವ್ ಸುತಾರ್ ಸ್ಥಾನ ಪಡೆದುಕೊಂಡಿದ್ದಾರೆ. ವೃತ್ತಿಯಲ್ಲಿ ಬೌಲಿಂಗ್ ಆಲ್ರೌಂಡರ್ ಆಗಿರುವ ಮಾನವ್ ಸುತಾರ್, ಎಡಗೈ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಾರೆ.
ಮಾನವ್ ಸುತಾರ್ ಆಗಸ್ಟ್ 3, 2002 ರಂದು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಜನಿಸಿದರು. ಮಾನವ್ ಸುತಾರ್ 11 ವರ್ಷದವನಿದ್ದಾಗ, ಅವರ ತಂದೆ ಅವರನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಮಾನವ್ ಸುತಾರ್ ಅವರ ತಂದೆಗೆ ತಮ್ಮ ಮಗ ಬ್ಯಾಟ್ಸ್ಮನ್ ಆಗಬೇಕು ಎಂದು ಬಯಸಿದ್ದರು. ಆದ್ರೆ, ಬೌಲಿಂಗ್ ಆಲ್ ರೌಂಡರ್ ಆಗಿ ಹೊರಹೊಮ್ಮಿದ್ದಾರೆ.
ಮಾನವ್ ಸುತಾರ್ 2021-22 ರ ರಣಜಿ ಟ್ರೋಫಿ ಋತುವಿನಲ್ಲಿ ರಾಜಸ್ಥಾನ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ನಂತರ ರಾಜಸ್ಥಾನದ ರೆಡ್-ಬಾಲ್ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದರು. 2025-26 ರ ರಣಜಿ ಟ್ರೋಫಿಯಲ್ಲಿ, ಅವರು ಕೇವಲ ಐದು ಇನ್ನಿಂಗ್ಸ್ಗಳಲ್ಲಿ 18 ವಿಕೆಟ್ಗಳನ್ನು ಕಬಳಿಸಿದ್ದರು. 2022 ರಲ್ಲಿ ಪುದುಚೇರಿ ವಿರುದ್ಧದ ಪ್ರಥಮ ದರ್ಜೆ ಪಂದ್ಯದಲ್ಲಿ ಮಾನವ್ 11 ವಿಕೆಟ್ಗಳನ್ನು ಪಡೆದು ಮಿಂಚಿದ್ದರು.
ಇದುವರೆಗೂ 29 ಪಂದ್ಯಗಳನ್ನು ಆಡಿರುವ ಮಾನವ್ ಸುತಾರ್ 129 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ತಮ್ಮ ಬ್ಯಾಟ್ನಿಂದ 945 ರನ್ಗಳನ್ನು ಬಾರಿಸಿದ್ದಾರೆ. ಮಾನವ್ ಸುತಾರ್ ಹೆಸರಿನಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕಗಳಿವೆ. ಮಾನವ್ ಸುತಾರ್ 2024 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. 2024 ರಲ್ಲಿ ಗುಜರಾತ್ ಪರ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ, 2025 ರ ಸಂಪೂರ್ಣ ಋತುವಿನಲ್ಲಿ ಅವರನ್ನು ಬೆಂಚ್ನಲ್ಲಿ ಕೂರಿಸಲಾಗಿತ್ತು. ಪ್ರಸ್ತುತ ಐಪಿಎಲ್ ಸೀಸನ್ನಲ್ಲಿ, ಮಾನವ್ ಸುತಾರ್ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ ಮತ್ತು ಎರಡು ವಿಕೆಟ್ಗಳನ್ನು ಪಡೆದಿದ್ದಾರೆ.
ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಧ್ರುವ್ ಜುರೆಲ್, ಹರ್ಷ್ ದುಬೆ













