LSG, Rishabh Pant: ಲಖನೌ ತಂಡದ ನಾಯಕತ್ವಕ್ಕೆ ರಿಷಭ್ ಗುಡ್​ ಬೈ! ಐಪಿಎಲ್​ ಮುಗಿಯುವ ಮುನ್ನವೇ ಪಂತ್ ಶಾಕಿಂಗ್ ನಿರ್ಧಾರ! | ಕ್ರೀಡಾ ಸುದ್ದಿ | ACTPnews

ರಿಷಭ್ ಪಂತ್


Last Updated:

ಲಖನೌ ಸೂಪರ್ ಜೈಂಟ್ಸ್​ ತಂಡ 2026ರಲ್ಲಿ 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳನ್ನು ಮಾತ್ರ ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಗಿಸಿತು. 2025ರಲ್ಲಿ 14 ಪಂದ್ಯಗಳಲ್ಲಿ 6 ಗೆಲುವುಗಳು ಮಾತ್ರ ದಕ್ಕಿದ್ದವು. ಹೀಗಾಗಿ ಒಟ್ಟು 28 ಪಂದ್ಯಗಳಲ್ಲಿ 10 ಗೆಲುವುಗಳೊಂದಿಗೆ ಪಂತ್ ಟೂರ್ನಿಯಲ್ಲಿಯೇ ಕಳಪೆ ನಾಯಕರಾಗಿದ್ದರು.

ರಿಷಭ್ ಪಂತ್
ರಿಷಭ್ ಪಂತ್

ಐಪಿಎಲ್ 2026ರಲ್ಲಿ (IPL 2026) ತಂಡವು ಕಳಪೆ ಪ್ರದರ್ಶನ ನೀಡಿದ ಬಳಿಕ ರಿಷಭ್ ಪಂತ್ (Rishabh Pant) ಲಖನೌ ಸೂಪರ್ ಜಯಂಟ್ಸ್ (Lucknow Super Giants) ತಂಡದ ನಾಯಕತ್ವದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ. ಲಖನೌ ತಂಡವು ಇದನ್ನು ದೃಢಪಡಿಸಿದೆ. ಪಂತ್ ಅವರನ್ನು 2025ರ ಐಪಿಎಲ್ ಹರಾಜಿನಲ್ಲಿ ಲಖನೌ ತಂಡವು 27 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತವಾಗಿತ್ತು. ಆದರೆ ಎರಡು ಋತುಗಳಲ್ಲಿ ಅವರು ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯಲು ವಿಫಲರಾದರು. ಈ ಹಿನ್ನಲೆಯಲ್ಲಿ ಹೊಣೆಹೊತ್ತು ರಾಜೀನಾಮೆ ನೀಡಿದ್ದಾರೆ.

ಸತತ 2 ವರ್ಷ ಕಳಪೆ ದಾಖಲೆ

ಲಖನೌ ಸೂಪರ್ ಜೈಂಟ್ಸ್​ ತಂಡ 2026ರಲ್ಲಿ 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳನ್ನು ಮಾತ್ರ ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಗಿಸಿತು. 2025ರಲ್ಲಿ 14 ಪಂದ್ಯಗಳಲ್ಲಿ 6 ಗೆಲುವುಗಳು ಮಾತ್ರ ದಕ್ಕಿದ್ದವು. ಹೀಗಾಗಿ ಒಟ್ಟು 28 ಪಂದ್ಯಗಳಲ್ಲಿ 10 ಗೆಲುವುಗಳೊಂದಿಗೆ ಪಂತ್ ಟೂರ್ನಿಯಲ್ಲಿಯೇ ಕಳಪೆ ನಾಯಕರಾಗಿದ್ದರು.

ಲಖನೌ ಸೂಪರ್ ಜಯಂಟ್ಸ್ ತಂಡದ ಹೇಳಿಕೆ ಪ್ರಕಾರ, “ರಿಷಭ್ ಪಂತ್ ಅವರು ತಂಡದ ನಾಯಕತ್ವದಿಂದ ವಿಮುಕ್ತಿ ನೀಡುವಂತೆ ಫ್ರಾಂಚೈಸಿ ಕೋರಿದ್ದಾರೆ. ತಂಡವು ಅವರ ಕೋರಿಕೆಯನ್ನು ಒಪ್ಪಿಕೊಂಡಿದೆ” ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಗೌರವಯುತವಾಗಿ ಸ್ವೀಕಾರ

” ರಿಷಭ್ ಅವರು ತಂಡದೊಂದಿಗೆ ಮಾತನಾಡಿ ಈ ಕೋರಿಕೆಯನ್ನು ಮುಂದಿಟ್ಟಿದ್ದರು. ನಾವು ಗೌರವಯುತವಾಗಿ ಅದನ್ನು ಅಂಗೀಕರಿಸಿದ್ದೇವೆ. ಈ ರೀತಿಯ ನಿರ್ಧಾರಗಳನ್ನ ತೆಗೆದುಕೊಳ್ಳುವುದು ಎಂದಿಗೂ ಸುಲಭವಾಗಿರುವುದಿಲ್ಲ. ನಾಯಕರಾಗಿ ರಿಷಭ್ ಡ್ರೆಸ್ಸಿಂಗ್ ರೂಮ್‌ಗೆ ನೀಡಿರುವ ಎಲ್ಲಾ ಕೊಡುಗೆಗಳಿಗೆ ನಾವು ಕೃತಜ್ಞರಾಗಿದ್ದೇವೆ. ಈಗ ನಮ್ಮ ಗಮನವು ತಂಡದ ಸಾಮೂಹಿಕ ಪ್ರಗತಿಯ ಮೇಲಿದೆ. ಮತ್ತೆ ಪುಟಿದೇಳುವುದು ಮತ್ತು ತಂಡವನ್ನ ಮರುಸಂಘಟನೆ ಮಾಡುವ ಮೂಲಕ ಉತ್ತಮ ಮಟ್ಟವನ್ನು ತಲುಪುವುದು ನಮ್ಮ ಮುಂದಿರುವ ಗುರಿ ಎಂದು  ತಂಡದ ಮುಖ್ಯ ಕಾರ್ಯನಿರ್ವಾಹಕ ಅಥವಾ ಅಧಿಕಾರಿ ಮೂಡಿ (Moody) ಅವರು ನೀಡಿದ ಪ್ರೆಸ್ ರಿಲೀಸ್‌ನಲ್ಲಿ ಹೇಳಿದ್ದಾರೆ.

ಬ್ಯಾಟಿಂಗ್ನಲ್ಲೂ ಫ್ಲಾಪ್

ಪಂತ್ ಕೇವಲ ನಾಯಕತ್ವದಲ್ಲಿ ಮಾತ್ರವಲ್ಲ ಬ್ಯಾಟಿಂಗ್ ಫಾರ್ಮ್ ಕೂಡ ಈ ಅವಧಿಯಲ್ಲಿ ಕುಸಿದಿತ್ತು. 2025 ರಲ್ಲಿ 14 ಪಂದ್ಯಗಳಲ್ಲಿ 269 ರನ್‌ಗಳು ಮತ್ತು 2026 ರಲ್ಲಿ ಕೇವಲ 312 ರನ್‌ಗಳು ಮಾತ್ರ ಬಂದಿವೆ. ನಾಯಕತ್ವದ ಒತ್ತಡ ಮತ್ತು ತಂಡದ ಕಳಪೆ ಫಲಿತಾಂಶಗಳು ನಾಯಕತ್ವ ತ್ಯಜಿಸಲು ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಆ ಇಬ್ಬರಲ್ಲಿ ಒಬ್ಬರಿಗೆ ನಾಯಕತ್ವ

ಈಗ ಲಖನೌ ತಂಡವು ಹೊಸ ನಾಯಕನನ್ನು ನೇಮಿಸುವ ಸಾಧ್ಯತೆ ಇದೆ. ರಿಷಭ್ ಪಂತ್ ಅವರು ಭಾರತೀಯ ಕ್ರಿಕೆಟ್‌ನ ಪ್ರಮುಖ ಆಟಗಾರರಾಗಿದ್ದು, ನಾಯಕತ್ವದ ಜವಾಬ್ದಾರಿಯಿಂದ ಮುಕ್ತರಾಗಿ ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸುವ ಅವಕಾಶ ಸಿಗುವುದು ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. ನಾಯಕರಾಗಿ ಮಿಚೆಲ್ ಮಾರ್ಷ್​, ಐಡೆನ್ ಮಾರ್ಕ್ರಮ್ ನೇಮಕವಾಗುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed