Madhuri Dixit: ರುಕ್ಮಿಣಿ ವಸಂತ್ ಬಳಿಕ ಧಕ್ ಧಕ್ ಬೆಡಗಿಗೂ AI ಕಾಟ! ಮಾಧುರಿ ದೀಕ್ಷಿತ್ ವಿಡಿಯೋ ಫುಲ್ ವೈರಲ್ | | ACTPnews

ನಟಿ ಮಾಧುರಿ ದೀಕ್ಷಿತ್


Last Updated:

Madhuri Dixit: ರಶ್ಮಿಕಾ ಮಂದಣ್ಣ ರುಕ್ಮಿಣಿ ವಸಂತ್ ಬಳಿಕ ಇದೀಗ ಹೆಸರಾಂತ ನಟಿ ಮಾಧುರಿ ದೀಕ್ಷಿತ್ (Madhuri Dixit) ಕೂಡ ಡೀಪ್‌ಫೇಕ್ ವಿವಾದಕ್ಕೆ ಒಳಗಾಗಿದ್ದಾರೆ.

ನಟಿ ಮಾಧುರಿ ದೀಕ್ಷಿತ್
ನಟಿ ಮಾಧುರಿ ದೀಕ್ಷಿತ್

ಕೃತಕ ಬುದ್ಧಿಮತ್ತೆಯ (Artificial Intelligence) ಯುಗದಲ್ಲಿ ಮಾಹಿತಿ ವೇಗವಾಗಿ ಹರಡುವುದರ ಜೊತೆಗೆ ತಪ್ಪುಮಾಹಿತಿ ಮತ್ತು ಡಿಜಿಟಲ್ ಮ್ಯಾನಿಪ್ಯುಲೇಶನ್ ಕೂಡ ಹೆಚ್ಚಾಗಿದೆ. ಒಂದು ಚಿತ್ರ, ಒಂದು ವಿಡಿಯೋ ಅಥವಾ ಕೆಲವೇ ಸೆಕೆಂಡಿನ ಕ್ಲಿಪ್ ಕೂಡ ಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆ ಮೂಡಿಸುವಷ್ಟು ಶಕ್ತಿ ಹೊಂದಿದೆ. ವಿಶೇಷವಾಗಿ ಸಿನಿಮಾರಂಗದ ಜನಪ್ರಿಯ ವ್ಯಕ್ತಿಗಳು ಇಂತಹ ಡೀಪ್‌ಫೇಕ್ (Deepfake) ತಂತ್ರಜ್ಞಾನದಿಂದಾಗಿ ಅಸತ್ಯದ ಬಲಿಯಾಗುತ್ತಿರುವುದು ಹೊಸ ವಿಷಯವಲ್ಲ. ರಶ್ಮಿಕಾ ಮಂದಣ್ಣ (Rashmika Mandanna), ರುಕ್ಮಿಣಿ ವಸಂತ್ (Rukmini Vasanth) ಬಳಿಕ ಇದೀಗ ಹೆಸರಾಂತ ನಟಿ ಮಾಧುರಿ ದೀಕ್ಷಿತ್ (Madhuri Dixit) ಕೂಡ ಡೀಪ್‌ಫೇಕ್ ವಿವಾದಕ್ಕೆ ಒಳಗಾಗಿದ್ದಾರೆ.

AI ಆಧಾರಿತ ಡೀಪ್ ಫೇಕ್ ತಂತ್ರಜ್ಞಾನ ಈಗ ಕ್ರಿಯೇಟಿವ್ ಕ್ಷೇತ್ರದಲ್ಲಷ್ಟೇ ಅಲ್ಲ, ತಪ್ಪುಮಾಹಿತಿ ಹರಡುವ ಸಾಧನವಾಗಿಯೂ ಬಳಕೆಯಾಗುತ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಸೋಷಿಯಲ್ ಮೀಡಿಯಾಗಳಲ್ಲಿ ಬರುವುದರಲ್ಲಿ ನಿಜ ಯಾವುದು ನಕಲಿ ಯಾವುದು ಎಂಬುದನ್ನು ಕಂಡುಹಿಡಿಯುವುದು ಕೂಡಾ ಕಷ್ಟ.

ಫೆಮಿನಾ ಅವಾರ್ಡ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್ ಅವರ ವೀಡಿಯೊ ಎಂದು ಬಿಂಬಿಸಲಾದ ಡೀಪ್‌ಫೇಕ್ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಪ್ಪು ಬಣ್ಣದ ಗೌನ್ ಮತ್ತು ಡೀಪ್ ಕಟ್ ನೆಕ್ಲ್ ಲೈನ್ ಇರುವ ಉಡುಪಿನಲ್ಲಿ ಅವರು ಕಾಣಿಸಿಕೊಂಡಂತೆ ವಿಡಿಯೋ ತೋರಿಸಲಾಗಿತ್ತು.

,ಪಬ್ಲಿಕ್ ಫೀಗರ್ಸ್ ಮಾತ್ರವಲ್ಲದೆ , ಸಾಮಾನ್ಯ ನಾಗರಿಕರೂ ಕೂಡ AI ಗೆ ಬಲಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಇಂಟರ್ ನೆಟ್ ನಲ್ಲಿ ಹರಡುವ ಎಲ್ಲ ವಿಷಯಗಳಿಗೂ ಎಚ್ಚರಿಕೆಯಿಂದ ಪ್ರತಿಕ್ರಿಯಿಸುವುದು ಮುಖ್ಯವಾಗುತ್ತದೆ.

ಇನ್ನು ಇತ್ತೀಚಿನ ದಿನಗಳಲ್ಲಿ ರುಕ್ಮಿಣಿ ವಸಂತ್ ಅವರ ಡೀಪ್ ಫೇಕ್ ವಿಡಿಯೋ, ಫೋಟೊ ವೈರಲ್ ಆಗಿತ್ತು. ಸಿನಿಮಾ ಶೂಟಿಂಗ್ ಗಾಗಿ ನಟಿ ರುಕ್ಮಿಣಿ ವಸಂತ್ ಬಿಕಿನಿ ಧರಿಸಿಕೊಂಡು ಸ್ವಿಮ್ಮಿಂಗ್ ಪೂಲ್ ಒಳಗೆ ಇಳಿಯುವಂತೆ ಫೇಕ್ ಫೋಟೊ, ವಿಡಿಯೋ ಹರಿದಾಡಿತ್ತು . ಈ ಬಗ್ಗೆ ಈಗಾಗಲೇ ರುಕ್ಮಿಣಿ, ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports