Last Updated:
ಉದ್ಯಮಿ ವೈಶಾಕ್ ನಟಿ ಕೃಷಿ ತಾಪಂಡ ನಿವಾಸದ ಬೆಡ್ರೂಮ್ನಲ್ಲಿ ಸಾವು, ಪತ್ನಿ ಮೇಘನಾ ದೂರಿನಲ್ಲಿ ಕೃಷಿ ತಾಪಂಡ ಜೊತೆ ಸಂಬಂಧ ಆರೋಪ, ಆತ್ಮಹತ್ಯೆ ಕಾರಣ ಗೊತ್ತಿಲ್ಲ, ಆರ್.ಆರ್. ನಗರ ಪೊಲೀಸರು ಅಸಹಜ ಸಾವು ತನಿಖೆ ಮುಂದುವರೆಸಿದ್ದಾರೆ
ನಟಿ ಕೃಷಿ ತಾಪಂಡ (Krishi Thapanda) ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತಪಟ್ಟಿರುವ ಪ್ರಕರಣ ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಶಾಕ್ ಪತ್ನಿ ಮೇಘನಾ ಆರ್.ಆರ್. ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರತಿ ಇದೀಗ ಲಭ್ಯವಾಗಿದ್ದು, ಅದರಲ್ಲಿ ಹಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. ದೂರಿನಲ್ಲಿ ಪತಿ ಹಾಗೂ ನಟಿ ಕೃಷಿ ತಾಪಂಡ ನಡುವೆ ಸಂಬಂಧವಿತ್ತು, ಆದ್ರೆ ನನ್ನ ಪತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಎಂದು ನನಗೆ ಗೊತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಉದ್ಯಮಿ ವೈಶಾಕ್ , ನಟಿ ಕೃಷಿ ತಾಪಂಡ ವಾಸಿಸುತ್ತಿದ್ದ ಬೆಂಗಳೂರಿನ ಆರ್.ಆರ್. ನಗರದ ಅಪಾರ್ಟ್ಮೆಂಟ್ನ ಬೆಡ್ರೂಮ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ವರದಿ ಪ್ರಕಾರ ಈ ಪ್ರಕರಣದ ಕುರಿತು ಪತ್ನಿ ಮೇಘನಾ ನೀಡಿರುವ ದೂರಿನಲ್ಲಿ, ತಾವು ಮತ್ತು ವೈಶಾಕ್ 2010ರ ಅಕ್ಟೋಬರ್ 11ರಂದು ವಿವಾಹವಾಗಿದ್ದು, ದಾಂಪತ್ಯ ಜೀವನ ಆರಂಭದಲ್ಲಿ ಸುಗಮವಾಗಿತ್ತು ಎಂದು ಉಲ್ಲೇಖಿಸಿದ್ದಾರೆ. ವೈಶಾಕ್ ಅವರು ಶ್ರೀ ಅಡಿಗ ಆಟೋಮೋಟೀವ್ಸ್ ಸಂಸ್ಥೆಯ ಮಾಲೀಕರಾಗಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮೇಘನಾ ದೂರಿನ ಪ್ರಕಾರ, ಬಳಿಕವೂ ಆ ಸಂಬಂಧ ಮುಂದುವರಿದಿತ್ತು ಎಂದು ಅವರು ಆರೋಪಿಸಿದ್ದಾರೆ. ಈ ವಿಚಾರವಾಗಿ ತಾವು ಹಾಗೂ ಕುಟುಂಬದವರು ವೈಶಾಕ್ ಅವರೊಂದಿಗೆ ಹಲವು ಬಾರಿ ಮಾತನಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ವೈಶಾಕ್ ಮನೆಗೆ ಬರುತ್ತಿರಲಿಲ್ಲ ಹಾಗೂ ದೂರವಾಣಿ ಮೂಲಕವೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಮೇಘನಾ ತಿಳಿಸಿದ್ದಾರೆ.
ಅದೇ ದಿನ ರಾತ್ರಿ ಸುಮಾರು 10.30ರ ವೇಳೆಗೆ ಆರ್.ಆರ್. ನಗರ ಪೊಲೀಸರು ವೈಶಾಕ್ ಅವರ ತಂದೆಗೆ ಕರೆ ಮಾಡಿ, ವೈಶಾಕ್ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಕುಟುಂಬದವರು ಸ್ಥಳಕ್ಕೆ ತೆರಳಿದಾಗ ವೈಶಾಕ್ ಮಂಚದ ಮೇಲೆ ಮಲಗಿರುವ ಸ್ಥಿತಿಯಲ್ಲಿ ಕಂಡುಬಂದರು ಎಂದು ಹೇಳಲಾಗಿದೆ.
ಮೇಘನಾ ತಮ್ಮ ದೂರಿನಲ್ಲಿ, ಪತಿ ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡರು ಎಂಬುದು ತಿಳಿದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ, ಸಾವಿನ ಬಗ್ಗೆ ಯಾರ ಮೇಲೂ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಸಾವಿನ ನಿಖರ ಕಾರಣ ಬಹಿರಂಗವಾಗಬೇಕಿರುವುದರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಆರ್.ಆರ್. ನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
Bangalore [Bangalore],Bangalore,Karnataka













