Krishi Thapanda: ‘ಜಾಸ್ತಿ ತಲೆ ಹಾಕ್ಬೇಡ’! ಕೊರಿಯರ್​ನಲ್ಲಿ ಹೋಗಿತ್ತು ಬೆದರಿಕೆ ಪತ್ರ | Vaishakh sent threat letter to aravind reddy about Krishi Thapanda | | ACTPnews

ವೈಶಾಖ್-ಕೃಷಿ-ಅರವಿಂದ್ ರೆಡ್ಡಿ


Last Updated:

Krishi Thapanda: ನಟಿ ಕೃಷಿ ತಾಪಂಡ ವಿಚಾರವಾಗಿ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ್ದನಾ ವೈಶಾಖ್? ಬೆದರಿಕೆ ಪತ್ರದಲ್ಲಿ ಏನಿತ್ತು? ಕೊರಿಯರ್ ಮಾಡಿದ್ಯಾರು?

ವೈಶಾಖ್-ಕೃಷಿ-ಅರವಿಂದ್ ರೆಡ್ಡಿ
ವೈಶಾಖ್-ಕೃಷಿ-ಅರವಿಂದ್ ರೆಡ್ಡಿ

ಉದ್ಯಮಿ ಹಾಗೂ ನಟಿ ಕೃಷಿ ತಾಪಂಡ (Krishi Thapanda) ಅವರ ಸ್ನೇಹಿತ ವೈಶಾಖ್ (Vaishakh) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಟ್ವಿಸ್ಟ್​ಗಳು ಸಿಗುತ್ತಲೇ ಹೋಗುತ್ತಿದೆ. ಈ ಹಿಂದೆ ಅರವಿಂದ್ ರೆಡ್ಡಿ ಹಾಗೂ ಕೃಷಿ ತಾಪಂಡ ಬ್ರೇಕಪ್ ಕಿರಿಕ್ ನಂತರ ವೈಶಾಖ್ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ್ದರು ಎನ್ನುವುದು ಗೊತ್ತಾಗಿದ್ದು ಈಗ ಬೆದರಿಕೆ ಪತ್ರದ ಬಗ್ಗೆಯೂ ಮಾಹಿತಿ ರಿವೀಲ್ ಆಗಿದೆ.

ವೈಶಾಕ್ ವಿರುದ್ಧ ಪತ್ರದ ಮೂಲಕ ಉದ್ಯಮಿಗೆ ಎವಿಆರ್ ಬೆದರಿಕೆ ಹಾಕಿದ್ದ ಆರೋಪ ಕೇಳಿ ಬಂದಿತ್ತು. ಕೃಷಿ ತಪಂಡಾ ಕೇಸ್ ನಲ್ಲಿ ಜಾಸ್ತಿ ತಲೆ ಹಾಕಬೇಡ. ಈ ಕೇಸನ್ನ ಇಲ್ಲಿಗೇ ಬಿಟ್ಟುಬಿಡಬೇಕು ಎಂದು ಬೆದರಿಸಿದ್ದರು ಎನ್ನಲಾಗಿದೆ.

7 ಕೋಟಿ ಕೊಡು!

ಅಲ್ಲದೇ 6-7 ಕೋಟಿ ಕ್ಯಾಶ್ ಹಣ ಕೊಡಬೇಕು. ಇಲ್ಲವಾದರೆ ಗಂಭೀರ ಪರಿಣಾಮ‌ ಎದುರಿಸಬೇಕಾಗುತ್ತೆ ಎಂದು ವೈಶಾಖ್ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ್ದ ವೈಶಾಕ್ ವಿರುದ್ಧಈ ಸಂಬಂಧ ಹೆಚ್ ಎಎಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎವಿಆರ್ ದೂರು ನೀಡಿದ್ದರು.

ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಹೆಚ್ ಹೆಚ್ಎಲ್ ಪೊಲೀಸರು ತನಿಖೆ ವೇಳೆ ವೈಶಾಕ್ ಕೊರಿಯರ್ ಮೂಲಕ ಬೆದರಿಕೆ ಹಾಕಿರೋದು ಗೊತ್ತಾಗಿ ಅವರನ್ನು ಕೃಷಿ ತಪಂಡಾ ಅಪಾರ್ಟ್ಮೆಂಟ್ ನಿಂದಲೇ ಅರೆಸ್ಟ್ ಮಾಡಿದ್ದರು.

ಇದೇ ಅಪಾರ್ಟ್ಮೆಂಟ್​ನಿಂದ ವೈಶಾಖ್​ನನ್ನು ಹೆಚ್ ಎ ಎಲ್ ಪೊಲೀಸರು ಅರೆಸ್ಟ್ ಮಾಡಿದ್ದರು. ಫೆಬ್ರವರಿಯಲ್ಲಿ ಆರೋಪಿಯನ್ನ ಬಂಧಿಸಿದ್ದ ಹೆಚ್ ಹೆಚ್ ಎಎಲ್ ಪೊಲೀಸರು ಕ್ರಮ ಕೈಗೊಂಡಿದ್ದರು. ನಂತರ ವೈಶಾಖ್ ಬೇಲ್ ಪಡೆದು ಬಿಡುಗಡೆಯಾಗಿದ್ದರು.

ಇದನ್ನೂ ಓದಿ: Krishi Thapanda: ಅರವಿಂದ್​ ರೆಡ್ಡಿಗೆ ಬೆದರಿಕೆ ಹಾಕಿದ್ದ ವೈಶಾಖ್! ಆಮೇಲಾಗಿದ್ದೇನು?

ಜೈಲಿನಿಂದ ಬಂದಮೇಲೆ ಮನೆಯಲ್ಲಿ ಜಗಳ ನಡೆದಿದ್ದು ವೈಶಾಕ್ ಹಾಗೂ ಪತ್ನಿ ಜೊತೆ ಆಗಾಗ ಜಗಳ ಆಗುತ್ತಿತ್ತು. ಇದರಿಂದ ವೈಶಾಖ್ ಡಿಪ್ರೆಶನ್​ಗೆ ಒಳಗಾಗಿದ್ದರು ಎನ್ನಲಾಗಿದೆ. ಒಂದು ವಾರದಿಂದ ಕೃಷಿ ತಪಂಡ ಅಪಾರ್ಟ್ಮೆಂಟ್ ನಲ್ಲಿ ತಂಗಿದ್ದ ವೈಶಾಖ್ ಜೂನ್ 24ರಂದು ರಾತ್ರಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರದಿ: ಮಾದೇಶ ಸಿಎನ್, ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports