Krishi Thapanda: ಈ ಒಂದು ಕಾರಣಕ್ಕೆ ಕೃಷಿ ತಾಪಂಡ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ್ರಾ ವೈಶಾಕ್? ಉದ್ಯಮಿ ಸಾವಿನ ಸೀಕ್ರೆಟ್​ ರಿವೀಲ್ | | ACTPnews

News18


Last Updated:

ಕೃಷಿ ಮನೆಯಲ್ಲೇ ಉದ್ಯಮಿ ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಅನ್ನೋ ಅನುಮಾನವಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಇದೇ ವೇಳೆ ನಟಿ ಕೃಷಿ ತಾಪಂಡ ಕೆಲ ಮಹತ್ವದ ವಿಚಾರಗಳನ್ನ ಪೊಲೀಸರಿಗೆ ತಿಳಿಸಿದ್ದಾರೆ. ವೈಶಾಕ್ ಸಾವಿಗೆ ಈ ಒಂದು ವಿಚಾರವೇ ಕಾರಣನಾ?

News18
News18

ಬೆಂಗಳೂರು (ಜು.06): ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಸ್ನೇಹಿತ ಹಾಗೂ ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ನಟಿಯ ಮನೆಯಲ್ಲೇ ವೈಶಾಕ್ ಆತ್ಮಹತ್ಯೆ (Vaishak Suicide) ಮಾಡಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ನಾನಾ ಅನುಮಾನಗಳನ್ನ ಹುಟ್ಟು ಹಾಕಿತ್ತು. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ವೈಶಾಕ್ ಸಾವಿನ ಹಿಂದಿನ ಕಾರಣ ಪತ್ತೆ ಹಚ್ಚಲು (Police Case) ಮುಂದಾಗಿದ್ದಾರೆ. ತನಿಖೆ ವೇಳೆ ಕೆಲ ಮಹತ್ವದ ವಿಚಾರಗಳು ಬಯಲಾಗಿದೆ. 

ಕೃಷಿ ತಾಪಂಡ ಮನೆಯಲ್ಲೇ ಸೂಸೈಡ್ ಯಾಕೆ?

ಹೆಂಡ್ತಿ-ಮಕ್ಕಳು, ಅಪ್ಪ-ಅಮ್ಮ ಇದ್ರೂ ಉದ್ಯಮಿ ವೈಶಾಕ್​ ಸ್ನೇಹಿತೆ ಕೃಷಿ ತಾಪಂಡ ಮನೆಯಲ್ಲೇ ನೆಲೆಸಿದ್ದ ಎನ್ನಲಾಗ್ತಿದೆ. ವಾರಗಳಿಂದ ನಟಿ ಮನೆಯಲ್ಲೇ ಇದ್ದ ವೈಶಾಕ್ ಬಳಿ ಕೂಡ ಮನೆಯ ಒಂದು ಕೀ ಇತ್ತು. ಮನೆಯಲ್ಲಿ ನಟಿ ಕೃಷಿ ಇಲ್ಲದ ವೇಳೆ ವೈಶಾಕ್​ ಸಾವಿಗೆ ಶರಣಾಗಿದ್ದು, ಬಳಿಕ ಮನೆಗೆ ಬಂದು ನೋಡಿ ನಟಿಯೇ ಸೀರೆ ಕಟ್​ ಮಾಡಿ ಆತನ ಮೃತದೇಹವನ್ನ ಕೆಳಗೆ ಇಳಿಸಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ಸಹ ನೀಡಿದ್ರು. ಕೃಷಿ ಮನೆಯಲ್ಲೇ ಉದ್ಯಮಿ ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಅನ್ನೋ ಅನುಮಾನವಿದೆ.

ಈ ಒಂದು ಕಾರಣಕ್ಕೆ ಆತ್ಮಹತ್ಯೆಗೆ ಶರಣರಾದ್ರಾ ವೈಶಾಕ್​?

ಪೊಲೀಸರು ವೈಶಾಕ್​ ಸಾವಿನ ಬಗ್ಗೆ ತನಿಖೆ ನಡೆಸಿದ್ದು, ಈ ವೇಳೆ ನಟಿ ಕೃಷಿ ತಾ‌ಪಂಡ ಅವರಿಂದ ಕೆಲ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಉದ್ಯಮಿ ವೈಶಾಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ಆರ್ಥಿಕ ಸಂಕಷ್ಟದಿಂದಲೇ ವೈಶಾಕ್​ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗ್ತಿದೆ. ಈ ಒಂದು ವಿಚಾರಕ್ಕೆ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಎನ್ನುವ ಅನುಮಾನ ದಟ್ಟವಾಗಿದೆ.

ಸ್ನೇಹಿತನಿಗೆ ತಾನೇ ಹಣ ಕೊಡ್ತಿದ್ದ ಕೃಷಿ ತಾಪಂಡ

ಆರ್ಥಿಕ ಸ್ಥಿತಿಗತಿ ಕೆಟ್ಟಿದ್ದ ಹಿನ್ನೆಲೆ ಸ್ನೇಹಿತ ವೈಶಾಕ್​​ಗೆ ಆಗಾಗ ನಟಿ ಕೃಷಿ ತಾಪಂಡ ಅವರೇ ಹಣ ನೀಡುತ್ತಿದ್ದರಂತೆ. ಒಮ್ಮೊಮ್ಮೆ 40-50 ಸಾವಿರ ಹಣ ವರ್ಗಾವಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ನಟಿಯೇ ಕೆಲ ದಾಖಲೆಗಳನ್ನ ಸಹ ತೋರಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳೋ ಕೆಲ ದಿನಗಳಿಂದಲೂ ಕೃಷಿ ತಾಪಂಡ ಫ್ಲಾಟ್ ನಲ್ಲಿಯೇ ವೈಶಾಕ್​ ವಾಸವಾಗಿದ್ದ ಎನ್ನಲಾಗ್ತಿದೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed