Lalit Modi: ನಾನು ದೇಶಬಿಡಲು ಅದೇ ಕಾರಣ: ಮ್ಯಾಚ್ ಫಿಕ್ಸಿಂಗ್, ಕಿಡ್ನಾಪ್, ಜೀವ ಬೆದರಿಕೆ ಸೇರಿ ಐಪಿಎಲ್ ಕುರಿತು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ ಲಲಿತ್ ಮೋದಿ | ಕ್ರೀಡಾ ಸುದ್ದಿ | ACTPnews

ಲಲಿತ್ ಮೋದಿ


Last Updated:

ವಿಸ್ಡನ್ ಕ್ರಿಕೆಟ್‌ನ ಪಾಡ್‌ಕ್ಯಾಸ್ಟ್ ‘ದಿ ಸ್ಕೂಪ್’ನಲ್ಲಿ ಈ ಕುರಿತು ಮಾತನಾಡಿದ ಲಲಿತ್ ಮೋದಿ, ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಲು ನಿರಾಕರಿಸಿದ್ದಕ್ಕಾಗಿ ಅವರು ಎದುರಿಸಿದ ಬೆದರಿಕೆಗಳು ಮತ್ತು ಹತ್ಯೆಯ ಪ್ರಯತ್ನಗಳನ್ನು ವಿವರಿಸಿದ್ದಾರೆ. ಈ ಘಟನೆಗಳು ಅವರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದ ಅವರು, ಐಪಿಎಲ್‌ನಲ್ಲಿ ಪಂದ್ಯಗಳನ್ನು ಫಿಕ್ಸಿಂಗ್ ಮಾಡುವ ಪ್ರಯತ್ನಗಳನ್ನು ಸಹ ಉಲ್ಲೇಖಿಸಿದ್ದಾರೆ.

ಲಲಿತ್ ಮೋದಿ
ಲಲಿತ್ ಮೋದಿ

ಐಪಿಎಲ್ (IPL) ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ತಮ್ಮ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ ಶಾಕಿಂಗ್ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಭೂಗತ ಲೋಕವು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗವಹಿಸುವಂತೆ ಬೆದರಿಕೆ ಹಾಕಿತ್ತು ಮತ್ತು ತಮ್ಮ ಮಗನ ಅಪಹರಣದ ಬಗ್ಗೆ ಬೆದರಿಕೆಗಳನ್ನು ಸ್ವೀಕರಿಸಿದ್ದೆ. ಫಿಕ್ಸಿಂಗ್ ಬೇಡಿಕೆಗಳಿಗೆ ಒಪ್ಪಲು ನಿರಾಕರಿಸಿದ್ದರಿಂದ ತನ್ನನ್ನು ಹತ್ಯೆ ಮಾಡಲು ಪ್ರಯತ್ನಿಸಲಾಗಿತ್ತು ಎಂದು ಮೋದಿ ಬಹಿರಂಗಪಡಿಸಿದ್ದಾರೆ. ಸುಮಾರು ಮೂರುವರೆ ಗಂಟೆಗಳ ಕಾಲ ನಡೆದ ಪಾಡ್‌ಕ್ಯಾಸ್ಟ್ ಚರ್ಚೆಯ ನಂತರ ಲಲಿತ್ ಮೋದಿ ಐಪಿಎಲ್ ಕುರಿತು ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಈ ವೇಳೆ ತಾವೇಕೆ ಭಾರತ ಬಿಟ್ಟು ಬಂದೆ, ಮ್ಯಾಚ್ ಫಿಕ್ಸಿಂಗ್ ಮತ್ತು ಭೂಗತ ಲೋಕದಿಂದ ಎದುರಿಸಿದ ಬೆದರಿಕೆಗಳ ಬಗ್ಗೆ ವ್ಯಾಪಕವಾಗಿ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮನ್ನ ವರದೇಶಕ್ಕೆ ಪಲಾಯನ ಮಾಡಿದ ಎಂಬ ಅಪವಾದವನ್ನ ಸ್ಪಷ್ಟವಾಗಿ ತಿರಸ್ಕರಿಸಿದ ಮೋದಿ, ಮೇ 2010 ರಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಿದ್ದಾಗಿ ತಿಳಿಸಿದ್ದಾರೆ.

ಕೊಲೆ ಬೆದರಿಕೆ 

ವಿಸ್ಡನ್ ಕ್ರಿಕೆಟ್‌ನ ಪಾಡ್‌ಕ್ಯಾಸ್ಟ್ ‘ದಿ ಸ್ಕೂಪ್’ನಲ್ಲಿ ಈ ಕುರಿತು ಮಾತನಾಡಿದ ಲಲಿತ್ ಮೋದಿ, ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಲು ನಿರಾಕರಿಸಿದ್ದಕ್ಕಾಗಿ ಅವರು ಎದುರಿಸಿದ ಬೆದರಿಕೆಗಳು ಮತ್ತು ಹತ್ಯೆಯ ಪ್ರಯತ್ನಗಳನ್ನು ವಿವರಿಸಿದ್ದಾರೆ. ಈ ಘಟನೆಗಳು ಅವರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದ ಅವರು, ಐಪಿಎಲ್‌ನಲ್ಲಿ ಪಂದ್ಯಗಳನ್ನು ಫಿಕ್ಸಿಂಗ್ ಮಾಡುವ ಪ್ರಯತ್ನಗಳನ್ನು ಸಹ ಉಲ್ಲೇಖಿಸಿದ್ದಾರೆ.

” ನನ್ನನ್ನು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿಸಲು ಪ್ರಯತ್ನಿಸಿದ ಛೋಟಾ ಶಕೀಲ್ ಮತ್ತು ದಾವೂದ್‌ನಂತಹ ವ್ಯಕ್ತಿಗಳು ನಂತರ ಗುರುನಾಥ್ ಮೇಯಪ್ಪನ್ ಜೊತೆಗೆ ಕೈಜೋಡಿಸಿದರು. ನಾನು ಅದಕ್ಕೆ ಸಹಕರಿಸಲು ನಿರಾಕರಿಸಿದ್ದರಿಂದ ಅವರು ನನ್ನನ್ನು ಬೆದರಿಸಲು ಶುರು ಮಾಡಿದರು. ಅವರು ನನ್ನ ಮಗನನ್ನು ಅಪಹರಿಸಿದರು. ಅವರು ಪ್ರಪಂಚದಾದ್ಯಂತ ನನ್ನನ್ನು ಕೊಲ್ಲಲು ಪ್ರಯತ್ನಿಸಿದರು. ಇವರು ಸಾಮಾನ್ಯ ವ್ಯಕ್ತಿಗಳಲ್ಲ” ಎಂದು ಲಲಿತ್ ಮೋದಿ ತಿಳಿಸಿದ್ದಾರೆ.

ಪರಾರಿಯಾಗಿಲ್ಲ, ಇಲ್ಲೆ ಸೆಟ್ಲ್ ಆಗಿದ್ದೇನೆ

ಲಲಿತ್ ಮೋದಿ ತಮ್ಮ ವಿರುದ್ಧ ಇಲ್ಲಿಯವರೆಗೆ ಯಾವುದೇ ಕಾನೂನು ಪ್ರಕರಣಗಳು ಬಾಕಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತಕ್ಕೆ ಮರಳಲು ಕಾನೂನು ಪ್ರಕರಣಗಳು ಕಾರಣವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಇಲ್ಲಿ ಚೆನ್ನಾಗಿ ನೆಲೆಸಿದ್ದೇನೆ. ನನ್ನ ವಿರುದ್ಧ ಎಲ್ಲಿಯೂ ಯಾವುದೇ ಪ್ರಕರಣಗಳು ಬಾಕಿ ಇಲ್ಲ. ಸಕ್ರಿಯ ಕಾನೂನು ಆರೋಪಗಳನ್ನು ಎದುರಿಸುತ್ತಿರುವಾಗ ವ್ಯಕ್ತಿಯನ್ನ ‘ಪರಾರಿ’ ಎಂದು ಪರಿಗಣಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ಎನ್. ಶ್ರೀನಿವಾಸನ್ ಸಲ್ಲಿಸಿದ ಒಂದೇ ಒಂದು ಎಫ್‌ಐಆರ್ ಹೊರತುಪಡಿಸಿ, ಅವರ ವಿರುದ್ಧ ಬೇರೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಅವರು ಹೇಳಿದರು. ಯಾವುದೇ ಸರ್ಕಾರಿ ಸಂಸ್ಥೆ ತನ್ನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೋದಿ ವಿವರಿಸಿದ್ದಾರೆ. ತಾವೂ ತಮ್ಮ ಎಲ್ಲಾ ತೆರಿಗೆಗಳನ್ನು ಪಾವತಿಸಿರುವುದಾಗಿ ಮತ್ತು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಅವರು ಇನ್ನೂ ಭಾರತದಲ್ಲಿ ಗಮನಾರ್ಹ ವ್ಯಾಪಾರ ಹಿತಾಸಕ್ತಿಗಳನ್ನು ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

ಲಲಿತ್ ಮೋದಿ, ತಮ್ಮ ಮಕ್ಕಳು ಪ್ರಸ್ತುತ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ತಾವೂ ಐಪಿಎಲ್ ಅಥವಾ ಬಿಸಿಸಿಐ ಜೊತೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ವ್ಯವಹಾರಕ್ಕೆ ಮರಳುವ ಬಗ್ಗೆ ಮಾತನಾಡಿದ ಲಲಿತ್ ಮೋದಿ ಅವರು ನಿವೃತ್ತಿ ವಯಸ್ಸನ್ನು ದಾಟಿದ್ದೇನೆ. ಈಗಾಗಲೇ ತಮ್ಮ ಮಕ್ಕಳಿಗೆ ಕುಟುಂಬದ ಆಸ್ತಿಗಳನ್ನು ಹಸ್ತಾಂತರಿಸಿದ್ದೇನೆ ಎಂದು ಹೇಳಿದ್ದಾರೆ.

ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ಇದೆ, ಐಪಿಎಲ್‌ನಲ್ಲಿ ಇಲ್ಲ

” ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಅಸ್ತಿತ್ವದಲ್ಲಿದೆ, ಮತ್ತು ಅದು ಬಹಳ ಅತ್ಯಾಧುನಿಕ ಮಟ್ಟಕ್ಕೆ ವಿಕಸನಗೊಂಡಿದೆ. ಅದು ಐಪಿಎಲ್‌ನಲ್ಲಿ ನಡೆಯುತ್ತಿದೆಯೋ ಇಲ್ಲವೋ ನನಗೆ ತಿಳಿದಿಲ್ಲ. ನನಗೆ ವೈಯಕ್ತಿಕವಾಗಿ ಹಾಗೆ ಅನಿಸುವುದಿಲ್ಲ, ಆದರೆ ನನಗೆ ನಿರ್ದಿಷ್ಟ ಮಾಹಿತಿಯ ಕೊರತೆಯಿರುವುದರಿಂದ, ನಾನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇದು ಬೇರೆಡೆ ಅಸ್ತಿತ್ವದಲ್ಲಿದೆ ಎಂದು ನನಗೆ ಸಂಪೂರ್ಣವಾಗಿ ತಿಳಿದಿದೆ. ಆದರೆ, ಐಪಿಎಲ್‌ನಲ್ಲಿ ಅದು ನಡೆಯುತ್ತಿದೆ ಎಂದು ನಾನು ನಂಬುವುದಿಲ್ಲ. ಆಟಗಾರರು ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಯಾವುದೇ ಪ್ರೋತ್ಸಾಹಿಸುವುದಿಲ್ಲ, ಏಕೆಂದರೆ ಇದರಲ್ಲಿ ಸಿಕ್ಕಿಬಿದ್ದರೆ ಅವರು ತುಂಬಾ ನಷ್ಟ ಅನುಭವಿಸಬೇಕಾಗುವ ಸಾಧ್ಯತೆಯಿದೆ ಎಂದು ಲಲಿತ್ ಮೋದಿ ತಿಳಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Lalit Modi: ನಾನು ದೇಶಬಿಡಲು ಅದೇ ಕಾರಣ: ಮ್ಯಾಚ್ ಫಿಕ್ಸಿಂಗ್, ಕಿಡ್ನಾಪ್, ಜೀವ ಬೆದರಿಕೆ ಸೇರಿ ಐಪಿಎಲ್ ಕುರಿತು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ ಲಲಿತ್ ಮೋದಿ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed