Krishi Thapanda: ಗೆಳೆಯ ವೈಶಾಕ್ ಸಾವಿನ ಬಳಿಕ ಕೃಷಿ ತಾಪಂಡ ಫಸ್ಟ್ ರಿಯಾಕ್ಷನ್! ಆ ಒಂದು ಘಟನೆ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ? | | ACTPnews

ಕೃಷಿ ತಾಪಂಡ


Last Updated:

ಉದ್ಯಮಿ ವೈಶಾಖ್ ಸಾವಿನ ಪ್ರಕರಣದ ತನಿಖೆ ವಿವಿಧ ಆಯಾಮಗಳಲ್ಲಿ ಸಾಗುತ್ತಿರುವ ಬೆನ್ನಲ್ಲೇ, ಈ ಪ್ರಕರಣದಲ್ಲಿ ಕೃಷಿ ತಾಪಂಡ ಹೆಸರು ಕೂಡ ಪ್ರಸ್ತಾಪವಾಗಿತ್ತು. ಇದೀಗ ಈ ಎಲ್ಲಾ ವಿಚಾರವಾಗಿ ನಟಿ ರಿಯಾಕ್ಷನ್ ನೀಡಿದ್ದಾರೆ.

 ಕೃಷಿ ತಾಪಂಡ
ಕೃಷಿ ತಾಪಂಡ

ಇತ್ತೀಚಿಗೆ ಸ್ಯಾಂಡಲ್ ವುಡ್ ನಟಿ ಕೃಷಿ ತಾಪಂಡ (Krishi Thapanda) ವಾಸವಿದ್ದ ಅಪಾರ್ಟ್‌ಮೆಂಟ್​​ನಲ್ಲಿ ಅವರ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಸಂಜೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಎಲ್ಲಾ ಬೆಳವಣಿಗೆಯ ಬಳಿಕ ಇದೀಗ ನಟಿ ಕೃಷಿ ತಾಪಂಡ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ಉದ್ಯಮಿ ವೈಶಾಖ್ ಸಾವಿನ ಪ್ರಕರಣದ ತನಿಖೆ ವಿವಿಧ ಆಯಾಮಗಳಲ್ಲಿ ಸಾಗುತ್ತಿರುವ ಬೆನ್ನಲ್ಲೇ, ಈ ಪ್ರಕರಣದಲ್ಲಿ ಕೃಷಿ ತಾಪಂಡ ಹೆಸರು ಕೂಡ ಪ್ರಸ್ತಾಪವಾಗಿತ್ತು. ಇದೀಗ ಈ ಎಲ್ಲಾ ವಿಚಾರವಾಗಿ ನಟಿ ರಿಯಾಕ್ಷನ್ ನೀಡಿದ್ದಾರೆ.

ನಟಿ ಕೃಷಿ ತಾಪಂಡ ಹೇಳಿದ್ದೇನು?

ಕಳೆದ ಕೆಲವು ದಿನಗಳು ನಾನು ಎಂದಿಗೂ ಊಹಿಸದ ರೀತಿಯಲ್ಲಿ ನನ್ನ ಜೀವನವನ್ನು ಬದಲಾಯಿಸಿವೆ. ಜೊತೆಗೆ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ವ್ಯಕ್ತಿಯೊಬ್ಬರನ್ನು ನಾನು ಕಳೆದುಕೊಂಡಿದ್ದೇನೆ. ಯಾವಾಗಲೂ ನನ್ನ ಜೊತೆಗಿದ್ದು, ನನ್ನನ್ನು ರಕ್ಷಿಸಿ, ಕೇವಲ ಪ್ರೀತಿಯಿಂದ ನನ್ನನ್ನು ನೋಡಿಕೊಂಡ ವ್ಯಕ್ತಿ ಅವರು. ಅವರನ್ನು ಕಳೆದುಕೊಂಡಿರುವುದು ಮಾತುಗಳಲ್ಲಿ ವಿವರಿಸಲಾಗದ ನೋವನ್ನು ಉಂಟು ಮಾಡಿದೆ. ಈ ನಷ್ಟವನ್ನು ಒಪ್ಪಿಕೊಂಡು ನಾನು ಸಹಜ ಸ್ಥಿತಿಗೆ ಬರಲು ಸಾಧ್ಯವೇ ಎಂದು ನನಗೆ ತಿಳಿಯುತ್ತಿಲ್ಲ ಎಂದು ನಟಿ ಕೃಷಿ ತಮ್ಮ ನೋವನ್ನು ವ್ಯಕ್ತ ಪಡಿಸಿದ್ದಾರೆ.

ನಾನು ಕೈಮುಗಿದು ಪ್ರತಿಯೊಬ್ಬರಲ್ಲೂ ವಿನಂತಿಸುತ್ತೇನೆ, ದಯವಿಟ್ಟು ಅವರಿಗೆ ಶಾಂತಿಯಿಂದ ವಿಶ್ರಮಿಸಲು ಬಿಡಿ (let him rest in peace) ಮತ್ತು ಅವರ ಕುಟುಂಬ, ಅವರ ಸ್ನೇಹಿತರು ಹಾಗೂ ನಮ್ಮೆಲ್ಲರಿಗೂ ನೆಮ್ಮದಿಯಿಂದ ದುಃಖಿಸಲು ಬಿಡಿ. ದಯವಿಟ್ಟು ಕಿಂಚಿತ್ತು ಮಾನವೀಯತೆ ತೋರಿಸಿ ಎಂದು ನಟಿ ಕೃಷಿ ತಾಪಂಡ ಹೇಳಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed