Manav Suthar: ಚೊಚ್ಚಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದ ಮಾನವ್ ಸುತಾರ್! 59 ವರ್ಷಗಳ ಹಳೆಯ ದಾಖಲೆ ಬ್ರೇಕ್! | ಕ್ರೀಡಾ ಸುದ್ದಿ | ACTPnews

ಮಾನವ್ ಸುತಾರ್


Last Updated:

ಮುಲ್ಲನ್‌ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು (6/33) ಪಡೆಯುವ ಮೂಲಕ ಅವರು ವಿಶೇಷ ಸಾಧನೆ ಮಾಡಿದ್ದಾರೆ.

ಮಾನವ್ ಸುತಾರ್
ಮಾನವ್ ಸುತಾರ್

ಟೀಮ್ ಇಂಡಿಯಾದ ಯುವ ಸ್ಪಿನ್ನರ್ ಮಾನವ್ ಸುತಾರ್ (Manav Suthar) ಇತಿಹಾಸ ನಿರ್ಮಿಸಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಲ್ಲನ್‌ಪುರದಲ್ಲಿ ನಡೆದ ಅಫ್ಘಾನಿಸ್ತಾನ (India vs Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು (6/33) ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಮಾನವ್ ಸುತಾರ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆದ 10ನೇ ಭಾರತೀಯ ಬೌಲರ್ ಎನಿಸಿಕೊಂಡರು.

ನರೇಂದ್ರ ಹಿರ್ವಾನಿ ಹೆಸರಲ್ಲಿದೆ ವಿಶ್ವದಾಖಲೆ

ನರೇಂದ್ರ ಹಿರ್ವಾನಿ ಚೊಚ್ಚಲ ಪಂದ್ಯದಲ್ಲಿಯೇ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. 1988 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ (8/61) 8 ವಿಕೆಟ್‌ಗಳನ್ನು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ (8/75) 8 ವಿಕೆಟ್‌ಗಳನ್ನು ಪಡೆದು ಅಗ್ರಸ್ಥಾನವನ್ನು ಗಳಿಸಿದ್ದಾರೆ. ಮಾನವ್ ಸುತಾರ್ (6/33) ಈಗ ಆರು ವಿಕೆಟ್‌ಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ರ್ 59 ವರ್ಷಗಳ ಹಳೆಯ ದಾಖಲೆ ಬ್ರೇಕ್

ಈ ಪ್ರದರ್ಶನದ ಮೂಲಕ, ಸುತಾರ್ 59 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. 1967 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ತಮ್ಮ ಚೊಚ್ಚಲ ಪಂದ್ಯದಲ್ಲಿ ಅಬಿದ್ ಅಲಿ 6 ವಿಕೆಟ್‌ಗಳನ್ನು (6/55) ಕಬಳಿಸಿದ್ದರು, ಆ ದಾಖಲೆಯನ್ನು ಸುತಾರ್ ಈಗ ಹಿಂದಿಕ್ಕಿದ್ದಾರೆ. ಮಾನವ್ ಸುತಾರ್ ಈ ಶತಮಾನದಲ್ಲಿ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಎರಡನೇ ಭಾರತೀಯ ಬೌಲರ್ ಆಗಿದ್ದಾರೆ.

ತಮ್ಮ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಭಾರತೀಯರು

ನರೇಂದ್ರ ಹಿರ್ವಾನಿ – 8/61 vs ವೆಸ್ಟ್ ಇಂಡೀಸ್ (1988)

ನರೇಂದ್ರ ಹಿರ್ವಾನಿ – 8/75 vs ವೆಸ್ಟ್ ಇಂಡೀಸ್ (1988)

ಮಾನವ್ ಸುತಾರ್ – 6/33 vs ಅಫ್ಘಾನಿಸ್ತಾನ (2026)*

ಅಬಿದ್ ಅಲಿ – 6/55 vs ಆಸ್ಟ್ರೇಲಿಯಾ (1967)

ದಿಲೀಪ್ ದೋಷಿ – 6/103 vs ಆಸ್ಟ್ರೇಲಿಯಾ (1979)

ವಾಮನ್ ಕುಮಾರ್ – 5/64 vs ಪಾಕಿಸ್ತಾನ (1961)

ಅಮಿತ್ ಮಿಶ್ರಾ – 5/71 vs ಆಸ್ಟ್ರೇಲಿಯಾ (2008)

ಮೊಹಮ್ಮದ್ ನಿಸ್ಸಾರ್ – 5/93 vs ಇಂಗ್ಲೆಂಡ್ (1932)

ಸ್ಪಿನ್ನರ್​​ಗಳ ದಾಳಿಗೆ ಅಫ್ಘಾನಿಸ್ತಾನ ಧೂಳೀಪಟ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, 127 ಓವರ್‌ಗಳ ನಂತರ 564/8 ಸ್ಕೋರ್‌ನೊಂದಿಗೆ ತನ್ನ ಮೊದಲ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿತು. ಶುಭಮನ್ ಗಿಲ್ (177 ಎಸೆತಗಳಲ್ಲಿ 126, 15 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ) ಮತ್ತು ಕೆಎಲ್ ರಾಹುಲ್ (165 ಎಸೆತಗಳಲ್ಲಿ 100, 11 ಬೌಂಡರಿ) ಶತಕಗಳೊಂದಿಗೆ ಮಿಂಚಿದರು. ರಿಷಭ್ ಪಂತ್ ( 81) ಸಾಯಿ ಸುದರ್ಶನ್ (81) ಶತಕ ಮಿಸ್ ಮಾಡಿಕೊಂಡರು. ವಾಷಿಂಗ್ಟನ್ ಸುಂದರ್ (68 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ಅಜೇಯ 52) ಅರ್ಧಶತಕಗಳೊಂದಿಗೆ ಮಿಂಚಿದರು. ಮಾನವ್ ಸುತಾರ್ ಕೂಡ ಎರಡು ಸಿಕ್ಸರ್‌ಗಳು ಸೇರಿದಂತೆ ಬ್ಯಾಟಿಂಗ್‌ನಲ್ಲಿ ನಿರ್ಣಾಯಕ 28 ರನ್‌ಗಳ ಕೊಡುಗೆ ನೀಡಿದರು.

ಫಾಲೋ ಆನ್​ಗೆ ಒಳದಾದ ಅಫ್ಘಾನ್

ಅಫ್ಘಾನಿಸ್ತಾನದ ಮೊದಲ ಇನ್ನಿಂಗ್ಸ್ ಪತನಕ್ಕೆ ಮಾನವ್ ಸುತಾರ್ (6/140) ಪ್ರಮುಖ ಪಾತ್ರ ವಹಿಸಿದರು. ಅಫ್ಘಾನ್ ತಂಡವು 152 ರನ್‌ಗಳಿಗೆ ಕುಸಿದ. ರಹಮತ್ ಶಾ (135 ಎಸೆತಗಳಲ್ಲಿ 60, 9 ಬೌಂಡರಿ ಮತ್ತು ಒಂದು ಸಿಕ್ಸರ್) ಹೊರತುಪಡಿಸಿ, ಇತರ ಬ್ಯಾಟ್ಸ್‌ಮನ್‌ಗಳು ಶೋಚನೀಯವಾಗಿ ವಿಫಲರಾದರು. ಭಾರತೀಯ ಬೌಲರ್‌ಗಳಲ್ಲಿ, ಪ್ರಸಿದ್ಧ್ ಕೃಷ್ಣ (3/37) ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಪ್ರಭಾವಿತರಾಗಿದ್ದರೆ, ವಾಷಿಂಗ್ಟನ್ ಸುಂದರ್ (1/21) ಒಂದು ವಿಕೆಟ್ ಪಡೆದರು.

412 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ್ದ ಭಾರತ ಫಾಲೋಆನ್ ಏರಿತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ, ಅಫ್ಘಾನಿಸ್ತಾನ ಕೇವಲ 112 ರನ್‌ಗಳಿಗೆ ಆಲೌಟ್ ಆಗಿ, ಹೀನಾಯ ಸೋಲನ್ನು ಅನುಭವಿಸಿತು. ವಾಷಿಂಗ್ಟನ್ ಸುಂದರ್ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಕುಲದೀಪ್ ಯಾದವ್ ಮೂರು ವಿಕೆಟ್ ಪಡೆದರು. ಮಾನವ್ ಸುತಾರ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports