Maharashtra: ಉದ್ಧವ್ ಠಾಕ್ರೆ ಮತ್ತು ಏಕ್​ನಾಥ್ ಶಿಂದೆ ಒಂದಾಗ್ತಾರಾ? ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ ಮೂಡಿಸಿದ ಸಚಿವನ ಹೇಳಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಏಕನಾಥ್ ಶಿಂಧೆ-ಉದ್ಧವ್ ಠಾಕ್ರೆ


Last Updated:

2022ರಲ್ಲಿ ಏಕ್​ನಾಥ್​ ಶಿಂದೆ ಅವರು ಉದ್ಧವ್ ಠಾಕ್ರೆ ಅವರನ್ನು ಬಿಟ್ಟು ಬಹುಸಂಖ್ಯೆಯ ಶಾಸಕರೊಂದಿಗೆ ಬಂಡಾಯ ಎದ್ದ ನಂತರ ಶಿವಸೇನೆಯಲ್ಲಿ ದೊಡ್ಡ ಬಿರುಕು ಬಿದ್ದಿತ್ತು. ಆ ಬಳಿಕ ಶಿಂದೆ ಗುಂಪು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿ ಏಕ್ನಾಥ್ ಶಿಂದೆ ಮುಖ್ಯಮಂತ್ರಿಯಾದರು.

ಏಕನಾಥ್ ಶಿಂಧೆ-ಉದ್ಧವ್ ಠಾಕ್ರೆ
ಏಕನಾಥ್ ಶಿಂಧೆ-ಉದ್ಧವ್ ಠಾಕ್ರೆ

ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಮತ್ತೊಂದು ದೊಡ್ಡ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ರಾಜ್ಯ ಸಚಿವ ಮತ್ತು ಶಿವಸೇನಾ ನಾಯಕ ಪ್ರತಾಪ್ ಸರ್ನಾಯಕ್ ಅವರು ಉದ್ಧವ್ ಠಾಕ್ರೆ ಮತ್ತು ಏಕ್​ನಾಥ್ ಶಿಂದೆ ಗುಂಪುಗಳು ಭವಿಷ್ಯದಲ್ಲಿ ಮತ್ತೆ ಒಂದಾಗುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದಾರೆ. ಎನ್ಸಿಪಿ ಲೀಡರ್ ಶರದ್​ ಪವಾರ್ ಹಾಗೂ ಏಕನಾಥ್​ ಶಿಂದೆ ಭೇಟಿಯಾದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ಶಿವಸೇನೆ ಗುಂಪುಗಳು ಒಂದಾಗಬಹುದಾ ಎಂಬ ಪ್ರಶ್ನೆಗೆ ‘ಭವಿಷ್ಯದಲ್ಲಿ ಎಲ್ಲವೂ ಸಾಧ್ಯ’ ಎಂದು ಶಾಕಿಂಗ್ ಉತ್ತರ ನೀಡಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

2022ರಲ್ಲಿ ಶಿವಸೇನೆ ಇಬ್ಭಾಗ

2022ರಲ್ಲಿ ಏಕ್​ನಾಥ್​ ಶಿಂದೆ ಅವರು ಉದ್ಧವ್ ಠಾಕ್ರೆ ಅವರನ್ನು ಬಿಟ್ಟು ಬಹುಸಂಖ್ಯೆಯ ಶಾಸಕರೊಂದಿಗೆ ಬಂಡಾಯ ಎದ್ದ ನಂತರ ಶಿವಸೇನೆಯಲ್ಲಿ ದೊಡ್ಡ ಬಿರುಕು ಬಿದ್ದಿತ್ತು. ಆ ಬಳಿಕ ಶಿಂದೆ ಗುಂಪು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿ ಏಕ್ನಾಥ್ ಶಿಂದೆ ಮುಖ್ಯಮಂತ್ರಿಯಾದರು. ಚುನಾವಣಾ ಆಯೋಗವು ಶಿಂದೆ ಗುಂಪಿಗೆ ಅಧಿಕೃತ ಶಿವಸೇನಾ ಹೆಸರು ಮತ್ತು ಬಿಲ್ಲು-ಬಾಣ ಚಿಹ್ನೆ ನೀಡಿತು. ಉದ್ಧವ್ ಠಾಕ್ರೆ ಅವರು ಶಿವಸೇನಾ (UBT) ಹೊಸ ಚಿಹ್ನೆಯೊಂದಿಗೆ ವಿರೋಧ ಪಕ್ಷದಲ್ಲಿ ಉಳಿದುಕೊಂಡಿತು. ಈ ಬಿರುಕು 2024ರ ಚುನಾವಣೆಯಲ್ಲೂ ಮುಂದುವರಿದಿತ್ತು. ಪ್ರಸ್ತುತ ಶಿಂಧೆ ಬಣ ಎನ್​ಡಿಎ ಒಕ್ಕೂಟದಲ್ಲಿದೆ.

ಶರದ್ ಪವಾರ್-ಏಕ್ನಾಥ್ ಶಿಂದೆ ಭೇಟಿ

ಇತ್ತೀಚೆಗೆ ಶರದ್ ಪವಾರ್ ಅವರು ಏಕ್ನಾಥ್ ಶಿಂದೆ ಅವರ ವಿಧಾನಸೌಧ ಕಚೇರಿಗೆ ಭೇಟಿ ನೀಡಿದ್ದು ಮಹಾ ವಿಕಾಸ್ ಅಘಾಡಿ (MVA) ಒಳಗೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಭೇಟಿಯನ್ನು ಉದ್ಧವ್ ಗುಂಪಿನ ಸಂಜಯ್ ರಾವುತ್ ಅವರು ತೀವ್ರವಾಗಿ ವಿರೋಧಿಸಿದ್ದರು. ಇದು ಶರದ್ ಪವಾರ್ ಅವರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಸಂಜಯ್ ರಾವತ್ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಠಾಕ್ರೆ ಗುಂಪಿನ ಮುಖ್ಯಸ್ಥ ಉದ್ಧವ್ ಠಾಕ್ರೆ ಬಗ್ಗೆಯೂ ದೊಡ್ಡ ಹೇಳಿಕೆ ನೀಡಿದರು.

ರಾಜಕೀಯದಲ್ಲಿ ವೈಯಕ್ತಿಕ ಸಂಬಂಧಗಳು ಭಿನ್ನವಾಗಿರುತ್ತವೆ ಎಂದು ಹೇಳಿದ್ದಾರೆ. “ರಾಜಕೀಯದಲ್ಲಿ ಯಾರೂ ಶತ್ರು ಅಥವಾ ಮಿತ್ರರಲ್ಲ. ಶರದ್ ಪವಾರ್ ಅವರು ಶಿಂದೆ ಅವರ ಕಚೇರಿಯಲ್ಲಿ ಕುಳಿತಿದ್ದರೆ ಏನು ತಪ್ಪು? ಎಲ್ಲದರಿಂದಲೂ ಸಂಜಯ್ ರಾವತ್​ಗೆ ಹೊಟ್ಟೆ ನೋವು ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ? ಆದಿತ್ಯ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ನಮ್ಮ ಕಾರುಗಳಲ್ಲಿ ಬಂದರೆ ಆಶ್ಚರ್ಯಪಡಬೇಡಿ. ಏಕೆಂದರೆ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ. ಆದ್ದರಿಂದ, ನಿಮ್ಮ ಸ್ನೇಹಿತರು ಮತ್ತು ಶತ್ರುಗಳು ಯಾರು ಎಂದು ನೀವು ತಿಳಿದುಕೊಳ್ಳಬೇಕು” ಎಂದು ಪ್ರತಾಪ್ ಸರ್ನಾಯಕ್ ಭವಿಷ್ಯದಲ್ಲಿ ಶಿವಸೇನೆ ಬಣ ಒಂದಾಗಬಹುದು ಎಂಬ ಸುಳಿವು ನೀಡಿದರು.

ನಾವು ಠಾಕ್ರೆಯನ್ನೂ ಸ್ವಾಗತಿಸುತ್ತೇವೆ

ನಾಳೆ ಉದ್ಧವ್ ಠಾಕ್ರೆ ಅಥವಾ ಆದಿತ್ಯ ಠಾಕ್ರೆ ಬಂದರೆ ಅವರನ್ನು ಸ್ವಾಗತಿಸುತ್ತಾರೆಯೇ? ಎಂದು ಪತ್ರಕರ್ತ ಕೇಳಿದ್ದಕ್ಕೆ ಉತ್ತರಿಸಿದರೆ ಹೌದು, ಅವರಿಗೂ ಸ್ವಾಗತ ಕೋರುತ್ತೇವೆ. ಎಲ್ಲರನ್ನೂ ಸ್ವಾಗತಿಸುವುದು ಮಹಾರಾಷ್ಟ್ರದ ಸಂಸ್ಕೃತಿ, ಆದರೆ ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ” ಎಂದು ಪ್ರತಾಪ್ ಸರ್ನಾಯಕ್ ವಿವರಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed